ETV Bharat / state

ದಸರಾಕ್ಕೆ ಅಭಿಮನ್ಯು ತಂಡ ರೆಡಿ: ಮೈಸೂರಿಗೆ ಆಗಮಿಸಲಿದೆ ಗಜ ಪಡೆ

ವಿಶ್ವವಿಖ್ಯಾತ ಮೈಸೂರು ದಸರಾ ಹಿನ್ನೆಲೆ ಜಂಬು ಸವಾರಿಯಲ್ಲಿ ಪಾಲ್ಗೊಳ್ಳಲು ಗಜ ಪಡೆ ಇಂದು ಮೈಸೂರಿಗೆ ಆಗಮಿಸಲಿದೆ.

fcd
ಮೈಸೂರಿಗೆ ಆಗಮಿಸಲಿರುವ ಗಜ ಪಡೆ
author img

By

Published : Oct 1, 2020, 12:51 PM IST

ಮೈಸೂರು: ಈ ಬಾರಿ ಮೈಸೂರು ದಸರಾದಲ್ಲಿ ಅಂಬಾರಿ ಹೊರಲಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ತಂಡ ಇನ್ನೇನು ನಗರಕ್ಕೆ ಆಗಮಿಸಲಿದೆ.

ಮೈಸೂರಿಗೆ ಆಗಮಿಸಲಿರುವ ಗಜ ಪಡೆ

ಈ ಬಾರಿ ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳ ವಿವರ ಇಂತಿದೆ: ಇದೇ ಚೊಚ್ಚಲ ಬಾರಿಗೆ ಚಿನ್ನದ ಅಂಬಾರಿ ಹೊರಲಿರುವ ಕ್ಯಾಪ್ಟನ್ ಅಭಿಮನ್ಯು(54) ಮತ್ತಿಗೂಡು ಆನೆ ಶಿಬಿರದಿಂದ ಬರುತ್ತಿದ್ದಾನೆ. ಮಾವುತ ವಸಂತ ಕಾವಾಡಿ ರಾಜುವಿನ ಮಾತಿಗೆ ತಲೆ ಅಲ್ಲಾಡಿಸಲಿದೆ. ಎತ್ತರ 2.68 ಮೀಟರ್, ಉದ್ದ 3.51 ಮೀಟರ್​, ತೂಕ 5,000 ದಿಂದ 5,290 ಕೆ.ಜಿ. ಇದ್ದಾನೆ. 1977 ರಲ್ಲಿ ಕೊಡಗು ಜಿಲ್ಲೆಯ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು. 21 ವರ್ಷಗಳಿಂದ ದಸರಾದಲ್ಲಿ ಭಾಗಿಯಾಗುತ್ತಿರುವ ಈತ 2015ರಿಂದ ಕರ್ನಾಟಕ ವಾದ್ಯಗೋಷ್ಠಿಯ ಗಾಡಿ ಎಳೆಯುತ್ತಿದ್ದ. ಈ ವರ್ಷ ಈತನಿಗೆ ಅಂಬಾರಿ ಹೊರುವ ಅದೃಷ್ಟ ಒಲಿದು ಬಂದಿದೆ.

ವಿಕ್ರಮ ಆನೆ: 47 ವರ್ಷದ ವಿಕ್ರಮ ಆನೆಯನ್ನು ದುಬಾರೆ ಆನೆ ಶಿಬಿರ ಕರೆತರಲಾಗಿದೆ. ಮಾವುತ ಜೆ‌ ಕೆ ಪುಟ್ಟ, ಕಾವಾಡಿಗ ಹೇಮಂತ್ ಕುಮಾರ್ ಈ ಆನೆಯನ್ನು ‌ನೋಡಿಕೊಳ್ಳಲಿದ್ದಾರೆ. ಎತ್ತರ 2.60 ಮೀ, ಉದ್ದ 3.43 ಮೀ, ತೂಕ 3,820 ಕೆ.ಜಿ. ಇದ್ದಾನೆ. 1990 ರಲ್ಲಿ ದೊಡ್ಡ ಬೆಟ್ಟ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು. 16 ವರ್ಷಗಳಿಂದ ದಸರಾದಲ್ಲಿ ಭಾಗಿಯಾಗುತ್ತಿರುವ ಈತ, 2015 ರಿಂದ ಪಟ್ಟದ ಆನೆಯಾಗಿ ಅರಮನೆ ಪೂಜೆಯಲ್ಲಿ ಪಾಲ್ಗೊಳ್ಳುತ್ತಿದ್ದಾನೆ.

ಗೋಪಿ: 38 ವರ್ಷ ಗೋಪಿ, ದುಬಾರೆ ಆನೆ ಶಿಬಿರದಿಂದ ಬರುತ್ತಿದ್ದಾನೆ. ಮಾವುತ ನಾಗರಾಜು, ಕಾವಾಡಿ ಶಿವು ಅಚ್ಚುಮೆಚ್ಚಿನ ಶಿಷ್ಯರು. ಎತ್ತರ 2.92 ಮೀ.ಉದ್ದ, 3.42 ಮೀ. 3,710 ಕೆ.ಜಿ. ತೂಕವಿದ್ದಾನೆ. ಕಾರ್ಯಕೊಪ್ಪ ಅರಣ್ಯ ಪ್ರದೇಶದಲ್ಲಿ ಈ ಆನೆಯನ್ನು ಸೆರೆಹಿಡಿಯಲಾಗಿದೆ. 10 ವರ್ಷಗಳಿಂದ ದಸರಾದಲ್ಲಿ ಭಾಗಿಯಾಗುತ್ತಿದ್ದಾನೆ.

ವಿಜಯ: ಗಜಪಡೆಯ ಹಿರಿಯ ಆನೆಯಾಗಿರುವ 61 ವರ್ಷದ ಹೆಣ್ಣಾನೆ ವಿಜಯ ದುಬಾರೆ ಆನೆ ಶಿಬಿರದಿಂದ ಬರುತ್ತಿದೆ. ಮಾವುತ ಬೋಜಪ್ಪ, ಕಾವಾಡಿಗ ಬಿ.ಪಿ ಭರತ್ ಈ ಆನೆಯನ್ನು ನೋಡಿಕೊಳ್ಳುತ್ತಾರೆ. ಎತ್ತರ 2.29 ಮೀ.ಉದ್ದ, 3.00 ಮೀಟರ್​, 3,250 ಕೆ.ಜಿ. ತೂಕ ಇದ್ದಾಳೆ. 1063 ರಲ್ಲಿ ದುಬಾರೆ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಯಿತು.13 ವರ್ಷಗಳಿಂದ ದಸರಾದಲ್ಲಿ ಭಾಗಿಯಾಗುತ್ತಿದ್ದಾಳೆ.

ಕಾವೇರಿ: 42 ವರ್ಷ ಕಾವೇರಿ ಆನೆಯು ದುಬಾರೆ ಆನೆ ಶಿಬಿರದಿಂದ ಆಗಮಿಸುತ್ತಿದೆ‌. ಮಾವುತ ಜೆ.ಕೆ. ದೋಬಿ, ಕಾವಾಡಿಗ ಜೆ ಎ ರಂಜನ್ ಈ ಆನೆ ನೋಡಿಕೊಳ್ಳುತ್ತಿದ್ದಾರೆ. ಎತ್ತರ 2.50 ಮೀಟರ್​, ಉದ್ದ 3.32 ಮೀಟರ್​, 3,220 ಕೆ.ಜಿ. ತೂಕ ಇದ್ದಾಳೆ.2009 ರಲ್ಲಿ ಸೋಮವಾರಪೇಟೆ ಆಡಿನಾಡೂರು ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಯಿತು. 9 ವರ್ಷಗಳಿಂದ ದಸರಾದಲ್ಲಿ ಭಾಗಿಯಾಗುತ್ತಿದ್ದಾಳೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.