ಮೈಸೂರು: ವಿಧವೆ ಅತ್ತಿಗೆಯೊಂದಿಗೆ ಅಕ್ರಮ ಸಂಸಾರ ನಡೆಸಿ, ಆಕೆಯ ಅಪ್ರಾಪ್ತ ಮಗಳನ್ನು ಮೈದುನನೇ ಅಪಹರಿಸಿರುವ ಘಟನೆ ನಂಜನಗೂಡು ತಾಲೂಕಿನ ಇಮ್ಮಾವುಹುಂಡಿಯಲ್ಲಿ ನಡೆದಿದೆ.
ಇಮ್ಮಾವುಹುಂಡಿ ಗ್ರಾಮದ ಮಹಿಳೆ ಅನಾರೋಗ್ಯದಿಂದ ಪತಿ ಸಾವಿಗೀಡಾದ ನಂತರ ಮೈದುನನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು ಎನ್ನಲಾಗ್ತಿದೆ. ಆದರೆ ಆತ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ನಾಪತ್ತೆಯಾಗಿದ್ದಾನೆ.
ಈ ಸಂಬಂಧ ಮಹಿಳೆಯು ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ನನ್ನ ಮತ್ತು ಮಗಳ ಬಾಳನ್ನು ಪಾಪಿ ಹಾಳು ಮಾಡಿದ್ದಾನೆ. ಅವರನ್ನು ಮನೆಗೆ ಕರೆದುಕೊಂಡು ಬರಬೇಡಿ. ಅವನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮಹಿಳೆ ಮನವಿ ಮಾಡಿದ್ದಾಳೆ.