ETV Bharat / state

ಮಂಡ್ಯದಲ್ಲಿ ಟಿಪ್ಪರ್​ಗೆ ವಿದ್ಯುತ್ ಸ್ಪರ್ಶಿಸಿ ಕ್ಲೀನರ್ ಸಾವು - ಕೆ ಆರ್ ಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ

ವಿದ್ಯುತ್ ಆಘಾತಕ್ಕೆ ಒಳಗಾಗಿ ಪ್ರಜ್ಞಾಹೀನನಾಗಿದ್ದ ಚಾಲಕ ಕಾಂತಪ್ಪ ಅವರನ್ನು ತಕ್ಷಣವೇ ಕೆ.ಆರ್.ಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಕಾಂತಪ್ಪ ಮೃತಪಟ್ಟಿದ್ದಾನೆ.

Tipper electrocuted, cleaner dies in Mandya
ಮಂಡ್ಯದಲ್ಲಿ ಟಿಪ್ಪರ್​ಗೆ ವಿದ್ಯುತ್ ಸ್ಪರ್ಶಿಸಿ ಕ್ಲೀನರ್ ಸಾವು
author img

By

Published : Nov 12, 2022, 7:47 PM IST

ಮಂಡ್ಯ: ಕೆರೆ ಅಭಿವೃದ್ಧಿ ಕಾಮಗಾರಿ ವೇಳೆ ಮಣ್ಣು ಸುರಿಯುತ್ತಿದ್ದ ಟಿಪ್ಪರ್​ಗೆ ವಿದ್ಯುತ್ ತಂತಿ ತಗುಲಿ ವಿದ್ಯುತ್ ಪ್ರವಹಿಸಿದ ಪರಿಣಾಮ ಟಿಪ್ಪರ್ ಚಾಲಕ ಮೃತಪಟ್ಟ ಘಟನೆ ಕೆ.ಆರ್.ಪೇಟೆ ಪಟ್ಟಣದ ಪುರಸಭಾ ವ್ಯಾಪ್ತಿಯ ಹೊಸಹೊಳಲಿನಲ್ಲಿ ನಡೆದಿದೆ. ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಬಬಲಾದಿ ಗ್ರಾಮದ ಕಾಂತಪ್ಪ(35) ಮೃತಪಟ್ಟವರು.

ಕೆರೆಯ ಸುತ್ತ ವಾಕಿಂಗ್ ಪಾಥ್ ನಿರ್ಮಿಸಲು ಅಗತ್ಯವಾದ ಮಣ್ಣನ್ನು, ಟಿಪ್ಪರ್​ನಿಂದ ತಂದು ಕೆಳಗೆ ಸುರಿಯುವುದಕ್ಕಾಗಿ ಚಾಲಕ್ ಟಿಪ್ಪರ್​ನ ಲಿಫ್ಟ್​ನ್ನು ಎತ್ತಿದ್ದಾನೆ. ಈ ಸಂದರ್ಭದಲ್ಲಿ ಮೇಲೆ ಹಾದುಹೋಗಿದ್ದ ವಿದ್ಯುತ್ ತಂತಿಯನ್ನು ಚಾಲಕ ಗಮನಿಸದೇ, ಲಿಫ್ಟ್ ಎತ್ತಿದ ಪರಿಣಾಮ ಟಿಪ್ಪರ್​ಗೆ ವಿದ್ಯುತ್ ಪ್ರವಹಿಸಿದೆ.

ವಿದ್ಯುತ್ ಆಘಾತಕ್ಕೆ ಒಳಗಾಗಿ ಪ್ರಜ್ಞಾಹೀನನಾಗಿದ್ದ ಚಾಲಕ ಕಾಂತಪ್ಪ ಅವರನ್ನು ತಕ್ಷಣವೇ ಕೆ.ಆರ್.ಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಕಾಂತಪ್ಪ ಮೃತಪಟ್ಟಿದ್ದಾನೆ. ಸದ್ಯ, ಪ್ರಕರಣ ಕೆ.ಆರ್.ಪೇಟೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಕಾಂತರಾಜು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ತರಲಾಗಿದೆ.

ಇದನ್ನೂ ಓದಿ: ಮಂಡ್ಯದಲ್ಲಿ ಮತಾಂತರಕ್ಕೆ ಯತ್ನ ಆರೋಪ: ಐವರು ಯುವಕರ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.