ಮೈಸೂರು: ಕೂಲಿ ಕೆಲಸ ಸಿಗದಿದ್ದಕ್ಕೆ ಮನನೊಂದ ಕೂಲಿ ಕಾರ್ಮಿಕನೋರ್ವ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಣಸೂರು ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಹಳೆ ಸೇತುವೆ ಬಳಿ ವಾಸವಾಗಿರುವ ನಿವಾಸಿ ರಾಜು(40) ಆತ್ಮಹತ್ಯೆ ಮಾಡಿಕೊಂಡ ಕೂಲಿ ಕಾರ್ಮಿಕ. 15 ದಿನಗಳಿಂದ ಕೂಲಿ ಸಿಗದೆ ಜೀವನ ನಡೆಸಲು ಕಷ್ಟಪಡುತ್ತಿದ್ದ ರಾಜು, ಲಕ್ಷ್ಮಣ ತೀರ್ಥ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹುಣಸೂರು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.