ETV Bharat / state

ಬ್ರಿಟನ್​ನಿಂದ ಮೈಸೂರಿಗೆ 7 ಮಂದಿ ಬಂದಿದ್ದಾರೆ : ಆತಂಕ ಬೇಡವೆಂದ ಆರೋಗ್ಯಾಧಿಕಾರಿ - DHO Dr Amarnath

ಬ್ರಿಟನ್​ನಿಂದ ಮೈಸೂರಿಗೆ ಆಗಮಿಸಿದ 7 ಮಂದಿಗೆ ಈಗಾಗಲೇ ಪುರಭವನದಲ್ಲಿ ಕೊರೊನಾ ಪರೀಕ್ಷೆ ಮಾಡಲಾಗುವುದು. ಈ ಬಗ್ಗೆ ಸಾರ್ವಜನಿಕರು ಭಯ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಟಿ ಅಮರನಾಥ್​ ಹೇಳಿದ್ದಾರೆ.

DHO Dr Amarnath
ಆರೋಗ್ಯಾಧಿಕಾರಿ ಡಾ.ಟಿ ಅಮರ್ ನಾಥ್
author img

By

Published : Dec 23, 2020, 12:28 PM IST

ಮೈಸೂರು: ಬ್ರಿಟನ್​ನಿಂದ 7 ಮಂದಿ ಮೈಸೂರಿಗೆ ವಾಪಸ್​ ಆಗಿದ್ದಾರೆ. ಅವರನ್ನೆಲ್ಲಾ ಪತ್ತೆ ಮಾಡಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಟಿ. ಅಮರನಾಥ್​ ತಿಳಿಸಿದ್ದಾರೆ.

ಆರೋಗ್ಯಾಧಿಕಾರಿ ಡಾ.ಟಿ ಅಮರ್ ನಾಥ್ ಮಾಹಿತಿ

ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬ್ರಿಟನ್ ನಿಂದ ಆಗಮಿಸಿದ 7 ಮಂದಿಗೆ ಪುರಭವನದಲ್ಲಿ ಕೊರೊನಾ ಪರೀಕ್ಷೆ ಮಾಡಲಾಗುವುದು. ಅವರ ವರದಿ ನೆಗೆಟಿವ್ ಅಥವಾ ಪಾಸಿಟಿವ್ ಇರಲಿ, ಅವರನ್ನು ಹೋಂ ಕ್ವಾರಂಟೈನ್​ ಮಾಡಲಾಗುವುದು. ಸದ್ಯಕ್ಕೆ ಆರೋಗ್ಯ ಇಲಾಖೆಯ ಗೈಡ್ ಲೈನ್ ಪ್ರಕಾರ ಮತ್ತಷ್ಟು ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಬಗ್ಗೆ ಸಾರ್ವಜನಿಕರು ಆತಂಕ ಪಡದೆ, ಸುರಕ್ಷಿತ ಕಡೆ ಗಮನ ಹರಿಸಬೇಕು. ಕೊರೊನಾ ಹೊಸ ರೂಪಾಂತರ ಬಗ್ಗೆ ಆರೋಗ್ಯ ಇಲಾಖೆಯಿಂದ ಸಮಗ್ರ ಮಾಹಿತಿ ಇನ್ನೂ ಬಂದಿಲ್ಲವೆಂದು ಮಾಹಿತಿ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.