ಮೈಸೂರು: ಜಿಲ್ಲೆಯ ತಿ.ನರಸೀಪುರ ತಾಲೂಕಿನ ಮದ್ಗಾರ್ ಲಿಂಗಯ್ಯನಹುಂಡಿ ಗ್ರಾಮದ ಬಳಿ ಎರಡು ದಿನಗಳ ಹಿಂದೆ ಯುವಕ ಚಿರತೆ ದಾಳಿಗೆ ಬಲಿಯಾಗಿದ್ದ. ಇದರ ಬೆನ್ನಲ್ಲೇ ಗ್ರಾಮದ ಮಲ್ಲಿಕಾರ್ಜುನ ಸ್ವಾಮಿ ಬೆಟ್ಟದಲ್ಲಿ ಜೋಡಿ ಚಿರತೆಗಳು ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ಮಹಾರಾಜ ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದ ಮಂಜುನಾಥ್ (18) ಎಂಬ ಯುವಕ ಸ್ನೇಹಿತರೊಂದಿಗೆ ಪೂಜೆಗೆಂದು ಹೋಗಿದ್ದಾಗ ಘಟನೆ ನಡೆದಿತ್ತು. ಮಲ್ಲಿಕಾರ್ಜುನ ಸ್ವಾಮಿ ಬೆಟ್ಟದ ಸಮೀಪದ ದೇವಾಲಯಕ್ಕೆ ಯುವಕರು ಪೂಜೆಗೆಂದು ತೆರಳಿದ್ದರು.
ಯುವಕನನ್ನು ಬಲಿ ಪಡೆದಿದ್ದ ಬೆಟ್ಟದಲ್ಲೇ ಇದೀಗ ಜೋಡಿ ಚಿರತೆಗಳನ್ನು ಕಂಡು ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. ಘಟನೆಯ ಬಳಿಕ ಗ್ರಾಮಸ್ಥರ ಆಕ್ರೋಶಕ್ಕೆ ಮಣಿದ ಅರಣ್ಯ ಇಲಾಖೆ ಚಿರತೆಗಳ ಸೆರೆಗಾಗಿ ಬೋನು ಇರಿಸಿದೆ. ಆದರೆ ಚಾಲಾಕಿ ಚಿರತೆಗಳು ಬೋನಿಗೆ ಬೀಳದೇ ಅರಣ್ಯ ಇಲಾಖೆಗೆ ಚಳ್ಳೆಹಣ್ಣು ತಿನ್ನಿಸುತ್ತಿವೆ.
ಇದನ್ನೂ ಓದಿ: ಮೈಸೂರು: ಬೆಟ್ಟಕ್ಕೆ ತೆರಳಿದ್ದಾಗ ಚಿರತೆ ದಾಳಿ, ಯುವಕ ಬಲಿ