ಮಂಡ್ಯ: ಮದ್ದೂರು ಸಮೀಪದ ವೈದ್ಯನಾಥಪುರದ ವೈದ್ಯನಾಥೇಶ್ವರ ದೇವಸ್ಥಾನದ ಮುಂದೆ ಹರಿಯುವ ಶಿಂಷಾ ನದಿಯಲ್ಲಿ ಮೂರು ಕಾಡಾನೆಗಳು ಕಂಡು ಬಂದಿದ್ದು, ಅವುಗಳನ್ನು ಕಾಡಿಗಟ್ಟುವ ಕಾರ್ಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ತೊಡಗಿದ್ದಾರೆ.
ಮುತ್ತತ್ತಿ ಅರಣ್ಯ ಪ್ರದೇಶದ ಕಡೆಯಿಂದ ಬಂದಿರುವ ಕಾಡಾನೆಗಳು, ಕೋಡಿಹಳ್ಳಿ ಭಾಗದಲ್ಲಿ ಬುಧವಾರ ಕಾಣಿಸಿಕೊಂಡಿದ್ದವು. ಇವುಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಿಮ್ಮೆಟ್ಟಿಸಿದ್ದರು. ಆದರೆ, ಗುರುವಾರ ವಾಪಸ್ ಬಂದಿದ್ದು, ಶಿಂಷಾ ನದಿಯಲ್ಲಿ ಕಾಣಿಸಿಕೊಂಡಿವೆ.
ಓದಿ : ಬೆಳಗಾವಿಯಲ್ಲಿ ಚಿರತೆ ಪ್ರತ್ಯಕ್ಷ ವದಂತಿ: ಸ್ಥಳದಲ್ಲೇ ಬೀಡುಬಿಟ್ಟ ಅರಣ್ಯ ಇಲಾಖೆ ಸಿಬ್ಬಂದಿ
ಆನೆಗಳನ್ನು ಮುತ್ತತ್ತಿ ಅರಣ್ಯ ಪ್ರದೇಶದ ಕಡೆಗೆ ಓಡಿಸುವ ಕಾರ್ಯಾಚರಣೆ ನಡೆಸಲಾಗ್ತಿದೆ ಎಂದು ಅರಣ್ಯಾಧಿಕಾರಿ ರತ್ನಾಕರ್ ತಿಳಿಸಿದ್ದಾರೆ. ಮದ್ದೂರು ತಾಲೂಕಿನ ಅವ್ವೇರಹಳ್ಳಿ ಬಳಿ ಮತ್ತೊಂದು ಆನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ.