ETV Bharat / state

ವೃದ್ಧೆಯ ಬಾಳೆ ತೋಟ ನಾಶ ಮಾಡಿದ್ದ ಆರೋಪಿ ಬಂಧನ - banana plant

ವೃದ್ಧೆ ಬಾಳೆ ಬೆಳೆದಿರುವ ಜಮೀನು ನನ್ನದೇ ಎಂದು ಹೇಳಿಕೆ ಕೊಟ್ಟಿರುವ ದೊಡ್ಡಪರಮೇಶಯ್ಯನನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ..

Arrest of accused who was destroyed of Banana plant
ವೃದ್ಧೆಯ ಜಮೀನನಲ್ಲಿ ಬಾಳೆ ಗಿಡಗಳ ನಾಶ ಮಾಡಿದ್ದ ಆರೋಪಿ ಬಂಧನ
author img

By

Published : Sep 20, 2020, 3:15 PM IST

ಮೈಸೂರು : ವೃದ್ಧೆ ತನ್ನ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಗಿಡಗಳನ್ನು ನಾಶ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಟಿ.ನರಸೀಪುರ ತಾಲೂಕು ವಾಟಾಳು ಗ್ರಾಮದ ದೊಡ್ಡಪರಮೇಶಯ್ಯ (65) ಬಂಧಿತ ಆರೋಪಿ.

ಲಕ್ಷ್ಮಮ್ಮ ಎಂಬುವರಿಗೆ ಸೇರಿದ ಒಂದು ಎಕರೆ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಬೆಳೆಯನ್ನು ದೊಡ್ಡಪರಮೇಶಯ್ಯ ನಾಶಮಾಡಿ ತಲೆಮರೆಸಿಕೊಂಡಿದ್ದ. ಹಾಳಾದ ಬೆಳೆ ಮುಂದೆ ವೃದ್ಧೆ ಗೋಳಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಬಾಳೆ ಗಿಡಗಳ ನಾಶ ಮಾಡಿದ್ದ ಆರೋಪಿ ಬಂಧನ

ಮೈಸೂರು: ವೃದ್ಧೆಯ 4 ಎಕರೆ ಬಾಳೆತೋಟ ನಾಶ; ಪರಿಹಾರಕ್ಕಾಗಿ ಅಂಗಲಾಚಿದ ವಿಡಿಯೋ ವೈರಲ್​..

ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು, ಬೆಳೆ ನಾಶಪಡಿಸಿದ್ದ ಆರೋಪಿ ಹೆಡೆಮುರಿ ಕಟ್ಟಿದ್ದಾರೆ. ವೃದ್ಧೆ ಬಾಳೆ ಬೆಳೆದಿರುವ ಜಮೀನು ನನ್ನದೇ ಎಂದು ಹೇಳಿಕೆ ಕೊಟ್ಟಿರುವ ದೊಡ್ಡಪರಮೇಶಯ್ಯನನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.