ಮಂಡ್ಯ : ತನ್ನ ಜನ್ಮದಿನದಂದು ಕೋವಿಡ್ನಿಂದ ಮೃತಪಟ್ಟವರನ್ನು ಅಂತ್ಯಕ್ರಿಯೆ ಮಾಡಿ ಅಪ್ಪು ಪಿ ಗೌಡ ಮಾನವೀಯತೆ ಮೆರೆದಿದ್ದಾರೆ. ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮದಲ್ಲಿ ಕೋವಿಡ್ನಿಂದ 5 ದಿನದ ಬಾಣಂತಿಯೊಬ್ಬರು ಮೃತಪಟ್ಟಿದ್ದು, ಅವರ ಅಂತ್ಯ ಸಂಸ್ಕಾರವನ್ನು ಅಪ್ಪು ನೆರೆವೇರಿಸಿದ್ದಾರೆ. ಹುಟ್ಟುಹಬ್ಬ ಆಚರಣೆಯ ಬದಲಾಗಿ ಇಂಥ ಸಮಾಜಮುಖಿ ಕಾರ್ಯ ಮಾಡಿದ ಅಪ್ಪುಗೆ ಜನರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
ವೀರೇಶ್ ಎಂಬುವರ ಪತ್ನಿ ಶಿಲ್ಪಶ್ರೀ ಎಂಬುವರು ಹೆರಿಗೆಗೆ ಹೋದ ಸಂದರ್ಭದಲ್ಲಿ ಕೊರೋನಾ ಸೋಂಕು ಧೃಡಪಟ್ಟಿದೆ. ಸೋಂಕು ಇದ್ದರೂ ಹೆರಿಗೆ ವಿಭಾಗದ ತಜ್ಞ ವೈದ್ಯರು ಶಿಲ್ಪಶ್ರೀಗೆ ಚಿಕಿತ್ಸೆ ನೀಡಿ ಹೆರಿಗೆ ಮಾಡಿಸಿದ್ದರು.
ಬಳಿಕ ಉಸಿರಾಟದ ತೊಂದರೆ ತೀವ್ರವಾದ ಹಿನ್ನೆಲೆ ಇಂದು ಶಿಲ್ಪ ಕೊನೆಯುಸಿರೆಳೆದಿದ್ದರು. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಕೋವಿಡ್ ಮಾರ್ಗಸೂಚಿ ಅನ್ವಯ ಶಿಲ್ಪಶ್ರೀ ಅಂತ್ಯಸಂಸ್ಕಾರವನ್ನು ಸಮಾಜ ಸೇವಕ ಅಪ್ಪು ಪಿ.ಗೌಡ ನೆರವೇರಿಸಿದ್ದಾರೆ.
ಇದನ್ನೂ ಓದಿ:COVID: ಎರಡೂವರೆ ತಿಂಗಳ ಬಳಿಕ ಬೆಂಗಳೂರಲ್ಲಿಂದು ಸಾವಿರಕ್ಕಿಂತ ಕಡಿಮೆ ಕೇಸ್ ಪತ್ತೆ