ETV Bharat / state

ಪ್ರೀತಿ ಹೆಸರಿನಲ್ಲಿ ಯುವತಿ ಮೇಲೆ ಅತ್ಯಾಚಾರ ಆರೋಪ; ವಂಚಿಸಿದ ಯುವಕ‌ ಬಂಧನ - ಉತ್ತಮ್ ಕುಮಾರ್ ಎಂಬಾತ ಬಂಧಿತ ಆರೋಪಿ

ಮೈಸೂರಿನಲ್ಲಿ ಯುವಕನೊಬ್ಬ ಯುವತಿಯನ್ನು ತನ್ನ ಪ್ರೀತಿ ಬಲೆಗೆ ಬೀಳಿಸಿದ್ದು ಅದೇ ಹೆಸರಿನಲ್ಲಿ ಅತ್ಯಾಚಾರಗೈದು ಮೋಸ ಮಾಡಿರುವ ಆರೋಪದಡಿ ಪ್ರಕರಣ ದಾಖಲಾಗಿದೆ.

mysuru
ಮೈಸೂರು
author img

By

Published : Feb 4, 2023, 10:08 AM IST

ಮೈಸೂರು/ಬೆಂಗಳೂರು : ಪ್ರೀತಿ ಹೆಸರಿನಲ್ಲಿ ಯುವತಿ ಮೇಲೆ‌ ಅತ್ಯಾಚಾರವೆಸಗಿದ ಆರೋಪ ಅರಮನೆ ನಗರಿಯಲ್ಲಿ ನಡೆದಿದ್ದು, ಇದೀಗ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಹಲವು ಬಡಾವಣೆಗಳಲ್ಲಿ ತಲೆಯೆತ್ತಿರುವ ಬೇಕರಿಯೊಂದರ ಮಾಲೀಕನ ಪುತ್ರ ಮನೋಜ್ ಎಂಬಾತನ ಮೇಲೆ ಅತ್ಯಾಚಾರ ಆರೋಪ ಹೊರಿಸಿ ಯುವತಿಯೋರ್ವಳು ಲಕ್ಷ್ಮಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಮನೋಜ್ ಅಲಿಯಾಸ್ ಹೃತಿಕ್ ಬಂಧಿತ ಆರೋಪಿಯಾಗಿದ್ದು, ಜನವರಿ 23 ರಂದು ಯುವತಿ ಹತ್ಯೆಗೆ ಸಂಚು ರೂಪಿಸಿದ್ದ. ಅಲ್ಲದೆ, 30 ಮಾತ್ರೆಗಳನ್ನು ನುಂಗಿಸಿ ಆಕೆಯನ್ನು ಕೊಲ್ಲಲು ಪ್ಲಾನ್ ಮಾಡಿದ್ದ ಎಂಬ ಆರೋಪದಡಿ ಪೊಲೀಸರಿಂದ ಬಂಧಿಸಲ್ಪಟ್ಟಿದ್ದಾನೆ.

ಪ್ರಿತಿ ಹೆಸರಿನಲ್ಲಿ ಎರಡು-ಮೂರು ಬಾರಿ ಬಲವಂತವಾಗಿ ದೈಹಿಕ ಸಂಪರ್ಕ ಮಾಡಿದ್ದು, ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರಗೈದಿದ್ದ ಮನೋಜ್​ನನ್ನು ಪ್ರಶ್ನಿಸಿದ್ದಕ್ಕೆ ಯುವತಿಗೆ ಮನೋಜ್ ಪೋಷಕರಿಂದಲೂ ಕೊಲೆ‌ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಮನೋಜ್ ತಂದೆ ಎಂ.ಎಸ್. ನಾರಾಯಣ್ ಸೇರಿದಂತೆ ಅವರ ಕುಟುಂಬ ಸದಸ್ಯರ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಯುವತಿ ದೂರಿನಲ್ಲಿ 'ಮನೋಜ್ ಅಲಿಯಾಸ್ ಹೃತಿಕ್ ಎಂಬಾತ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಓದುತ್ತಿದ್ದಾಗ ಪರಿಚಯವಾಗಿದ್ದು, ಕಳೆದ ನಾಲ್ಕೂವರೆ ವರ್ಷಗಳಿಂದ ನನ್ನನ್ನು ಮದುವೆಯಾಗುವುದಾಗಿ ನಂಬಿಸಿ, ಅತ್ತು ಕರೆದು ಗೋಳಾಡಿ ನನ್ನನ್ನು ಬೆದರಿಸಿ ಪ್ರೀತಿಸುವುದಾಗಿ ಹೇಳಿ ಸುಮಾರು ಎರಡು-ಮೂರು ಬಾರಿ ಅವರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನನ್ನನ್ನು ಅವರ ಮನೆಗೆ ಕರೆದುಕೊಂಡು ಹೋಗಿ ಬಲವಂತವಾಗಿ ನನ್ನ ಇಚ್ಛೆಗೆ ವಿರುದ್ಧವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಈ ವಿಚಾರವನ್ನು ಅವರ ತಂದೆ, ತಾಯಿ ಮತ್ತವರ ಅಕ್ಕನಿಗೆ ತಿಳಿಸಿ, ಅವರ ಜೊತೆ ಮದುವೆ ವಿಷಯ ಪ್ರಸ್ತಾಪಿಸಿದಾಗ ಅವರು ನನ್ನನ್ನು ಬಾಯಿಗೆ ಬಂದಂತೆ ಬೈದು , ನಿನಗೆ ಸ್ವಲ್ಪ ಹಣವನ್ನು ಬೇಕಾದರೆ ಕೊಡುತ್ತೇವೆ ಎಂದರು. ಅಷ್ಟೇ ಅಲ್ಲದೆ ಅವರ ಬೇಕರಿಯಲ್ಲಿ ಕೆಲಸ ಮಾಡುವ ಹೆಚ್.ಆರ್ ಅವರನ್ನು ಕರೆದುಕೊಂಡು ಬಂದು ಅವರಿಂದ ನನಗೆ ಬೈಯಿಸಿದ್ದಾರೆ.

ಜನವರಿ 23 ರಂದು ರಾತ್ರಿ ವೇಳೆ ಮನೋಜ್ ಬಂದು ನನಗೆ ಬಾಯಿಗೆ ಬಂದಂತೆ ಬೈದು ನನ್ನನ್ನು ಅವನ ಕಾರಿನಲ್ಲಿ ಕೂರಿಸಿಕೊಂಡು 20 ರಿಂದ 30 ಮಾತ್ರೆಗಳನ್ನು ಬಲವಂತವಾಗಿ ನನ್ನ ಬಾಯಿಗೆ ತುರುಕಿ ಸಾಯಿಸಲು ಪ್ರಯತ್ನಪಟ್ಟಿದ್ದಾನೆ. ನಂತರ ಆತನೇ ನನ್ನನ್ನು ಆಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದ ಕಾರಣ ತಡವಾಗಿ ದೂರು ನೀಡುತ್ತಿದ್ದೇನೆ. ಇವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು' ಸಂತ್ರಸ್ತೆ ದೂರನ್ನು ನೀಡಿದ್ದು, ಯುವತಿ ನೀಡಿರುವ ದೂರಿನ ಮೇರೆಗೆ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದತ್ತು ಪುತ್ರನಿಂದ ಸಾಕಿದ ತಂದೆಗೆ ಕಿರುಕುಳ: ತಂದೆ ತಾಯಿ‌ ಇಲ್ಲದ ಅನಾಥನಿಗೆ ಆಶ್ರಯ ನೀಡಿದ್ದೇ ತಪ್ಪಾಗಿದೆ. ಹೌದು, ಸಾಕು ತಂದೆಗೆ ಬೆದರಿಕೆ ಹಾಕುತ್ತಿದ್ದದಲ್ಲದೆ ಅವರ ಒಡೆತನದ ಮನೆಗಳ ಬಾಡಿಗೆದಾರರಿಗೆ ಮನೆ ಖಾಲಿ ಮಾಡುವಂತೆ ಧಮ್ಕಿ ಹಾಕುತ್ತಿದ್ದವನನ್ನು ಸದಾಶಿವನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಉತ್ತಮ್ ಕುಮಾರ್ ಎಂಬಾತ ಬಂಧಿತ ಆರೋಪಿಯಾಗಿದ್ದು, ಈತನನ್ನು ಮಂಜುನಾಥ್ ಎಂಬುವವರು ದತ್ತು ಪಡೆದು ತಾವೇ ಸಾಕಿಕೊಂಡಿದ್ದರು.

The arrested accused is Uttam Kumar
ಬಂಧಿತ ಆರೋಪಿ ಉತ್ತಮ್​ ಕುಮಾರ್​

ಆದರೆ ಈತ ನಿಯತ್ತಿಲ್ಲದ ಮಗನಾಗಿ 2018 ರಲ್ಲೆ ಕ್ಷುಲ್ಲಕ ವಿಚಾರಕ್ಕೆ ಪ್ರೀತಿ ನೀಡಿ ಸಾಕಿದ ತಾಯಿಯ ಮೈಮೇಲೆ ಪೆಟ್ರೊಲ್ ಸುರಿದು ಬೆಂಕಿ ಹಚ್ಚಿದ್ದ. ಹೀಗಾಗಿ ಅಂದು ಈತನನ್ನು ಬಂಧಿಸಿ ಜೈಲಿಗಟ್ಟಲಾಗಿತ್ತು. ಒಂದೂವರೆ ವರ್ಷದ ಹಿಂದೆ ಜೈಲಿನಿಂದ ಹೊರ ಬಂದಿರುವ ಆರೋಪಿ ಉತ್ತಮ್ ಕುಮಾರ್​ನ ಬುದ್ದಿ ಸ್ವಲ್ಪವು ಬದಲಾಗದೆ, ವಾಪಸ್​ ತನ್ನ ಸಾಕು ತಂದೆ ಬಳಿ ಬಂದು ಅವರಿಗೆ ಬೆದರಿಕೆ ಹಾಕುವುದಲ್ಲದೇ ಅವರ ಒಡೆತನದ ಮನೆಗಳ ಬಾಡಿಗೆದಾರರ ಮನೆಗೆ ನುಗ್ಗಿ ದಾಂಧಲೆ ಮಾಡಿದ್ದಾನೆ. ತಂದೆ ಮಂಜುನಾಥ್ ಹೆಸರಿನಲ್ಲಿರುವ ಮನೆಗಳ‌ ಬಾಡಿಗೆ ತನಗೆ ಬರಬೇಕು ಎಂದು ಬಾಡಿಗೆದಾರ ಮನೋಹರ್ ಪಾಂಡು ಲಮಾಣಿ ಎಂಬುವವರ ಮನೆಗೆ ತೆರಳಿ ಮಾರಕಾಸ್ತ್ರ ತೋರಿಸಿ ಆವಾಜ್ ಹಾಕಿದ್ದ.

ಹಾಗಾಗಿ ವಿಚಾರ ತಿಳಿದ ಸದಾಶಿವನಗರ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಲು ಹೋದಾಗ ಮಾರಕಾಸ್ತ್ರದ ಸಮೇತ ತನ್ನ ಮನೆಗೆ ನುಗ್ಗಿದ್ದ ಆರೋಪಿ ಹೈಡ್ರಾಮಾ ಸೃಷ್ಟಿಸಿದ್ದ. ಮನೆಯಲ್ಲಿರುವ ಯಾರಿಗೆ ಏನು ಮಾಡಿಬಿಡ್ತಾನೊ ಅನ್ನೋ‌ ಭಯದಲ್ಲಿದ್ದ ಪೊಲೀಸರು ಕೊನೆಗೂ ಆರೋಪಿಯನ್ನು ಬಂಧಿಸಿದ್ದು, ಶಸ್ತ್ರಾಸ್ತ್ರ ಕಾಯ್ದೆಯಡಿ ಜೈಲಿಗಟ್ಟಿದ್ದಾರೆ‌.

ಇದನ್ನೂ ಓದಿ: ಸ್ನೇಹಿತರೊಂದಿಗೆ ಜಾಲಿ ರೈಡ್​ ಹೋಗಿದ್ದನ್ನು ಪ್ರಶ್ನಿಸಿದ ಪ್ರಿಯಕರ.. ಮನನೊಂದ ಬಾಲಕಿ ಆತ್ಮಹತ್ಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.