ಮಂಡ್ಯ: ಜನರ ಜೀವ ಉಳಿಸಿ ಎಂದು ಸರ್ಕಾರಕ್ಕೆ ಭಿಕ್ಷೆ ಬೇಡುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಡಳಿತ ಸರ್ಕಾರಕ್ಕೆ ತಿಳಿಸಿದರು.
ನಾಗಮಂಗಲದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಲಸಿಕೆ ಕೊರತೆಯಾಗಿದೆ. ಆನ್ಲೈನ್ ನೋಂದಣಿ ಮಾಡಿ ಅಂತ ಹೇಳಿದ್ರು, ಆದ್ರೆ ಸಿಎಂ ಉದ್ಘಾಟನೆ ಮಾಡಿ ಇವಾಗ ನಿಲ್ಲಿಸಿದ್ದಾರೆ. ಲಸಿಕೆಗೆ ನಾವು ಎಂಎಲ್‌ಎ, ಎಂಎಲ್‌ಸಿ ಫಂಡ್ನಿಂದ 100 ಕೋಟಿ ರೂ. ಕೊಡ್ತೇವೆ. ಪರ್ಮಿಷನ್ ಕೊಟ್ಟರೆ ಎಲ್ಲರಿಗೂ ಉಚಿತವಾಗಿ ಹಂಚುತ್ತೇವೆ ಎಂದರು.
ಲಸಿಕೆ ಕೊಡಿಸಲು ಸರ್ಕಾರ ಸಹ ನಮಗೆ ಅನುಮತಿ ಕೊಟ್ಟಿಲ್ಲ. ಅನುಮತಿ ಕೊಟ್ಟರೆ ಎಲ್ಲರಿಗೂ ಉಚಿತವಾಗಿ ಹಂಚುತ್ತೇವೆ. ಈ ವಿಷಯದಲ್ಲಿ ರಾಜಕಾರಣ ಮಾಡ್ತಿಲ್ಲ. ನಾವು ಜನಕ್ಕೆ ಸೇವೆ ಮಾಡಲು ಹೊರಟಿದ್ದೇವೆ. ಜೀವ ಉಳಿಸಿ ಎಂದು ಸರ್ಕಾರಕ್ಕೆ ಭಿಕ್ಷೆ ಬೇಡುತ್ತಿದ್ದೇವೆ ಎಂದು ಹೇಳಿದರು.
ಅಂತ್ಯ ಸಂಸ್ಕಾರಕ್ಕೆ ಜಾಗದ ಸಮಸ್ಯೆ ವಿಚಾರವಾಗಿ ಮಾತನಾಡಿದ ಅವರು, ಈ ಹಿಂದೆಯೇ ಅಶೋಕಣ್ಣರಿಗೆ ಹೇಳಿದ್ದೆ, ಬೆಂಗಳೂರು ಸುತ್ತ ಜಾಗ ಹುಡುಕು ಅಂತ. ಅದರಂತೆ ಇದೀಗ ಏನೋ ಮಾಡಿ ಸ್ವಲ್ಪ ಮಟ್ಟಿಗೆ ಕೊರತೆ ನೀಗಿಸಿದ್ದಾರೆ ಎಂದರು.