ಮೈಸೂರು: ಸರಳ ದಸರಾವಾದರೂ ಪಾಲಿಕೆಗೆ ದಸರಾ ಆಚರಣೆಗೆ 25 ಕೋಟಿ ರೂ. ಬೇಕು ಎಂದು ಮೇಯರ್ ತಸ್ನೀಂ ತಿಳಿಸಿದ್ದಾರೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ನಾಳೆ ಬೆಂಗಳೂರಿನಲ್ಲಿ ಸಿಎಂ ನೇತೃತ್ವದಲ್ಲಿ ದಸರಾ ಉನ್ನತ ಮಟ್ಟದ ಸಭೆ ನಡೆಯಲಿದೆ. ಈ ಸಭೆಯ ಮುನ್ನ ಇಂದು ಪಾಲಿಕೆಯಲ್ಲಿ ಸದಸ್ಯರ ಸಭೆ ನಡೆಸಿ ಎಲ್ಲರೂ ಚರ್ಚೆ ನಡೆಸಿದ್ದು, ಪಾಲಿಕೆಗೆ ದಸರಾ ಆಚರಿಸಲು 25 ಕೋಟಿ ರೂ. ಬೇಕು ಎಂದು ಸಿಎಂಗೆ ಮನವಿ ಮಾಡಲು ನಿರ್ಧರಿಸಲಾಗಿದೆ ಎಂದರು.
ಇನ್ನು ಕಳೆದ 2 ವರ್ಷಗಳಿಂದ ದಸರಾದ ಯಾವುದೇ ಫಂಡ್ ಬಿಡುಗಡೆಯಾಗಿಲ್ಲ. ಕಳೆದ ಬಾರಿ ದಸರಾದಲ್ಲಿ 5 ಕೋಟಿ ಕೊಡುತ್ತೇನೆ ಎಂದು ಹೇಳಿದ್ದು, ಒಂದು ರೂಪಾಯಿ ನೀಡಿಲ್ಲ. ಈ ಬಾರಿ ಯಾವ ರೀತಿ ದಸರಾ ಮಾಡಬೇಕು ಎಂದು ತೀರ್ಮಾನವಾಗಿಲ್ಲ. ಪಾಲಿಕೆ ಕಮಿಟಿ ಸದಸ್ಯರು ಸರಳ ದಸರಾ ಆಚರಿಸಬೇಕು ಎಂದು ತೀರ್ಮಾನ ಮಾಡಿದ್ದೇವೆ. ದಸರಾ ಬಂತು ಎಂದರೆ ನಮಗೂ ಫಂಡ್ ಸಿಗುತ್ತದೆ ಎಂಬ ನಿರೀಕ್ಷೆ ಇರುತ್ತದೆ. ಅದಕ್ಕಾಗಿ 25 ಕೋಟಿ ಬೇಕೆಂದು ಸಿಎಂಗೆ ಕೇಳುತ್ತೇವೆ ಎಂದರು.