ETV Bharat / state

ನಮಗೆ ಹಳ್ಳದ ನೀರೇ ಗತಿ..: ಸರ್ಕಾರಕ್ಕೆ ಕೇಳುವುದೇ ಆದಿವಾಸಿಗಳ ಅರಣ್ಯರೋಧನೆ?

ಆದಿವಾಸಿಗಳು ಇಲ್ಲಿ ಪ್ರಾಣಿಗಳು ಸೇವಿಸುವ ಹಳ್ಳದ ನೀರನ್ನೇ ಆಶ್ರಯಿಸಿ ಬದುಕುತ್ತಿದ್ದಾರೆ.

Tribals living by drinking water from the well
ಹಳ್ಳದ ನೀರಿ ಕುಡಿದ ಬದುಕುತ್ತಿರುವ ಆದಿವಾಸಿಗಳು
author img

By

Published : Feb 27, 2023, 7:59 PM IST

ಆದಿವಾಸಿಗಳ ಅರಣ್ಯರೋಧನೆ

ಮೈಸೂರು : ಹಳ್ಳದಲ್ಲಿರುವ ಅನೈರ್ಮಲ್ಯ ನೀರನ್ನು ಅಡುಗೆ ಹಾಗೂ ಕುಡಿಯಲು ಬಳಸಿಕೊಂಡು ನೀರಿಗಾಗಿ ಪರಿತಪಿಸುತ್ತಿರುವ ಆದಿವಾಸಿಗಳ ಗೋಳು ಹೇಳತೀರದು. ಹೆಚ್.ಡಿ.ಕೋಟೆ ತಾಲೂಕಿನ ಡಿ.ಬಿ.ಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಳೂರು ಹಾಡಿಯಲ್ಲಿ ಕುಡಿಯುವ ನೀರಿನ ಮೋಟಾರ್ ಪಂಪ್ ಕೆಟ್ಟು ಒಂದು ತಿಂಗಳಾದರೂ ಜನಪ್ರತಿನಿಧಿಗಳು, ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ. ಇದರಿಂದ ಆದಿವಾಸಿಗಳು ನೀರಿಗಾಗಿ ಇನ್ನಿಲ್ಲದ ಸಂಕಟ ಅನುಭವಿಸುತ್ತಿದ್ದಾರೆ.

ಕಾಡಿನಲ್ಲಿ ಇದ್ದುಕೊಂಡು ಜೀವನ ನಡೆಸುತ್ತಿರುವ ಈ ಆದಿವಾಸಿಗಳಿಗೆ ಸರ್ಕಾರದಿಂದ ಯಾವುದೇ ರೀತಿಯ ಮೂಲ ಸೌಕರ್ಯಗಳು ಇಲ್ಲ. ಮಳೆ, ಚಳಿ, ಬಿಸಿಲಿನಿಂದ ಪಾರಾಗಲು ತಲೆ ಮೇಲೊಂದು ಸೂರು ಇಲ್ಲ. ಕನಿಷ್ಠ ಜೀವ ಉಳಿಸಿಕೊಳ್ಳಲು ಕುಡಿಯಲು ನೀರು ಸಿಗದೇ ಆದಿವಾಸಿ ಜನರು ಪರದಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹೇಗಾದರೂ ಜೀವ ಉಳಿಸಿಕೊಳ್ಳಬೇಕೆಂದು ಕುಡಿಯಲು ನೀರಿಲ್ಲದೇ ಕಾಡಿನ ಗುಂಡಿಗಳಲ್ಲಿ ನಿಂತ ಕಲುಷಿತ ನೀರು ಕುಡಿದು ಆದಿವಾಸಿಗಳು ಬದುಕುವಂತಾಗಿದೆ.

ಆದಿವಾಸಿಗಳ ಕಷ್ಟ ಕೇಳೋರಾರು?: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಾಡುಪ್ರಾಣಿಗಳು ಕುಡಿಯುವ ಗುಂಡಿ ನೀರನ್ನೇ ಈ ಜನರು ಕುಡಿಯುವ ಪರಿಸ್ಥಿತಿ ಎದುರಾಗಿದೆ. ಗುಂಡಿ ನೀರು ಕುಡಿದು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಕಲುಷಿತ ನೀರು ಕುಡಿದು ಗಂಟಲು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಯನ್ನು ಜನರು ಎದುರಿಸುತ್ತಿದ್ದಾರೆ. ಗಂಟಲು ನೋವಿಗೆ ಕುತ್ತಿಗೆ ಭಾಗಕ್ಕೆ ಮಣ್ಣು ಸವರಿಕೊಳ್ಳುತ್ತಿರುವ ಮಂದಿ, ವೈದ್ಯರಿಲ್ಲ, ಔಷಧಿಯ ವ್ಯವಸ್ಥೆಯೂ ಇಲ್ಲದೇ ಪರಿತಪಿಸುತ್ತಿದ್ದಾರೆ. ಬೇಜಾವ್ದಾರಿಯಿಂದ ನಡೆದುಕೊಳ್ಳುತ್ತಿರುವ ತಾಲೂಕು ಆಡಳಿತ ಹಾಗೂ ಸರ್ಕಾರ ವಿರುದ್ಧ ಆದಿವಾಸಿ ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ವೇಳೆ ತಮ್ಮ ನೋವು ಹೇಳಿಕೊಂಡ ಗೌರಮ್ಮ, ಹಾಡಿ ಜನರನ್ನು ಕಾಡು ಮೃಗಗಳಂತೆ ನಡೆಸಿಕೊಳ್ಳುತ್ತಿರುವ ಸರ್ಕಾರದ ವಿರುದ್ಧ ಧಿಕ್ಕಾರ‌ ಕೂಗಿದರು. ಶಾಸಕರಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದರು.

ಚುನಾವಣೆ ಸಂದರ್ಭದಲ್ಲಿ ವೋಟಿಗಾಗಿ ಕೈ ಮುಗಿದುಕೊಂಡು ಬರುತ್ತಾರೆ. ಆದರೆ ಇಂತಹ ಸಮಸ್ಯೆಗಳು ಬಂದಾಗ ಬಗೆಹರಿಸಲು ಯಾವೊಬ್ಬ ನಾಯಕ, ಅಧಿಕಾರಿಯೂ ಬರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಶಾಸಕ ಅನಿಲ್ ಚಿಕ್ಕಮಾದು ಪ್ರತಿನಿಧಿಸುವ ಹೆಚ್.​ಡಿ.ಕೋಟೆ ಕ್ಷೇತ್ರದಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಇದೆ. ಇದರ ಜೊತೆಗೆ ಆದಿವಾಸಿಗಳ ಸಮಸ್ಯೆಯನ್ನೂ ಬಗೆಹರಿಸುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ: ಬಂಡೀಪುರ, ನಾಗರಹೊಳೆಯಲ್ಲಿ 2 ದಿನಗಳ ರಣಹದ್ದು ಸಮೀಕ್ಷೆ ಪೂರ್ಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.