ಮೈಸೂರು : ಕಬಿನಿ ವನ್ಯಜೀವಿ ಅಭಯಾರಣ್ಯದಲ್ಲಿ ಕರಿ ಚಿರತೆ ಮತ್ತು ಚಿರತೆಗಳು ಪರಸ್ಪರ ಮುಖಾಮುಖಿಯಾದ ವಿಡಿಯೋ ಒಂದು ಪ್ರವಾಸಿಗರ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ.
ಇನ್ಫೋಸಿಸ್‌ನ ಸಹ ಸಂಸ್ಥಾಪಕ ನಂದನ್ ನಿಲೇಕಣಿ ಎರಡು ದಿನಗಳ ಹಿಂದೆ ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ. ವಿಡಿಯೋದಲ್ಲಿ ಕರಿ ಚಿರತೆ ಮತ್ತು ಚಿರತೆ ಮರದ ಕೊಂಬೆಯೊಂದರಲ್ಲಿ ಕುಳಿತು ಪರಸ್ಪರ ಗುರುಗುಟ್ಟುವ ದೃಶ್ಯ ಕಾಣಬಹುದು.
ಮಾರ್ಚ್ 6 ರಂದು ಕಬಿನಿ ವನ್ಯಜೀವಿ ಅಭಯಾರಣ್ಯದಲ್ಲಿ ಕರಿ ಚಿರತೆ ಮತ್ತು ಮತ್ತೊಂದು ಚಿರತೆ ಮುಖಾ ಮುಖಿಯಾಗಿರುವುದನ್ನು ನೋಡಿ ಎಂದು ನಂದನ್ ನೀಲೆಕಣಿ ಬರೆದುಕೊಂಡಿದ್ದು, ವಿಜಯ್ ಪ್ರಭು ಎಂಬವರು ಈ ದೃಶ್ಯ ಸೆರೆ ಹಿಡಿದಿರುವುದಾಗಿ ತಿಳಿಸಿದ್ದಾರೆ. ನೀಲೆಕಣಿ ಪೋಸ್ಟ್ ಮಾಡಿರುವ ಈ ವಿಡಿಯೋವನ್ನು ಬರೋಬ್ಬರಿ ಒಂದು ಲಕ್ಷ ಜನ ವೀಕ್ಷಿಸಿದ್ದಾರೆ.
-
Saw today, 6th March, in Kabini wild life sanctuary -- another epic encounter between the Black Panther and his adversary Scarface! Video credit: Vijay Prabhu. pic.twitter.com/151Ip1bMGz
— Nandan Nilekani (@NandanNilekani) March 6, 2021 " class="align-text-top noRightClick twitterSection" data="
">Saw today, 6th March, in Kabini wild life sanctuary -- another epic encounter between the Black Panther and his adversary Scarface! Video credit: Vijay Prabhu. pic.twitter.com/151Ip1bMGz
— Nandan Nilekani (@NandanNilekani) March 6, 2021Saw today, 6th March, in Kabini wild life sanctuary -- another epic encounter between the Black Panther and his adversary Scarface! Video credit: Vijay Prabhu. pic.twitter.com/151Ip1bMGz
— Nandan Nilekani (@NandanNilekani) March 6, 2021
ಓದಿ : 33 ಮಿಲಿಯನ್ ಡೋಸ್ ಕೋವಿಡ್ ಲಸಿಕೆ ರಫ್ತು; ವ್ಯಾಕ್ಸಿನ್ ಹಬ್ ಆಗಿ ಹೊರಹೊಮ್ಮಿದ ಭಾರತ
ಇತ್ತೀಚೆಗೆ ಕರಿಚಿರತೆಯ ಫೋಟೋ ಸೆರೆ ಹಿಡಿದು ಪ್ರಸಿದ್ದಿಯಾಗಿದ್ದ ಶಾಝ್ ಜಂಗ್ ಪ್ರಕಾರ, ಕಬಿನಿಯಲ್ಲಿರುವ ಕರಿಚಿರತೆ ಬಹಳ ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಪ್ರಾಣಿಯಾಗಿದೆ.