ETV Bharat / state

ಮೈಸೂರಿನಲ್ಲಿ ಇಂದು 7 ಮಂದಿ ಡಿಸ್ಚಾರ್ಜ್, ಮತ್ತಿಬ್ಬರಿಗೆ ಕೊರೊನಾ ದೃಢ: 86ಕ್ಕೇರಿದ ಸೋಂಕಿತರ ಸಂಖ್ಯೆ

author img

By

Published : Apr 21, 2020, 6:29 PM IST

ಮೈಸೂರಿನಲ್ಲಿ ಇಂದು ಮತ್ತೆ ಇಬ್ಬರಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿದ್ದು, ಜಿಲ್ಲೆಯಲ್ಲಿನ ಸೋಂಕಿತರ ಸಂಖ್ಯೆ 86ಕ್ಕೆ ಏರಿಕೆಯಾಗಿದೆ.

7 people discharged in Mysore
ಮೈಸೂರಿನಲ್ಲಿ ಇಂದು 7 ಮಂದಿ ಡಿಸ್ಚಾಜ್೯, ಇಬ್ಬರಿಗೆ ಕೊರೊನಾ ದೃಢ

ಮೈಸೂರು: ನಗರದಲ್ಲಿ ಇಂದು 7 ಮಂದಿ ಡಿಸ್ಚಾರ್ಜ್ ಆಗಿದ್ದು, ಮತ್ತಿಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 86ಕ್ಕೇರಿದೆ. ಈ ಪ್ರಕರಣಗಳ ಪೈಕಿ ಈವರೆಗೆ 31 ಮಂದಿ ಡಿಸ್ಚಾರ್ಜ್ ಆಗಿದ್ದು, 55 ಪ್ರಕರಣಗಳು ಸಕ್ರಿಯವಾಗಿವೆ.

7 people discharged in Mysore
ಮೈಸೂರಿನಲ್ಲಿ ಇಂದು 7 ಮಂದಿ ಡಿಸ್ಚಾರ್ಜ್, ಮತ್ತಿಬ್ಬರಿಗೆ ಕೊರೊನಾ ದೃಢ

ರೋಗಿ ಸಂಖ್ಯೆ 416 ಹಾಗೂ 417 ಇವರಿಬ್ಬರಿಗೆ ರೋಗಿ ಸಂಖ್ಯೆ 52ರ ದ್ವಿತೀಯ ಸಂಪರ್ಕದಿಂದ ಕೊರೊನಾ ಸೋಂಕು ತಗುಲಿದ್ದು, ಇವರಿಬ್ಬರನ್ನು ಕೋವಿಡ್-19 ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಲ್ಲದೇ ಇಂದು ಒಂದೇ ದಿನ 7 ಮಂದಿ‌ ಡಿಸ್ಚಾರ್ಜ್ ಆಗಿದ್ದಾರೆ‌. ಜುಬಿಲಂಟ್ ಕಾರ್ಖಾನೆಯ ಮೊದಲ ಸೋಂಕಿತ ವ್ಯಕ್ತಿ ಪಿ-52ರ ದ್ವಿತೀಯ ಸಂಪರ್ಕದಿಂದ ಮತ್ತೆ ಇಬ್ಬರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 86ಕ್ಕೆ ಏರಿದ್ದು, ಅದರಲ್ಲಿ ಇಲ್ಲಿವರೆಗೆ 31 ಜನ ಆಸ್ಪತ್ರೆಯಿಂದ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಉಳಿದ 55 ಜನ ಕೋವಿಡ್ -19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ‌ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.