ETV Bharat / state

ಇಂದಿನಿಂದ ಅರ್ಜುನ ಆನೆಗೆ ಮರದ ಅಂಬಾರಿ ಹೊರೆಸಿ ತಾಲೀಮು ಆರಂಭ - ಅರ್ಜುನ ಆನೆ

ಮೈಸೂರು ದಸರಾ ಹಿನ್ನೆಲೆಯಲ್ಲಿ ಚಿನ್ನದ ಅಂಬಾರಿಯನ್ನು ಜಂಬೂ ಸವಾರಿಯ ದಿನ ಹೊರುವ ಅರ್ಜುನ ಆನೆಗೆ ಇಂದಿನಿಂದ ಅರಮನೆಯ ಮುಂಭಾಗದಲ್ಲಿ 380 ಕೆಜಿ ತೂಕದ ಮರದ ಅಂಬಾರಿ, ಅದರೊಳಗೆ ಸುಮಾರು 250 ಕೆಜಿ ತೂಕದ ಮರಳು ಮೂಟೆ ಇಟ್ಟು ಇಂದಿನಿಂದ ತಾಲೀಮು ಆರಂಭಿಸಲಾಗಿದೆ.

Mysore
author img

By

Published : Sep 19, 2019, 10:44 AM IST

ಮೈಸೂರು: ದಸರಾ ಹಿನ್ನೆಲೆಯಲ್ಲಿ ಇಂದಿನಿಂದ ಚಿನ್ನದ ಅಂಬಾರಿ ಹೊರುವ ಅರ್ಜುನ ಆನೆಗೆ ಮರದ ಅಂಬಾರಿ ಹೊರೆಸಿ ತಾಲೀಮು ನಡೆಲಾಗುತ್ತಿದೆ.

ಅರ್ಜುನ ಆನೆಗೆ ಮರದ ಅಂಬಾರಿ ಹೊರೆಸಿ ತಾಲೀಮು

ಸುಮಾರು 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಜಂಬೂ ಸವಾರಿಯ ದಿನ ಹೊರುವ ಅರ್ಜುನ ಆನೆಗೆ ಇಂದಿನಿಂದ ಅರಮನೆಯ ಮುಂಭಾಗದಲ್ಲಿ 380 ಕೆಜಿ ತೂಕದ ಮರದ ಅಂಬಾರಿ, ಅದರೊಳಗೆ ಸುಮಾರು 250 ಕೆಜಿ ತೂಕದ ಮರಳು ಮೂಟೆ ಇಟ್ಟು ಇಂದಿನಿಂದ ತಾಲೀಮು ಆರಂಭಿಸಲಾಗಿದೆ. ಅರ್ಜುನನ ಜೊತೆಗೆ ಅಭಿಮನ್ಯು, ಧನಂಜಯ ಮತ್ತು ಈಶ್ವರ ಆನೆಗಳಿಗೂ ಸಹ ತಾಲೀಮು ನಡೆಸಲಾಗುತ್ತಿದೆ. ಅರಮನೆಯಿಂದ ಬನ್ನಿ ಮಂಟಪದವರೆಗೆ ಈ ತಾಲೀಮು ಪ್ರತಿದಿನ ನಡೆಯಲಿದೆ ಎಂದು ಆನೆಯನ್ನು ನೋಡಿಕೊಳ್ಳುತ್ತಿರುವ ಪಶು ವೈದ್ಯ ನಾಗರಾಜ್ ತಿಳಿಸಿದರು.

ಇಂದು ಮರದ ಅಂಬಾರಿ ತಾಲೀಮು ಹಿನ್ನೆಲೆಯಲ್ಲಿ ಜಂಬೂ ಸವಾರಿಯ ದಿನ ಪುಷ್ಪಾರ್ಚನೆ ಮಾಡುವ ಸ್ಥಳದಲ್ಲಿ ಸೊಂಡಿಲಿನ ಮೂಲಕ ಅರ್ಜುನ ಆನೆಗೆ ನಮಸ್ಕಾರ ಮಾಡಿಸಲಾಗಿದ್ದು, ರಾಜ ಗಾಂಭೀರ್ಯದಿಂದ ಗಜಪಡೆಯು ಅರಮನೆ, ಕೋಟೆ ಆಂಜನೇಯ ದ್ವಾರದಿಂದ ಕೆ.ಆರ್. ಸರ್ಕಲ್ ಮೂಲಕ ಬನ್ನಿ ಮಂಟಪದ ಕಡೆಗೆ ಹೆಜ್ಜೆ ಹಾಕಿದೆ.

Intro:ಮೈಸೂರು: ಚಿನ್ನದ ಅಂಬಾರಿ ಹೊರುವ ಅರ್ಜುನ ಆನೆಗೆ ಇಂದಿನಿಂದ ಮರದ ಅಂಬಾರಿ ತಾಲೀಮುನ್ನು ನಡೆಸಲಾಯಿತು.

Body:೭೫೦ ಕೆ.ಜಿ.ತೂಕದ ಚಿನ್ನದ ಅಂಬಾರಿಯನ್ನು ಜಂಬೂಸವಾರಿಯ ದಿನ ಹೊರುವ ಅರ್ಜುನ ಆನೆಗೆ ಇಂದಿನಿಂದ ಅರಮನೆಯ ಮುಂಭಾಗದಲ್ಲಿ ೩೮೦ ಕೆ.ಜಿ. ತೂಕದ ಮರದ ಅಂಬಾರಿ ಅದರೊಳಗೆ ಸುಮಾರು ೨೫೦ ಕೆ.ಜಿ.ತೂಕದ ಮರಳು ಮೂಟೆಯನ್ನು ಇಟ್ಟು ಅರ್ಜುನ ಆನೆಗೆ ಸುಮಾರು ೬೦೦ ರಿಂದ ೬೩೦ ಕೆ.ಜಿ. ತೂಕವನ್ನು ಹಾಕಿ ಇಂದಿನಿಂದ ತಾಲೀಮು ಆರಂಭಿಸಲಾಗಿದ್ದು ಇದರ ಜೊತೆಗೆ ಅಭಿಮನ್ಯು, ಧನಂಜಯ ಮತ್ತು ಈಶ್ವರ ಆನೆಗಳಿಗೂ ಸಹ ತಾಲೀಮನ್ನು ನಡೆಸಲಾಗುವುದು.
ಅರಮನೆಯಿಂದ ಬನ್ನಿಮಂಟಪದ ವರೆಗೆ ಈ ತಾಲೀಮು ಪ್ರತಿದಿನ ನಡೆಯಲಿದೆ ಎಂದು ಆನೆಯನ್ನು ನೋಡಿಕೊಳ್ಳುತ್ತಿರುವ ಪಶುವೈದ್ಯ ನಾಗರಾಜ್ ತಿಳಿಸಿದರು.
ಇಂದು ಮರದ ಅಂಬಾರಿ ತಾಲೀಮು ಹಿನ್ನಲೆಯಲ್ಲಿ ಜಂಬೂಸವಾರಿಯ ದಿನ ಪುಷ್ಪಾರ್ಚನೆ ಮಾಡುವ ಸ್ಥಳದಲ್ಲಿ ಸೊಂಡಿಲಿನ ಮೂಲಕ ನಮಸ್ಕಾರವನ್ನು ಅರ್ಜುನ ಆನೆಗೆ ಮಾಡಿಸಲಾಗಿದ್ದು ರಾಜಗಾಂಭಿರ್ಯದಿಂದ ಎಲ್ಲಾ ಗಜಪಡೆಯು ಅರಮನೆ, ಕೋಟೆ ಆಂಜನೇಯ ದ್ವಾರದಿಂದ ಕೆ.ಆರ್.ಸರ್ಕಲ್ ಮೂಲಕ ಬನ್ನಿಮಂಟಪದ ಕಡೆಗೆ ಹೆಜ್ಜೆ ಹಾಕಿದವು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.