ETV Bharat / state

ಸಪ್ತಪದಿ ಯೋಜನೆಯಂತೆ, ಅಕ್ಷರಾಭ್ಯಾಸ ಯೋಜನೆ ತರಬೇಕು: ಶಾಸಕ ಎಸ್ ಎ ರಾಮದಾಸ್

author img

By

Published : Feb 26, 2023, 7:05 PM IST

Updated : Feb 26, 2023, 8:10 PM IST

ಮಹರ್ಷಿ ಪಬ್ಲಿಕ್ ಶಾಲೆಯಲ್ಲಿ ನಡೆದ ಅಕ್ಷರಾಭ್ಯಾಸ ಕಾರ್ಯಕ್ರಮ - ಶಿಕ್ಷಣ ಎನ್ನುವುದು ಪ್ರತಿಯೊಂದು ಮಗುವಿಗೆ ಸಿಗಬೇಕಾದ ಮೂಲಭೂತ ಹಕ್ಕು - ಶಾಸಕ ಎಸ್ ಎ ರಾಮದಾಸ್ ಅಭಿಮತ

aksharabhyasa program
ಸಪ್ತಪದಿ ಯೋಜನೆಯಂತೆ, ಅಕ್ಷರಾಭ್ಯಾಸ ಯೋಜನೆ ತರಬೇಕು: ಎಸ್.ಎ.ರಾಮದಾಸ್
ಮಹರ್ಷಿ ಪಬ್ಲಿಕ್ ಶಾಲೆಯಲ್ಲಿ ನಡೆದ ಅಕ್ಷರಾಭ್ಯಾಸ ಕಾರ್ಯಕ್ರಮ

ಮೈಸೂರು: ಅಕ್ಷರಾಭ್ಯಾಸ ಕಾರ್ಯಕ್ರಮವನ್ನು ರಾಜ್ಯ ಶಾಲೆಗಳಲ್ಲೂ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಳ್ಳುವಂತೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಶಾಸಕ ಎಸ್ ಎ ರಾಮದಾಸ್ ಹೇಳಿದರು. ಕೆಎಂಪಿಕೆ ಚಾರಿಟೇಬಲ್ ಟ್ರಸ್ಟ್ ಹಾಗೂ ಬ್ರಹ್ಮಿ ಭೂತ ಶ್ರೀ ವಾಸುದೇವ್ ಮಹಾರಾಜ್ ಫೌಂಡೇಶನ್ ವತಿಯಿಂದ ಮಹರ್ಷಿ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಅಕ್ಷರಭ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ಪೋಷಕರ ಕರ್ತವ್ಯ: ಶಿಕ್ಷಣ ಎನ್ನುವುದು ಪ್ರತಿಯೊಂದು ಮಗುವಿಗೆ ಸಿಗಬೇಕಾದ ಮೂಲಭೂತ ಹಕ್ಕು. ಸರಳವಾಗಿ ಸಾಮೂಹಿಕ ವಿವಾಹ ಮಾಡಲು ಸರ್ಕಾರದ ವತಿಯಿಂದ ತಂದಿರುವ ಸಪ್ತಪದಿ ಯೋಜನೆಯಂತೆ, ಅಕ್ಷರಾಭ್ಯಾಸ ಕಾರ್ಯಕ್ರಮವನ್ನ ತರುವಂತೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ರಾಮದಾಸ್ ತಿಳಿಸಿದರು.

ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ಪೋಷಕರ ಕರ್ತವ್ಯ, ಮಕ್ಕಳಿಗೆ ಶಿಕ್ಷಣದ ಜೊತೆಯಲ್ಲೆ ಕಲೆ, ಕ್ರೀಡೆ, ಸಾಂಸ್ಕೃತಿಕ, ಸಂಗೀತ ಸೇರಿದಂತೆ ಮಕ್ಕಳು ಯಾವ ಕ್ಷೇತ್ರದಲ್ಲಿ ಪ್ರತಿವಭಾವಂತರು ಎಂದು ತಿಳಿದು, ಮೊದಲ ಹಂತದಲ್ಲೇ ಪೋಷಕರು ಮನೆಯಿಂದ ಪ್ರೋತ್ಸಾಹ ನೀಡಬೇಕು. ಆಗ ಮಕ್ಕಳು ಮುಖ್ಯವಾಹಿನಿಗೆ ಬಂದು ದೇಶದ ಅತ್ಯುತ್ತಮ ವ್ಯಕ್ತಿಯಾಗಿ ನಿರ್ಮಾಣವಾಗುತ್ತಾರೆ ಎಂದ ಹೇಳಿದರು.

ಇದನ್ನೂ ಓದಿ:ನಂಜುಂಡೇಶ್ವರನ ಹುಂಡಿಯಲ್ಲಿ ವಿದೇಶಿ ಕರೆನ್ಸಿ ಸಹಿತ ₹1.26 ಕೋಟಿ ಕಾಣಿಕೆ ಸಂಗ್ರಹ

ಸನ್ಮಾರ್ಗದ ಕಡೆ ಮಗು ಬೆಳೆಯುವಂತೆ ನೋಡಿಕೊಳ್ಳುವುದು ಪೋಷಕರ ಕರ್ತವ್ಯ: ತಲಕಾಡಿನ ಶ್ರೀ ಬಾಲಕೃಷ್ಣಾನಂದ ಸಂಸ್ಥಾನಂ ಶುಕಶಂಕರ ಪೀಠದ ಶ್ರೀ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ಅವರು ಮಾತನಾಡಿ, ಪುರಾಣ ಇತಿಹಾಸದಲ್ಲಿರುವ ಪಾರ್ವತಿದೇವಿ ತನ್ನ ಮಗು ಗಣೇಶನಿಗೂ ಸಹ ಅಕ್ಷರಾಭ್ಯಾಸ ಕಲಿಸಿದ ಉಲ್ಲೇಖವಿದೆ. ಮಗು ಪೋಷಕರಿಂದ ಕಲಿತ ಮೊದಲ ಅಕ್ಷರದಲ್ಲಿರುವ ಆಸಕ್ತಿ, ಶ್ರಮಪಟ್ಟ ಕನಸನ್ನು ಕಂಡ ಪೋಷಕರು ಅದೇ ರೀತಿಯಲ್ಲೇ ಸನ್ಮಾರ್ಗದ ಕಡೆ ಮಗು ಬೆಳೆಯುವಂತೆ ನೋಡಿಕೊಳ್ಳುವುದು ಪೋಷಕರ ಕರ್ತವ್ಯವಾಗಿದೆ ಎಂದರು.

ಶಿಕ್ಷಣದ ಮಹತ್ವದ ಬಗ್ಗೆ ತಿಳಿಯುತ್ತಲೇಯಿರಬೇಕು: ಶಿಕ್ಷಣಕ್ಕೆ ಎಂದಿಗೂ ಅಂತ್ಯವಿಲ್ಲ, ತಂತ್ರಜ್ಞಾನ ಮುಂದಿನ ಪೀಳಿಗೆ ಕಾಲಮಾನಕ್ಕೆ ತಕ್ಕಂತೆ ಪ್ರತಿದಿನ ಸಮಾಜದಲ್ಲಿ ಶಿಕ್ಷಣದ ಮಹತ್ವದ ಬಗ್ಗೆ ತಿಳಿಯುತ್ತಲೇಯಿರಬೇಕು. ಪ್ರತಿಯೊಬ್ಬರು ಶಿಕ್ಷಣ ಪಡೆದ ನಂತರದಲ್ಲಿ ಅದನ್ನ ಮತ್ತೋರ್ವರಿಗೆ ವಿದ್ಯಾದಾನ ಮಾಡಲು ಮುಂದಾಗಬೇಕು ಎಂದು ಶ್ರೀ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ಸಲಹೆ ನೀಡಿದರು. ಈ ವೇಳೆ 150ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದರು. ಪೋಷಕರು ತಮ್ಮ ಮಕ್ಕಳಿಂದ ಸರಸ್ವತಿ ಪೂಜೆ ಮಾಡಿಸಿ, ಮಕ್ಕಳ ಕೈಹಿಡಿದು ಅಕ್ಕಿ ಕಾಳಿನಲ್ಲಿ ಓಂಕಾರ ಮತ್ತು ಗಣೇಶನಾಮ ಹಾಗೂ ಮಾತೃಭಾಷೆ ಅ ಆ ಇ ಮುಂತಾದವುಗಳನ್ನು ಬರೆಸುವುದರ ಮೂಲಕ ಅಕ್ಷರಾಭ್ಯಾಸ ಮಾಡಿಸಿದರು.

ಇನ್ನು, ಕಾರ್ಯಕ್ರಮದಲ್ಲಿ ಮುಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ಇಳೈ ಆಳ್ವಾರ್ ಸ್ವಾಮೀಜಿ , ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್, ಹಿರಿಯ ಸಮಾಜಸೇವಕ ಕೆ.ರಘುರಾಂ ವಾಜಪಾಯಿ ಇತರರು ಭಾಗವಹಿಸಿದ್ದರು.

ಇದನ್ನೂ ಓದಿ:'ನನ್ನನ್ನೂ ಹತ್ಯೆ ಮಾಡಿ'.. ಮೈಸೂರಲ್ಲಿ ಸಚಿವ ಅಶ್ವತ್ಥನಾರಾಯಣ್ ವಿರುದ್ಧ ಬೃಹತ್ ಪ್ರತಿಭಟನೆ

Last Updated : Feb 26, 2023, 8:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.