ETV Bharat / state

ಬೈಕ್ ಕಳ್ಳತನ ಮಾಡಿ ಮಾರುತ್ತಿದ್ದ ಇಬ್ಬರ ಬಂಧನ: 27 ಬೈಕ್ ವಶ - bike theives gang busted

ಬೈಕ್​ ಕಳ್ಳತನ ಮಾಡಿ ಮಾರಾಟ ಮಾಡ್ತಿದ್ದ ಇಬ್ಬರು ಕಳ್ಳರನ್ನು ಮಂಡ್ಯ ಜಿಲ್ಲೆಯ ಕೆ.ಆರ್​. ಪೇಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ವಿವಿಧ ಕಂಪೆನಿಯ 27 ಬೈಕ್​ಗಳನ್ನು ವಶಪಡಿಸಿಕೊಳ್ಳಲಾಗಿದೆ.

two bike thieves arrests in mandya
ಬೈಕ್ ಕಳ್ಳತನ ಮಾಡಿ ಮಾರುತ್ತಿದ್ದ ಇಬ್ಬರ ಬಂಧನ
author img

By

Published : Jan 18, 2021, 7:31 PM IST

ಮಂಡ್ಯ: ಬೈಕ್ ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಬಂಧಿಸುವಲ್ಲಿ ಕೃಷ್ಣರಾಜಪೇಟೆ ಗ್ರಾಮಾಂತರ ಪಟ್ಟಣ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೈಕ್ ಕಳ್ಳತನ ಮಾಡಿ ಮಾರುತ್ತಿದ್ದ ಇಬ್ಬರ ಬಂಧನ

ಬಂಧಿತರಿಂದ ವಿವಿಧ ಕಂಪನಿಯ 27 ಬೈಕ್​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೆ.ಆರ್. ಪೇಟೆ ಗ್ರಾಮಾಂತರ ಪೊಲೀಸ್​ ಠಾಣಾ ವ್ಯಾಪ್ತಿಯ ಊರುಗಳಿಗೆ ಸೇರಿರುವ ವಿಕಾಸ್ (21), ಚಿನ್ನು ಅಲಿಯಾಸ್ ಚಿನ್ನಸ್ವಾಮಿ (25) ಬಂಧಿತ ಆರೋಪಿಗಳು. ವಿಕಾಸ್‌ನಿಂದ 5.8 ಲಕ್ಷ ಮೌಲ್ಯದ ವಿವಿಧ ಕಂಪನಿಯ 17 ದ್ವಿಚಕ್ರ ವಾಹನಗಳನ್ನು ಹಾಗೂ ಚಿನ್ನಸ್ವಾಮಿಯಿಂದ 2.8 ಲಕ್ಷ ರೂ. ಮೌಲ್ಯದ 10 ಬೈಕ್​ಗಳನ್ನು ಪೊಲೀಸರು ವಶಪಡಿಸಿಕೊಂದ್ದಾರೆ.

ಕಳ್ಳರನ್ನು ಬಂಧಿಸಲು ನಾಗಮಂಗಲ ಡಿವೈಎಸ್​ಪಿ ನವೀನ್ ಕುಮಾರ್ ನೇತೃತ್ವದಲ್ಲಿ ಸರ್ಕಲ್ ಇನ್ಸ್​ಪೆಕ್ಟರ್ ದೀಪಕ್, ಪಟ್ಟಣ ಠಾಣೆಯ ಸಬ್​ ಇನ್ಸ್​ಪೆಕ್ಟರ್ ಬ್ಯಾಟರಾಯಗೌಡ, ಗ್ರಾಮಾಂತರ ಪೊಲೀಸ್​ ಠಾಣೆಯ ಸಬ್ ಇನ್ಸ್​ಪೆಕ್ಟರ್ ಸುರೇಶ್ ಇತರ ಸಿಬ್ಬಂದಿಯನ್ನೊಳಗೊಂಡ ತಂಡ ರಚಿಸಲಾಗಿತ್ತು.

ಬೈಕ್ ಕಳ್ಳರನ್ನು ಬಂಧಿಸಿ 27 ಮೋಟರ್ ಬೈಕುಗಳನ್ನು ವಶಪಡಿಸಿಕೊಂಡಿರುವ ಕೆ.ಆರ್.ಪೇಟೆ ವೃತ್ತದ ಪೊಲೀಸರ ಕಾರ್ಯದಕ್ಷತೆಯನ್ನು ಎಎಸ್​ಪಿ ಧನಂಜಯ ಮತ್ತು ಎಸ್.ಪಿ ಕೆ. ಪರಶುರಾಮ್ ಅಭಿನಂದಿಸಿದ್ದಾರೆ.

ಇದನ್ನೂ ಓದಿ:ನಿಗದಿಪಡಿಸಿದ ದಿನಾಂಕಕ್ಕೆ ಮುನ್ನವೇ 'ಪೊಗರು' ಬಿಡುಗಡೆಗೆ ನಿರ್ಧಾರ..!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.