ಮೈಸೂರು : ಇಲ್ಲೊಬ್ಬ ಮಹಿಳೆ ಒಂದೆರಡಲ್ಲ, ಮೂರು ಮದುವೆಯಾಗಿದ್ದಾಳೆ. ಅಲ್ಲದೇ ಬೇರೆ ವ್ಯಕ್ತಿ ಜತೆ ಇರುವಾಗ ರೆಡ್ ಹ್ಯಾಂಡ್ ಆಗಿ ಮೂರನೇ ಗಂಡನ ಕೈಗೆ ಸಿಕ್ಕಿಬಿದ್ದಿದ್ದಾಳೆ. ಈ ಘಟನೆ ಮೈಸೂರಿನ ಉದಯಗಿರಿಯಲ್ಲಿ ನಡೆದಿದೆ. ಮೈಸೂರು ನಗರದ ಉದಯಗಿರಿಯ ನಿವಾಸಿಯಾಗಿರುವ ನಿಫಾ ಖಾನ್ ಎಂಬಾಕೆ ಈಗಾಗಲೇ ಮೂರು ಮದುವೆಯಾಗಿದ್ದಾಳೆ.
ಟಿಂಡರ್ ಆ್ಯಪ್ ಮೂಲಕ ಹುಡುಗರನ್ನು ಪರಿಚಯ ಮಾಡಿಕೊಂಡು, ಅವರಿಗೆ ಮೋಸ ಮಾಡುವುದೇ ಈಕೆಯ ಕೆಲಸವಾಗಿದೆ. ಈಕೆ 2021ರಲ್ಲಿ ಮೈಸೂರಿನ ರಾಜೀವ್ ನಗರದ ಆಜಾಮ್ ಖಾನ್ ಎಂಬುವರ ಜೊತೆ ಮದುವೆಯಾಗಿದ್ದಾರೆ. ಅದಕ್ಕೂ ಮುನ್ನ ಎರಡು ಮದುವೆಯಾಗಿದ್ದು, ಅದನ್ನು ತಿಳಿಯದ ಹಾಗೆ ಮುಚ್ಚಿಟ್ಟಿದ್ದಾಳೆ.
ಬೇರೊಬ್ಬರಿಗೆ ಯಾಮಾರಿಸಿ ಮದುವೆಯಾಗುವುದೇ ಇವಳ ಕೆಲಸವಾಗಿದೆ. ಮದುವೆಯಾದ ನಂತರ ಆಜಾಮ್ ಖಾನ್ ಅವರಿಗೆ ನಿಫಾ ಖಾನ್ ಬೇರೆ ಪುರುಷರ ಜೊತೆ ಆನ್ಲೈನ್ನಲ್ಲಿ ಮೆಸೇಜ್ ಚಾಟಿಂಗ್ ಮಾಡುವುದು ಮತ್ತು ಮೀಟ್ ಮಾಡುವ ವಿಚಾರ ಗೊತ್ತಾಗಿದೆ. ಅಲ್ಲದೇ ಈಕೆ ಬೇರೊಬ್ಬನ ಜೊತೆ ಇರುವಾಗ ಆಜಾಮ್ ಖಾನ್ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾಳೆ.
ಇದನ್ನೂ ಓದಿ: ಮೂವರು ಹೆಂಡ್ತಿಯರ ಗಂಡನ ಕೊಲೆ ಪ್ರಕರಣ: ಪತಿಯ ಹತ್ಯೆಗೆ 10 ಲಕ್ಷ ಸುಪಾರಿ ಕೊಟ್ಟಿದ್ದು ಎರಡನೇ ಪತ್ನಿ!
ಇದರಿಂದ ಬೇಸತ್ತ ಆಜಾಮ್ ಖಾನ್, ನಿಫಾ ಖಾನ್ ವಿರುದ್ಧ ಸಾಕ್ಷಾಧಾರಗಳ ಸಮೇತ ಉದಯಗಿರಿ ಪೊಲೀಸರಿಗೆ ದೂರನ್ನು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸಿದ ನಂತರ ಈಕೆ ಮೂರು ಮದುವೆಯಾಗಿರುವ ವಿಷಯ ತಿಳಿದು ಬಂದಿದೆ. ಇನ್ನೂ ಎಷ್ಟು ಜನರಿಗೆ ಮೋಸ ಮಾಡಿದ್ದಾಳೆ ಎಂಬುದು ಇನ್ನಷ್ಟು ತನಿಖೆಯಿಂದ ತಿಳಿಯಬೇಕಿದೆ.