ಮಂಡ್ಯ : ಅಪಘಾತದಲ್ಲಿ ಗಾಯಗೊಂಡಿದ್ದ ಅಭಿಮಾನಿಗೆ ನಟ ದರ್ಶನ್ ಆರ್ಥಿಕ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಇಂಡುವಾಳು ಸಚ್ಚಿದಾನಂದ ಎಂಬುವರ ಮೂಲಕ 1ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಿದ್ದಾರೆ. ಶ್ರೀರಂಗಪಟ್ಟಣ ತಾಲೂಕಿನ ಉರಮಾರಕಸಲಗೆರೆ ಗ್ರಾಮದ ಕಿರಣ್ ಕುಟುಂಬಕ್ಕೆ ದರ್ಶನ್ ಸಹಾಯ ಮಾಡಿದ್ದಾರೆ.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸುಮಲತಾ ನ್ಯಾಮಿನೇಷನ್ ಮಾಡುವ ದಿನ ಮೆರವಣಿಗೆಯಲ್ಲಿ ವಾಪಸ್ ಆಗುವಾಗ ಕಿರಣ್ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದರು. ಕಿರಣ್‌ಗೆ ಚಿಕಿತ್ಸೆ ನೀಡಿದ್ರೂ ಆರೋಗ್ಯ ಕೈಕೊಟ್ಟ ಕಾರಣ ಹಾಸಿಗೆ ಹಿಡಿದಿದ್ದರು. ಈಗ ದರ್ಶನ್ ಅವರ ಆರ್ಥಿಕ ಸಹಾಯ ಯುವಕನ ಕುಟುಂಬಕ್ಕೆ ಸ್ವಲ್ಪ ಮಟ್ಟಿಗೆ ಸಹಕಾರಿಯಾಗಿದೆ.