ETV Bharat / state

ಕೂಡಲೇ ಅಶ್ವತ್ಥ ನಾರಾಯಣ್ ಬಂಧಿಸಬೇಕು : ಕೆಪಿಸಿಸಿ ಮಾಧ್ಯಮ ವಕ್ತಾರ ಎಂ.ಲಕ್ಷ್ಮಣ್ - ಈಟಿವಿ ಭಾರತ್​ ಕನ್ನಡ ನ್ಯೂಸ್​

ಅಶ್ವತ್ಥ ನಾರಾಯಣ್ ಅವರನ್ನು 24 ಗಂಟೆಯಲ್ಲಿ ಬಂಧಿಸದಿದ್ದರೆ ಐಜಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಂ.ಲಕ್ಷ್ಮಣ್ ಹೇಳಿದರು.

ಕೆಪಿಸಿಸಿ ಮಾಧ್ಯಮ ವಕ್ತಾರ ಎಂ.ಲಕ್ಷ್ಮಣ್
ಕೆಪಿಸಿಸಿ ಮಾಧ್ಯಮ ವಕ್ತಾರ ಎಂ.ಲಕ್ಷ್ಮಣ್
author img

By

Published : May 29, 2023, 3:47 PM IST

ಅಶ್ವಥ್ ನಾರಾಯಣ್ ವಿರುದ್ಧ ಮೈಸೂರಿನಲ್ಲಿ ಎಫ್ಐಆರ್

ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಮಾಜಿ ಸಚಿವ ಅಶ್ವತ್ಥ ನಾರಾಯಣ್ ನೀಡಿದ ಹೇಳಿಕೆ ಕುರಿತು ಮೈಸೂರಿನಲ್ಲಿ ಎಫ್​ಐಆರ್ ದಾಖಲಾಗಿದೆ. ಈ ಪ್ರಕರಣವನ್ನು ಮಂಡ್ಯಗೆ ವರ್ಗಾಯಿಸಲಾಗಿದ್ದು.‌ ಅಶ್ವತ್ಥ ನಾರಾಯಣ್ ಅವರನ್ನು ಕೂಡಲೇ 24 ಗಂಟೆಯಲ್ಲಿ ಬಂಧಿಸಬೇಕು. ಒಂದು ವೇಳೆ ಬಂಧಿಸದಿದ್ದರೆ ಐಜಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು, ಕೆಪಿಸಿಸಿ ಮಾಧ್ಯಮ ವಕ್ತಾರ ಎಂ.ಲಕ್ಷ್ಮಣ್ ಹೇಳಿಕೆ ನೀಡಿದರು.

ಇಂದು ಮೈಸೂರು ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಶ್ವತ್ಥ ನಾರಾಯಣ್ ವಿರುದ್ಧ ಎಫ್ಐಆರ್ ದಾಖಲಾಗಿ ಒಂದು ವಾರ ಕಳೆದರು ಅವರನ್ನು ಬಂಧಿಸಿಲ್ಲ. ಮೈಸೂರಿನ ದೇವರಾಜ ಪೋಲಿಸ್ ಠಾಣೆಯ ಪೊಲೀಸರು ದೂರು ದಾಖಲು ಮಾಡಿಕೊಂಡಿದ್ದು, ಇದೀಗ ಮಂಡ್ಯಗೆ ದೂರನ್ನು ವರ್ಗಾವಣೆ ಮಾಡಿದ್ದಾರೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಅಶ್ವತ್ಥ ನಾರಾಯಣ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಅಧಿಕಾರದಲ್ಲಿದ್ದಾಗ ಮಾಡಿದಂತಹ ಕೆಲಸವನ್ನು ಪೊಲೀಸರು ಮಾಡಬೇಡಿ. ಯಾರು ಒತ್ತಡಕ್ಕೆ ಒಳಗಾಗದೇ ಕಾನೂನು ರೀತಿಯ ಸಾಮಾನ್ಯ ಜನರ ಪರವಾಗಿ ಕೆಲಸ ಮಾಡಿ. ಬಿಜೆಪಿ ಪಕ್ಷ ಅಂತಲ್ಲ ಕಾಂಗ್ರೆಸ್​ ಪಕ್ಷ ಆದರೂ ಸರಿಯೇ ತರಲೆ ಮಾಡಿದರು ಪ್ರಕರಣ ದಾಖಲಿಸಿಕೊಂಡು​ ಅಂತವರ ವಿರುದ್ದ ಕ್ರಮ ತೆಗೆದುಕೊಳ್ಳಿ ಎಂದು ಎಂ.ಲಕ್ಷ್ಮಣ್ ಹೇಳಿದರು.

ಕ್ಷೇತ್ರಗಳಿಗೆ ಹೋದರೆ ಪ್ರತಾಪ್ ಸಿಂಹ ಅವರಿಗೆ ಕಲ್ಲು ಹೊಡೆಯುತ್ತಾರೆ : 15 ದಿನಗಳಲ್ಲಿ ನಮ್ಮ ಸರ್ಕಾರ 34 ಮಂತ್ರಿಗಳನ್ನು ಒಳಗೊಂಡ ಪೂರ್ಣ ಸರ್ಕಾರ ರಚನೆಯಾಗಿದ್ದು, ದೇಶದಲ್ಲೇ ಮೊದಲು. ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದರಲ್ಲಿ ಯಾವುದೇ ಅನುಮಾನ ಬೇಡ. ಬಿಜೆಪಿಯವರು ಆತುರವಾಗಿ ಈ ವಿಚಾರದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಲು ಹೊರಟಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ಮಾಡಲು ಸಮಯ ನಿಗದಿ ಮಾಡಲು ಬಿಜೆಪಿಯವರು ಯಾರು?. ಸಂಸದ ಪ್ರತಾಪ್ ಸಿಂಹ ಚುನಾವಣೆ ಸಮಯದಲ್ಲಿ ವರುಣಾದಲ್ಲಿ ಬೆಂಕಿ ಹಚ್ಚಲು ಹೋಗಿದ್ದರು. ಇವರು ಈಗ ತಮ್ಮ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಕ್ಷೇತ್ರಗಳಿಗೆ ಹೋದರೆ ಓಡಿಸಿಕೊಂಡು ಬಂದು ಕಲ್ಲಲ್ಲಿ ಹೊಡೆಯುತ್ತಾರೆ. ಇವನು ಗ್ಯಾರಂಟಿ ಯೋಜನೆಯ ಜಾರಿಗೆ ಡೆಡ್ ಲೈನ್ ಕೊಡಲು ಯಾರು? ಎಂದು ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದರು.

ಜೂನ್ 1 ಕ್ಕೆ ಸಂಸದರ ಕಚೇರಿ ಮುಂದೆ ಪ್ರತಿಭಟನೆ : 2014ರಲ್ಲಿ ಪ್ರತಾಪ್ ಸಿಂಹ ಸಂಸದರಾಗಿ ನೀಡಿದ ಭರವಸೆಗಳನ್ನು ಯಾವ ರೀತಿ ಈಡೇರಿಸಿದ್ದೀರಿ. ನೀವು ಕೊಟ್ಟ ಭರವಸೆಗಳಿಗೆ ಉತ್ತರ ನೀಡಿ ಎಂದು ಕೇಳಲು ಜೂನ್ ಒಂದರಂದು ಸಂಸದರ ಕಚೇರಿ ಮುಂದೆ ಬರುತ್ತೇವೆ. ನೀವು ಉತ್ತರ ಕೊಡಿ. 2024ರ ಲೋಕಸಭಾ ಚುನಾವಣೆಯಲ್ಲಿ 2 ಲಕ್ಷ ಮತಗಳಿಂದ ನೀವು ಸೋಲುತ್ತೀರಿ. ನಮ್ಮ ಗ್ಯಾರಂಟಿಗಳ ಬಗ್ಗೆ ಮಾತಾನಾಡಲು ಪ್ರತಾಪ್ ಸಿಂಹ ಯಾರು ಎಂದು ಲಕ್ಷ್ಮಣ್ ವಾಗ್ದಾಳಿ ನಡೆಸಿದರು.

ಇನ್ನು ಇದೇ ವೇಳೆ, ಜೆಡಿಎಸ್ ಬಗ್ಗೆ ಪ್ರತಿಕ್ರಿಯಿಸಿ, ಜೆಡಿಎಸ್ ಕತೆ ಮುಗಿದ ಅಧ್ಯಾಯ, ಜೆಡಿಎಸ್ ಅನ್ನು ಯಾರು ನಂಬುವುದಿಲ್ಲ. 19 ಶಾಸಕರನ್ನು ಉಳಿಸಿಕೊಳ್ಳುವುದೇ ದೊಡ್ಡ ಸಾಹಸವಾಗಿದೆ. ಅದರಲ್ಲಿ 10 ರಿಂದ 12 ಜನ ಜೆಡಿಎಸ್ ನಿಂದ ಹೊರ ಹೋಗಲು ಮುಂದಾಗಿದ್ದಾರೆ ಎಂದು ಹೇಳಿದ ಲಕ್ಷ್ಮಣ್, ರಂಗಾಯಣದ ಮಾಜಿ ನಿರ್ದೇಶಕ ಅಡ್ಡಂಡ ಕಾರ್ಯಪ್ಪನವರ ಆಟ ಮುಂದೆ ಏನಾದರೂ ನಡೆದರೇ ರೌಡಿ ಶೀಟರ್ ಲೀಸ್ಟ್​ನಲ್ಲಿ ಅವರನ್ನು ಸೇರಿಸಲಾಗುವುದು ಎಂದು ಲಕ್ಷ್ಮಣ್ ಎಚ್ಚರಿಕೆ ನೀಡಿದರು.

ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ಇದರಿಂದ ರಾಜ್ಯಾದ್ಯಂತ ಬಿಜೆಪಿ, ಸಿದ್ದರಾಮಯ್ಯ ವಿರುದ್ಧ 42 ಪ್ರಕರಣಗಳನ್ನು ದಾಖಲಿಸಿದೆ. ಆದರೆ ನಾವು ಅವರ ಹಾಗಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ : ಗ್ಯಾರಂಟಿ ಕಾರ್ಡ್ ಜಾರಿ ಬಗ್ಗೆ ಸರ್ಕಾರ ಸರ್ವೇ ಮಾಡುತ್ತಿದೆ: ಲಕ್ಷ್ಮಣ್ ಸವದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.