ಮಂಡ್ಯ: ಕೆ.ಆರ್. ಎಸ್ ಸಂಪೂರ್ಣ ಭರ್ತಿ ಹಿನ್ನೆಲೆ, ನವೆಂಬರ್ 2 ರಂದು ಕಾವೇರಿ ನದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಾಗಿನ ಅರ್ಪಿಸಲಿದ್ದಾರೆ.
ಮುಖ್ಯಮಂತ್ರಿಯಾದ ಕೆಲ ಸಮಯದಲ್ಲೇ ಸಿಎಂ ಬೊಮ್ಮಾಯಿ ಕಾವೇರಿ ಹಾಗೂ ಕಪಿಲೆಗೆ ಬಾಗಿನ ಅರ್ಪಿಸುವ ಸೌಭಾಗ್ಯ ಪಡೆದಿದ್ದು, ಕಾವೇರಿಗೂ ಮುನ್ನ ಕಪಿಲೆಗೆ ಬಾಗಿನ ಅರ್ಪಿಸಲು ಮೈಸೂರಿನ ಹೆಚ್.ಡಿ. ಕೋಟೆಯಲ್ಲಿರುವ ಕಬಿನಿ ಡ್ಯಾಂಗೆ ತೆರಳಲಿದ್ದಾರೆ.
ಕಬಿನಿ ಡ್ಯಾಂಗೆ ಬಾಗಿನ ಅರ್ಪಿಸಿದ ಬಳಿಕ ಬೆ. 11.35ಕ್ಕೆ ಹೆಲಿಕಾಪ್ಟರ್ ಮೂಲಕ ಕೆ ಆರ್ ಸಾಗರದ ಹೆಲಿಪ್ಯಾಡ್ಗೆ ಬಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಎಸ್ ಡ್ಯಾಂಗೆ 12.00 ಗಂಟೆಗೆ ತಲುಪಲಿದ್ಆರೆ. ನಂತರ ಕಾವೇರಿ ಮಾತೆಗೆ ಬಾಗಿನ ಅರ್ಪಣೆ ಮಾಡಲಿದ್ದಾರೆ. ಬಳಿಕ ಮ. 1.15 ಕ್ಕೆ ಹೆಲಿಕಾಪ್ಟರ್ ಮೂಲಕ ಬೆಂಗಳೂರಿನತ್ತ ಪ್ರಯಾಣ ಬೆಳೆಸಲಿದ್ದಾರೆ.
ಈ ಬಾರಿ ಜಲಾಶಯ ತುಂಬುವುದು ಕಷ್ಟ ಎನ್ನಲಾಗಿತ್ತು. ಹಾಗಾಗಿ ಕೆ.ಆರ್.ಎಸ್ ಜಲಾಶಯ ತುಂಬಲಿ, ವರುಣ ಕೃಪೆ ತೋರಲಿ ಎಂದು ಕಾವೇರಿ ಮಾತೆಗೆ ಅ. 7ರಂದು ಮುಖ್ಯಮಂತ್ರಿ ಪೂಜೆ ಸಲ್ಲಿಸಿದ್ದರು. ಸಿಎಂ ಪೂಜೆ ಸಲ್ಲಿಸಿದ ಬಳಿಕ ಕಾವೇರಿ ಜಲಾಶಯ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದು, ಬಾಗಿನ ಸರ್ಪಿಸುವ ಭಾಗ್ಯವನ್ನು ಸಿಎಂ ಬೊಮ್ಮಾಯಿ ಪಡೆದುಕೊಂಡಿದ್ದಾರೆ.
ಕೆಆರ್‌ಎಸ್ ನೀರಿನ ಮಟ್ಟ:
- ಜಲಾಶಯದ ನೀರಿನ ಗರಿಷ್ಠ ಮಟ್ಟ -124.80 ಅಡಿ
- ಜಲಾಶಯದ ಇಂದಿನ ನೀರಿನ ಮಟ್ಟ- 124.80 ಅಡಿ
- ಇಂದಿನ ಒಳಹರಿವಿನ ಪ್ರಮಾಣ- 6,447 ಕ್ಯೂಸೆಕ್
- ಇಂದಿನ ಹೊರ ಹರಿವಿನ ಪ್ರಮಾಣ- 4,859 ಕ್ಯೂಸೆಕ್
- ಜಲಾಶಯದ ಗರಿಷ್ಠ ನೀರಿನ ಸಂಗ್ರಹ - 49.452 ಟಿಎಂಸಿ
- ಇಂದಿನ ಸಂಗ್ರಹ -49.452 ಟಿಎಂಸಿ
ಇದನ್ನೂ ಓದಿ: ಸಿಂದಗಿ ಉಪಚುನಾವಣೆ ಫಲಿತಾಂಶ ಕುತೂಹಲ