ETV Bharat / state

ಪ್ರಿಯಕರನಿಗಾಗಿ ಪತಿಗೇ ಚಟ್ಟ ಕಟ್ಟಿದ ಪತ್ನಿ... ಮೂರು ತಿಂಗಳ ನಂತರ ಕೊಲೆ ಆರೋಪಿಗಳು ಅಂದರ್​ - ಪ್ರಿಯಕರನಿಗಾಗಿ ಪತಿಯನ್ನು ಕೊಂದ ಪತ್ನಿ

ಮಂಡ್ಯ ಜಿಲ್ಲೆಯಲ್ಲಿ ನಡೆದಿದ್ದ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಶೈಲಜಾ ತನ್ನ ಪ್ರಿಯಕರ ಹರೀಶ್ ಜೊತೆ ಸಂಬಂಧ ಉಳಿಸಿಕೊಳ್ಳಲು ತನ್ನ ಗಂಡನನ್ನು ಉಸಿರುಗಟ್ಟಿಸಿ ಸಾಯಿಸಿ ನಾಲೆಗೆ ಎಸೆದಿರುವುದು ಬೆಳಕಿಗೆ ಬಂದಿದೆ.

wife killed her husband
ಪ್ರಿಯಕರನಿಗಾಗಿ ಪತಿಯನ್ನು ಕೊಂದ ಪತ್ನಿ
author img

By

Published : Mar 4, 2020, 2:08 PM IST

ಮಂಡ್ಯ: ಪ್ರಿಯಕರನ ಜೊತೆ ವಿವಾಹೇತರ ಸಂಬಂಧ ಉಳಿಸಿಕೊಳ್ಳಲು ಪತ್ನಿಯೇ ಪತಿಯನ್ನು ಕೊಲೆಗೈದು, ನಾಲೆಗೆ ಹಾಕಿದ್ದ ಪ್ರಕರಣವನ್ನು ಬೇಧಿಸಿರುವ ಬಸರಾಳು ಪೊಲೀಸರು ಆರೋಪಿ ಮಹಿಳೆ ಸೇರಿದಂತೆ ಕೊಲೆಗೆ ಸಹಕಾರ ನೀಡಿದ ಪ್ರಿಯಕರ ಹಾಗೂ ಆತನ ಸ್ನೇಹಿತನನ್ನು ಬಂಧಿಸಿದ್ದಾರೆ.

2019ರ ಸೆಪ್ಟಂಬರ್ 29ರಂದು ಬಸರಾಳು ಸಮೀಪದ ನಾಲೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು. ಶವದ ಜಾಡು ಹಿಡಿದ ಪೊಲೀಸರು ಶವ ಕೆ.ಆರ್. ಪೇಟೆ ತಾಲೂಕಿನ ಸೊಳ್ಳೆಪುರ ಗ್ರಾಮದ ಜವರೇಗೌಡ ಎಂದು ಪತ್ತೆ ಮಾಡಿದ್ದರು.

ಪತಿ ಕೊಂದಿದ್ದ ಆರೋಪಿ ಮಹಿಳೆ ಸೇರಿ ಮೂವರ ಬಂಧನ

ಪ್ರಕರಣ ಸಂಬಂಧ ಜವರೇಗೌಡನ ಪತ್ನಿ ಶೈಲಜಾಳನ್ನು ಹಿಡಿದು ವಿಚಾರಣೆ ನಡೆಸಿದಾಗ, ಶೈಲಜಾ ತನ್ನ ಪ್ರಿಯಕರ ಹರೀಶ್ ಜೊತೆಗಿನ ಸಂಬಂಧ ಉಳಿಸಿಕೊಳ್ಳಲು ತನ್ನ ಗಂಡನನ್ನು ಉಸಿರುಗಟ್ಟಿಸಿ ಸಾಯಿಸಿ ನಾಲೆಗೆ ಎಸೆದಿರುವುದು ಬೆಳಕಿಗೆ ಬಂದಿದೆ.

ಪ್ರಕರಣ ಸಂಬಂಧ ಶೈಲಜಾ, ಈಕೆಯ ಪ್ರಿಯಕರ ಹರೀಶ್ ಹಾಗೂ ಹರೀಶ್ ಸ್ನೇಹಿತ ಆನಂದ ಎಂಬುವರನ್ನು ಬಂಧಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.