ETV Bharat / state

ಉರಿಗೌಡ ನಂಜೇಗೌಡ ನಮ್ಮ ಹೆಮ್ಮೆ: ಅಭಿಮಾನ ಮೆರೆದ ಸಚಿವ ಅಶ್ವತ್ಥ್ ನಾರಾಯಣ್ - ಈಟಿವಿ ಭಾರತ್ ಕನ್ನಡ ಸುದ್ದಿ

ಮೈಸೂರು ಪ್ರಾಂತ್ಯದ ಜನರನ್ನು ನರಹಂತಕ ಟಿಪ್ಪುವಿನಿಂದ ರಕ್ಷಿಸಿರುವ ಉರಿಗೌಡ ಹಾಗೂ ನಂಜೇಗೌಡರ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ಸಚಿವ ಅಶ್ವತ್ಥ್​ ನಾರಾಯಣ್ ಅವರು ಹೇಳಿದ್ದಾರೆ.

ಸಚಿವ ಅಶ್ವತ್ಥ್​ ನಾರಾಯಣ್
ಸಚಿವ ಅಶ್ವತ್ಥ್​ ನಾರಾಯಣ್
author img

By

Published : Mar 16, 2023, 9:37 PM IST

ಸಚಿವ ಅಶ್ವತ್ಥ್​ ನಾರಾಯಣ್

ಮಂಡ್ಯ: ಉರಿಗೌಡ, ನಂಜೇಗೌಡ ನಮ್ಮ ಹೆಮ್ಮೆ. ನಮ್ಮ ಅಭಿಮಾನ ಎಂದು ಮಂಡ್ಯದ ಕೆ ಆರ್ ಪೇಟೆಯಲ್ಲಿ ಸಚಿವ ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ. ಇತಿಹಾಸದಲ್ಲಿ‌ ಉರಿಗೌಡ, ನಂಜೇಗೌಡ ಇದ್ದರು ಎಂಬ ಸಂಪೂರ್ಣ ನಂಬಿಕೆ ನಮ್ಮದು. ಹೀಗಾಗಿ ನಮಗೆ ಅವರಿಬ್ಬರ ಮೇಲೆ ಅಭಿಮಾನವಿದೆ. ನರಹಂತಕ, ಮತಾಂಧನಿಂದ ಮೈಸೂರು ಪ್ರಾಂತ್ಯದ ಜನರನ್ನು ರಕ್ಷಣೆ ಮಾಡಿರುವುದು ನಮಗೆ ಹೆಮ್ಮೆ ಎಂದರು.

ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಅವರ ರಕ್ಷಣೆಯಲ್ಲಿ ಇವರು ಇದ್ದರು. ಹೀಗಾಗಿ ನಾವು ಇವರ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ತಾ ಇದೀವಿ. ಕಾಂಗ್ರೆಸ್‌ನವರಿಗೆ ಅಭ್ಯಂತರವಿದ್ದರೆ ನನಗೆ ಗೊತ್ತಿಲ್ಲ. ಕೇವಲ ಚುನಾವಣೆ ಇಟ್ಟುಕೊಂಡು ಮತಕ್ಕಾಗಿ ಕೀಳು ಮಟ್ಟಕ್ಕೆ ಇಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ಇದನ್ನು ನಾನು ಖಂಡಿಸುತ್ತೇನೆ. ಉರಿಗೌಡ, ನಂಜೇಗೌಡ ನಮ್ಮ ಹೆಮ್ಮೆ, ನಮ್ಮ ಅಭಿಮಾನ. ನಾವು ರಾಜಕೀಯಕ್ಕಾಗಿ ಏನೂ ಮಾಡಲ್ಲ. ಜನರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಬೇಕಾ? ಟಿಪ್ಪು ಬೇಕಾ?. ಕಾಂಗ್ರೆಸ್‌ನವರು ವಿಶ್ವಕಂಡ ನಾಲ್ವಡಿ ಅವರನ್ನು ನೆನಪು ಮಾಡಿಕೊಳ್ಳಬೇಕು. ಯಾಕೋ ಗೊತ್ತಿಲ್ಲ, ಕಾಂಗ್ರೆಸ್‌ನವರಿಗೆ ಟಿಪ್ಪು ಸುಲ್ತಾನ್ ನೆನಪು ಆಗ್ತಾನೆ. ಮತದಾರ ಪ್ರಭುಗಳು ಜಾಗೃತಿಯಿಂದ ಇದ್ದಾರೆ. ಅವರಿಗೆ ಅಭಿಮಾನ, ಸ್ವಾಭಿಮಾನ ಇದೆ. ಹೀಗಾಗಿ ಇವೆಲ್ಲವನ್ನು ಇಟ್ಟುಕೊಂಡು ಜನ ಉತ್ತರ ಕೊಡ್ತಾರೆ ಎಂದರು.

ಸಾವರ್ಕರ್ ನಮ್ಮ ಹೆಮ್ಮೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರು. ಅಂತಹ ಪರಿಸ್ಥಿತಿಯಲ್ಲಿ ಈಗಿನ ಒಬ್ಬ ರಾಜಕಾರಣಿ ಒಂದು ದಿನ ಅಂಡಮಾನ್‌ನಲ್ಲಿ ಇರಲಿ. ಆಗ ಮಾತಾಡೋಣಾ. ಆಗ ಇವರ ತ್ಯಾಗ, ಬಲಿದಾನ, ಶೌರ್ಯ, ಪರಾಕ್ರಮ, ಸಾಮಾಜಿಕ ಕಾಳಜಿ ಎಲ್ಲಾ ವ್ಯಕ್ತಿತ್ವ ಗೊತ್ತಾಗುತ್ತದೆ. ಇವೆಲ್ಲಾ ದೊಡ್ಡ ಮಾತು ಯಾಕೆ. ಮಹಾನ್ ಪುರುಷರ ಬಗ್ಗೆ ಹೇಳುವಂತವನು ತಮ್ಮ ಕಾರ್ಯಗಳ ಬಗ್ಗೆ ನೋಡಬೇಕು ಎಂದು ಹೇಳಿದರು.

ಭ್ರಷ್ಟಾಚಾರದ ಪಕ್ಷ ಕಾಂಗ್ರೆಸ್ ಪಕ್ಷ- ಅಶ್ವತ್ಥ್​ ನಾರಾಯಣ್ ​: ಸಿದ್ದರಾಮಯ್ಯ ಯಾವತ್ತೂ ತಮ್ಮ ಆಡಳಿತದ ಬಗ್ಗೆ ಮಾತಾಡಲ್ಲ. ತಮ್ಮ ಅಭಿವೃದ್ಧಿಯ ಬಗ್ಗೆ ಎಲ್ಲೂ ಮಾತಡಲ್ಲ. ಕೇವಲ ಆ ಭಾಗ್ಯ ಕೊಟ್ಟೆ, ಈ‌ ಭಾಗ್ಯ ಕೊಟ್ಟೆ ಅಂತಾರೆ. ಇವರಿಗಿಂತ ಚೆನ್ನಾಗಿ ನಮ್ಮ ಸರ್ಕಾರದಲ್ಲಿ ಭಾಗ್ಯ ಕೊಟ್ಟಿದ್ದೇವೆ. ನಾವು ಎಷ್ಟು ಅಕ್ಕಿ ಕೊಟ್ಟಿದ್ದೇವೆ ಅವರು ಎಷ್ಟು ಅಕ್ಕಿ ಕೊಟ್ಟಿದ್ದಾರೆ. ಭ್ರಷ್ಟಾಚಾರದಲ್ಲಿ ಇದ್ದವರು ಸಿದ್ದರಾಮಯ್ಯ, ಡಿ. ಕೆ ಶಿವಕುಮಾರ್ ಇನ್ನಿತರರು. ಭ್ರಷ್ಟಾಚಾರದ ಪಕ್ಷ ಕಾಂಗ್ರೆಸ್ ಪಕ್ಷ. ಕಾಂಗ್ರೆಸ್ ಪಕ್ಷವನ್ನು ಸಿಡಿ ಪಾರ್ಟಿ ಅಂತಾನೇ ಕರೆಯೋದು. ಇವರ ಬ್ಲಾಕ್ ಮೇಲ್ ಎಲ್ಲಾ ವರ್ಕೌಟ್ ಆಗಲ್ಲ. ಈ ಸಿಡಿ ಪಾರ್ಟಿಯ ಬ್ಲಾಕ್ ಮೇಲ್ ಏನೂ ಎಫೆಕ್ಟ್ ಇಲ್ಲ. ಇದೇ ಎಲ್ಲಾ ಔಟ್‌ಲೇಟ್ ಎಂದು ಕಾಂಗ್ರೆಸ್ ವಿರುದ್ದ ಕಿಡಿಕಾರಿದರು.

ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ನಾರಾಯಣಗೌಡರು ಪಾತ್ರವಹಿಸಿದ್ದಾರೆ : ಇದೇ ವೇಳೆ ಸಚಿವ ನಾರಾಯಣ್ ಗೌಡ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾತನಾಡಿ, ನಾರಾಯಣಗೌಡ ಅವರು ಎಲ್ಲೂ ಹೋಗಲ್ಲ. ನಾರಾಯಣಗೌಡ ಅವರನ್ನು ನಾನು ಕರೆಯೋದು ನಮ್ಮ ಬಹದ್ದೂರ್ ಗಂಡು ಅಂತಾ. ನಮ್ಮ ಮಂಡ್ಯದ ಗಂಡು ನಾರಾಯಣಗೌಡ. ಮಂಡ್ಯದಲ್ಲಿ ನಮ್ಮ ಪಕ್ಷದ ಅಕೌಂಟ್ ಓಪನ್ ಮಾಡಿದ್ದು ನಾರಾಯಣಗೌಡ. ನಮ್ಮ ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಅವರು ಪಾತ್ರರಾಗಿದ್ದಾರೆ. ಮಂಡ್ಯ ಇನ್ನೂ‌ ಹೆಚ್ಚಿನ ಅಭಿವೃದ್ಧಿಯಾಗಲು ಇಲ್ಲಿ ಇನ್ನಷ್ಟು ಜನ ನಮ್ಮ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದರು.

ಕಾಂಗ್ರೆಸ್ ವಿರುದ್ದ ಸಚಿವ ಅಶ್ವತ್ಥ್​ ನಾರಾಯಣ್ ಕಿಡಿ: ಇನ್ನು ಫೈಟರ್ ರವಿ ಡಿಕೆಶಿಗಿಂತಾ ಹೆಚ್ಚಾ? ಡಿಕೆಶಿಗಿಂತಾ ಕಮ್ಮಿನಾ, ಜಾಸ್ತಿನಾ?. ಈ ರೀತಿಯ ಚರ್ಚೆಗಳು ಬೇಡ. ಕೆಲವು ಸಂದರ್ಭದಲ್ಲಿ ತಪ್ಪು ಆಗಿರುತ್ತದೆ. ಇವತ್ತು ಜವಾಬ್ದಾರಿಯುತವಾಗಿ ನಡೆದುಕೊಳ್ತಿದ್ದಾರೆ. ತಪ್ಪುಗಳನ್ನ ಸರಿಪಡಿಸಿಕೊಳ್ಳಲು ಅವಕಾಶ ಇದೆ. ಸಮಾಜದಲ್ಲಿ, ಕಾನೂನಿನಲ್ಲಿ, ಸಂವಿಧಾನದಲ್ಲಿ ಅವಕಾಶ ಇದೆ. ಅವರ ಜೀವನ ಸಂಪೂರ್ಣ ಸುಧಾರಣೆ ಆಗಿದೆ. ಒಮ್ಮೆ ಮಾಡಿದ ತಪ್ಪನ್ನೇ ಜೀವನ ಪೂರ್ತಿ ಹೇಳುತ್ತಿದ್ರೆ ಪರಿವರ್ತನೆ ಸಾಧ್ಯವಿಲ್ಲ. ಮತ್ತೆ ಮತ್ತೆ ಆತನ ಬದುಕಲು ಯೋಗ್ಯವಿಲ್ಲ ಅನ್ನೋ ರೀತಿಯಲ್ಲಿ ಬಿಂಬಿಸಬಾರದು ಎಂದರು. ಒಟ್ಟಾರೆ ಕಾಂಗ್ರೆಸ್ ವಿರುದ್ದ ಸಚಿವ ಅಶ್ವತ್ಥ್​ ನಾರಾಯಣ್ ಕಿಡಿಕಾರಿದ್ದಾರೆ. ಜೊತೆಗೆ ಉರಿಗೌಡ ನಂಜೇಗೌಡರ ಬಗ್ಗೆಯೂ ಸಹ ಅಭಿಮಾನ ಮೆರೆದಿದ್ದಾರೆ.

ಇದನ್ನೂ ಓದಿ : ಬೆಂಗಳೂರಿಗೆ 2023ರ ಆರೋಗ್ಯಕರ ನಗರಗಳ ಪಾಲುದಾರಿಕೆ ಪ್ರಶಸ್ತಿ ಗರಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.