ETV Bharat / state

ಮೈಸೂರು ವಿವಿಯಿಂದ ಪಿಹೆಚ್​ಡಿ ಪಡೆದ ಅಸ್ಸೋಂ ಮೂಲದ ಬುಡಕಟ್ಟು ಯುವತಿ - mysore latest news

ಬೆಂಗಳೂರಿನ ಸಿಎಂಆರ್ ಕಾಲೇಜಿನಲ್ಲಿ 2015ರಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಶಿಕ್ಷಣ ಪೂರೈಸಿದ ಇವರು, ‌2016ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಎನ್.ಮಮತಾ ಅವರ ಮಾರ್ಗದರ್ಶನದಲ್ಲಿ ಪಿಹೆಚ್‌ಡಿ ಆರಂಭಿಸಿದ್ದ ಡಿಕಿಲಾ,ಈಗ ಪಿಹೆಚ್​ಡಿ ಪೂರ್ಣಗೊಳಿಸಿ ಡಾ.ಡಿಕಿಲಾ ಆಗಿದ್ದಾರೆ.

tribal girl got a PhD from Mysore vv
ಮೈಸೂರು ವಿವಿಯಿಂದ ಪಿಹೆಚ್​ಡಿ ಪಡೆದ ಅಸ್ಸೋಂ ಮೂಲದ ಬುಡಕಟ್ಟು ಯುವತಿ
author img

By

Published : Mar 9, 2021, 4:29 AM IST

ಮೈಸೂರು: ವಿಶ್ವವಿಖ್ಯಾತ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅಸ್ಸೋಂ ಮೂಲದ ಬುಡಕಟ್ಟು ಯುವತಿ ಪಿಹೆಚ್​ಡಿ ಪಡೆದುಕೊಂಡಿದ್ದಾರೆ.

ಭುಟಿಯಾ ಎಂಬ ಬುಡಕಟ್ಟು ಜನರಲ್ಲಿ ಪಿಹೆಚ್​ಡಿ ಪಡೆದ ಮಹಿಳೆ ಎಂಬ ಹೆಗ್ಗಳಿಕೆ ಗಳಿಸಿದ್ದಾರೆ. ದಕ್ಷಿಣ ಸಿಕ್ಕಿಂ ಜಿಲ್ಲೆಯ ರವಾಂಗ್ಲನ ನಿವಾಸಿಗಳಾದ ಛಾತುಕ್ ಭುಟಿಯಾ, ತಾಯಿ ಯಂಗ್ ಜೂನ್ ದಂಪತಿ ಪುತ್ರಿ ಡಿಕಿಲಾ‌ ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದಿಂದ ಡಾ.ಎನ್.ಮಮತಾ ಅವರ ಮಾರ್ಗದರ್ಶನದಲ್ಲಿ 'ನ್ಯೂಸ್ ಪೇಪರ್ ಅಂಡ್ ಡೆಮಾಕ್ರಸಿ ಇನ್ ದ ಸ್ಟೇಟ್ ಆಫ್ ಸಿಕ್ಕಿಂ' ಎಂಬ ವಿಷಯದಲ್ಲಿ ಮಹಾ ಪ್ರಬಂಧವನ್ನು ಮಂಡಿಸಿ, ಪಿಹೆಚ್​ಡಿ ಪಡೆದಿದ್ದಾರೆ.

ಡಾ.ಎನ್.ಮಮತಾ  ಜೊತೆ ಡಿಕಿಲಾ‌
ಡಾ.ಎನ್.ಮಮತಾ ಜೊತೆ ಡಿಕಿಲಾ‌

ಬೆಂಗಳೂರಿನ ಸಿಎಂಆರ್ ಕಾಲೇಜಿನಲ್ಲಿ 2015ರಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಶಿಕ್ಷಣ ಪೂರೈಸಿದ ಇವರು, ‌2016ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಎನ್.ಮಮತಾ ಅವರ ಮಾರ್ಗದರ್ಶನದಲ್ಲಿ ಪಿಹೆಚ್‌ಡಿ ಆರಂಭಿಸಿದ್ದ ಡಿಕಿಲಾ,ಈಗ ಪಿಹೆಚ್​ಡಿ ಪೂರ್ಣಗೊಳಿಸಿ ಡಾ.ಡಿಕಿಲಾ ಆಗಿದ್ದಾರೆ.

ಪಿಹೆಚ್​​ಡಿ ಪೂರೈಸಿರುವ ಡಿಕಿಲಾ, ಪ್ರಸ್ತುತ ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಂದೆ ಶಿಕ್ಷಕರಾದರೆ, ಇವರಿಗೆ ಇಬ್ಬರು ಅಣ್ಣಂದಿರಿದ್ದು ಇಂಜಿನಿಯರ್‌ಗಳಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.