ETV Bharat / state

ಬೈಕ್​ ಸವಾರ ಸಾವು ಪ್ರಕರಣ : ಪೊಲೀಸರ ಮೇಲೆ ಹಲ್ಲೆ ಮಾಡಿದ 8 ಜನರ ಬಂಧನ

ಸರ್ಕಾರಿ ವಾಹನ ಧ್ವಂಸ, ಕರ್ತವ್ಯಕ್ಕೆ ಅಡ್ಡಿ ಆರೋಪದ ಅಡಿ 3 ದೂರುಗಳನ್ನು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ಹಲ್ಲೆ ಮಾಡಿದ 8 ಜನರನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ..

8 people arrested in mysore
ಪೊಲೀಸರ ಮೇಲೆ ಹಲ್ಲೆ ಮಾಡಿದ 8 ಜನರ ಬಂಧನ
author img

By

Published : Mar 23, 2021, 4:37 PM IST

ಮೈಸೂರು : ಸಂಚಾರಿ ಪೊಲೀಸರ ಮೇಲೆ ರೊಚ್ಚಿಗೆದ್ದ ಜನರು ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯನಗರ ಪೊಲೀಸರು 8 ಜನರನ್ನು ಬಂಧಿಸಿದ್ದಾರೆ.

ಸೋಮವಾರ ಸಂಜೆ ಬೋಗಾದಿ ಬಳಿಯ ರಿಂಗ್ ರಸ್ತೆಯಲ್ಲಿ ಸಂಚಾರಿ ಪೊಲೀಸರು ತಪಾಸಣೆ ನಡೆಸುತ್ತಿದ್ದರು. ಈ ವೇಳೆ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಬೈಕ್ ಸವಾರ ದೇವರಾಜ್ ಯು-ಟರ್ನ್ ತೆಗೆದುಕೊಂಡಿದ್ದು ಹಿಂಬದಿಯಿಂದ ಬರುತ್ತಿದ್ದ ಟಿಪ್ಪರ್​​ಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದ.

ಹಿಂಬದಿ ಸವಾರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅಪಘಾತಕ್ಕೆ ಸಂಚಾರಿ ಪೊಲೀಸರೇ ಕಾರಣ ಎಂದು ಸಾರ್ವಜನಿಕರು ಪೊಲೀಸರ ಮೇಲೆ ಹಲ್ಲೆ ಮಾಡಿ ಗರುಡ ವಾಹನವನ್ನು ಧ್ವಂಸಗೊಳಿಸಿದ್ದರು.

ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಎಎಸ್​​ಐ ಮಾದೇಗೌಡ ಕಾನ್ಸ್​​ಸ್ಟೇಬಲ್ ಮಂಜು ಮತ್ತು ಸ್ವಾಮಿ ನಾಯಕ್ 3 ಪ್ರತ್ಯೇಕ ದೂರುಗಳಲ್ಲಿ ಸರ್ಕಾರಿ ವಾಹನ ಧ್ವಂಸ, ಕರ್ತವ್ಯಕ್ಕೆ ಅಡ್ಡಿ ಆರೋಪದ ಅಡಿ 3 ದೂರುಗಳನ್ನು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ಹಲ್ಲೆ ಮಾಡಿದ 8 ಜನರನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.

ಓದಿ: ಪೊಲೀಸ್​ ಲಾಠಿ ಸಿಲುಕಿ ಬೈಕ್​ ಸವಾರ ಸಾವು: ರೊಚ್ಚಿಗೆದ್ದ ಸಾರ್ವಜನಿಕರಿಂದ ಪೊಲೀಸರಿಗೆ ಧರ್ಮದೇಟು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.