ETV Bharat / state

ಆಡಳಿತದಲ್ಲಿ ಯಡಿಯೂರಪ್ಪ ಸಾಧನೆ ಶೂನ್ಯ: ಬಡಗಲಪುರ ನಾಗೇಂದ್ರ - ಕೊರೊನಾ ಎರಡನೇ ಅಲೆ

ಕೊರೊನಾ ಎರಡನೇ ಅಲೆ ವ್ಯಾಪಿಸುತ್ತಿದ್ದಾಗ ರೈತರಿಗೆ ಸಂಕಷ್ಟ ಎದುರಾಗಿದೆ, ಆಡಳಿತದಲ್ಲಿ ಯಡಿಯೂರಪ್ಪ ಸಾಧನೆ ಶೂನ್ಯ. ಬಿಜೆಪಿಯಲ್ಲಿ ಯಾರೇ ಅಧಿಕಾರದಲ್ಲಿದ್ದರೂ, ಅದು ರೈತರಿಗೆ ಪ್ರಯೋಜನವಿಲ್ಲ ಎಂದು ಬಡಗಲಪುರ ನಾಗೇಂದ್ರ ಅಸಮಾಧಾನ ಹೊರ ಹಾಕಿದ್ದಾರೆ.

nagendra
nagendra
author img

By

Published : Jun 7, 2021, 8:13 PM IST

ಮೈಸೂರು: ಅಭಿವೃದ್ಧಿ ಶೂನ್ಯ ಮುಖ್ಯಮಂತ್ರಿ ಯಡಿಯೂರಪ್ಪ ಹೀಗಾಗಿ, ರಾಜ್ಯದ ಜನರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆರೋಪಿಸಿದ್ರು.

ಜಲದರ್ಶಿನಿ ಸರ್ಕಾರಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹೈಕಮಾಂಡ್ ಸೂಚಿಸಿದ್ರೆ ರಾಜೀನಾಮೆ ನೀಡಲು ಸಿದ್ಧ ಎಂದು ಯಡಿಯೂರಪ್ಪ ಹೇಳಿದ್ದಾರೆ. ಈಗ ಯಡಿಯೂರಪ್ಪ ಅವರಿಗೆ ಪಕ್ಷದಲ್ಲಿ ಹಿಡಿತ ಇಲ್ಲವಾಗಿದೆ. ಅದು ವಯಸ್ಸಿನ ಕಾರಣ ಇರಬಹುದು, ಅಥವಾ ಪಕ್ಷದಲ್ಲಿ ಹಿಡಿತ ಇಲ್ಲದಿರಬಹುದು. ಆದರೆ, ರಾಜೀನಾಮೆ ಕೊಡುತ್ತೇನೆ ಎಂಬ ಹೇಳಿಕೆ ನೀಡುತ್ತಾರೆ ಅಂದರೆ ಇವರು ಅಸಮರ್ಥರು ಎಂದು ಕಿಡಿಕಾರಿದರು.

ಯಡಿಯೂರಪ್ಪ ಆಡಳಿತ ಸಮಯದಲ್ಲಿ ಭೂ ಸುಧಾರಣಾ ಕಾಯ್ದೆ ಜಾರಿಯಾಗಿದ್ದು, ಬೇಸರವಾಗಿದೆ. ರೈತರ ಸಮಸ್ಯೆಗಳನ್ನ ಕೇಳ್ತಿದ್ರು, ಆದರೆ ಒಂದು ಸಮಸ್ಯೆಗೂ ಪರಿಹಾರ ಸಿಗ್ತಿರ್ಲಿಲ್ಲ. ವೈಯಕ್ತಿಕವಾಗಿ ಯಡಿಯೂರಪ್ಪ ಮೇಲೆ ಗೌರವವಿದೆ. ಆದರೆ, ಆಡಳಿತದಲ್ಲಿ ಯಡಿಯೂರಪ್ಪ ಸಾಧನೆ ಶೂನ್ಯ. ಬಿಜೆಪಿಯಲ್ಲಿ ಯಾರೇ ಅಧಿಕಾರದಲ್ಲಿದ್ದರೂ, ಅದು ರೈತರಿಗೆ ಪ್ರಯೋಜನವಿಲ್ಲ ಎಂದು ಹೇಳಿದರು.

ಕೃಷಿ ಸಚಿವರು ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿ ಎಲ್ಲ ಕಡೆ ಬಂದು ಹೋದರು. ಕೊರೊನಾ ಎರಡನೇ ಅಲೆ ವ್ಯಾಪಿಸುತ್ತಿದ್ದಾಗ ರೈತರಿಗೆ ಸಂಕಷ್ಟ ಎದುರಾಗಿದೆ, ಈಗ ಅನ್ನದಾತರೊಂದಿಗೆ ನಿಲ್ಲದೇ ನಾಪತ್ತೆಯಾಗಿದ್ದಾರೆ. ಹುಡುಕಿ ಕೊಟ್ಟವರಿಗೆ ಸೂಕ್ತ ಬಹುಮಾನ ಕೊಡುತ್ತೇವೆ ಎಂದರು‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.