ಮೈಸೂರು: ತಗ್ಗುತ್ತಿರುವ ಕೋವಿಡ್‌ನಿಂದ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಲು ಮೈಸೂರು ರೈಲ್ವೆ ವಿಭಾಗವು ಮುಂದಾಗಿದ್ದು, ಡಿ. 7ರಿಂದ 22 ರೈಲುಗಳ ಸಂಚಾರ ಆರಂಭವಾಗಲಿದೆ.
ಕೋವಿಡ್ ಹಿನ್ನೆಲೆಯಲ್ಲಿ ಮಾರ್ಚ್ 22ರಿಂದ ರೈಲುಗಳ ಸೇವೆ ರದ್ದುಗೊಳಿಸಲಾಗಿತ್ತು. ಪ್ರಯಾಣಿಕರ ಒತ್ತಾಯದ ಮೇರೆಗೆ ಮೈಸೂರು-ಬೆಂಗಳೂರಿಗೆ ಮಾತ್ರ ಸೀಮಿತಗೊಳಿಸಲಾಗಿತ್ತು. ಆದರೀಗ ಕೋವಿಡ್ ಅಬ್ಬರ ಕಡಿಮೆಯಾಗುತ್ತಿರುವುದರಿಂದ ಕಾಯ್ದಿರಿಸದ ಮತ್ತು ಕಾಯ್ದಿರಿಸಿದ ಪ್ರಯಾಣಿಕ ಎಕ್ಸ್ಪ್ರೆಸ್ ರೈಲುಗಳನ್ನು ಸಾಮಾನ್ಯ ಶುಲ್ಕದೊಂದಿಗೆ ಓಡಿಸಲು ನಿರ್ಧರಿಸಿದೆ.
ಡಿ. 7ರಿಂದ 31ರವರೆಗೆ ವಿವಿಧ ಜಿಲ್ಲೆಗಳು ಹಾಗೂ ರಾಜ್ಯಗಳಿಗೆ ಸಂಚರಿಸುವ ರೈಲು ಗಾಡಿಗಳ ಪಟ್ಟಿ ಇಂತಿದೆ.