ಮೈಸೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ನಿರ್ದೇಶಕ ಪ್ರೇಮ್ ಕಾಂಬಿನೇಷನ್‌ನಲ್ಲಿ ಚಾಮುಂಡಿ ಬೆಟ್ಟದಲ್ಲಿ ಹೊಸ ಸಿನಿಮಾ ಮುಹೂರ್ತ ನೆರವೇರಿಸಲಾಗಿದೆ. ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಚಿತ್ರತಂಡ ನಂತರ ದೇವಸ್ಥಾನದ ಮುಂಭಾಗ ಕ್ಲ್ಯಾಪಿಂಗ್ ಮಾಡಿ ಮರದ ತೇರಿನಲ್ಲಿ ಚಾಮುಂಡೇಶ್ವರಿ ಮೂರ್ತಿ ಕೂರಿಸಿ ಮೆರವಣಿಗೆ ಮಾಡಿದೆ. ನಟ ಧ್ರುವ ಸರ್ಜಾ ತೇರು ಎಳೆದರು.
ನಂತರ ಸಿನಿಮಾ ಕುರಿತು ನಟ ಧ್ರುವಸರ್ಜಾ ಮಾತನಾಡಿ, ಜೂನ್ನಿಂದ ಚಿತ್ರೀಕರಣ ಆರಂಭ ಆಗುತ್ತೆ. ಪ್ರೇಮ್ ಸರ್ ಆಕ್ಷನ್ ಜೊತೆಗೆ ಫ್ಯಾಮಿಲಿ ವಿಚಾರ ಬ್ಲೆಂಡ್ ಮಾಡಿರುತ್ತಾರೆ. ಚಿತ್ರದ ಟೈಟಲ್, ಹೀರೋಯಿನ್, ಎಲ್ಲದರ ಬಗ್ಗೆ ನಾನೇನೂ ಹೇಳಲ್ಲ, ಏನೂ ಹೇಳಬೇಡಿ ಎಂದಿದ್ದಾರೆ. ಎಲ್ಲವನ್ನೂ ನಿರ್ದೇಶಕರ ಬಳಿ ಕೇಳಿ ಎಂದು ಹೇಳಿದರು.
ನಿರ್ದೇಶಕ ಪ್ರೇಮ್ ಮಾತನಾಡಿ, ಬೆಂಗಳೂರು ಅಂಡರ್ ವರ್ಲ್ಡ್ ಕತೆ ಹೇಳಲು ಹೊರಟಿದ್ದೇವೆ. ಚಿತ್ರದ ಹೆಸರು ಮುಂದಿನ ತಿಂಗಳು ಲಾಂಚ್ ಆಗುತ್ತೆ ಎಂದರು.
ಇದನ್ನೂ ಓದಿ: ಶಾಸಕ ಬೆಲ್ಲದ ಮನೆಗೆ ಸಿಎಂ ಬೊಮ್ಮಾಯಿ: ಕುತೂಹಲ ಕೆರಳಿಸಿದ ಭೇಟಿ