ಮಂಡ್ಯ: ಶಿವಮೊಗ್ಗ ಸ್ಫೋಟದ ಬಳಿಕ ಎಚ್ಚೆತ್ತ ಮಂಡ್ಯ ಜಿಲ್ಲಾಡಳಿತ ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯನ್ನು ಸಂಪೂರ್ಣ ಬಂದ್ ಮಾಡಲು ನಿರ್ಧರಿಸಿದೆ ಎಂದು ಪಾಂಡುಪುರ ಉಪವಿಭಾಗಧಿಕಾರಿ ಶಿವಾನಂದಮೂರ್ತಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದಲ್ಲಿ ಕೈಕುಳಿ ಸೇರಿದಂತೆ ಎಲ್ಲ ರೀತಿಯ ಕಲ್ಲು ಗಣಿಗಾರಿಕೆ ನಿಷೇಧಿಸಲಾಗಿದೆ. ಕೆಆರ್‌ಎಸ್ ಡ್ಯಾಂ ಸುರಕ್ಷತೆ ದೃಷ್ಟಿಯಿಂದ ಗಣಿಗಾರಿಗೆ ಸ್ಥಗಿತ ಮಾಡಲಾಗಿದೆ. ಈ ಹಿಂದೆ ಕ್ವಾರಿಗಳಿಂದ ಕಲ್ಲು ತೆಗೆಯುವುದನ್ನು ಮಾತ್ರ ನಿಷೇಧಿಸಲಾಗಿತ್ತು. ಹೊರಗಿನಿಂದ ಕಲ್ಲು ತಂದು ಕ್ರಷರ್ (ಕಲ್ಲುಪುಡಿ) ಘಟಕ ನಡೆಸಲು ಅವಕಾಶ ನೀಡಲಾಗಿತ್ತು ಎಂದರು.
ಆದ್ರೆ ಬೇಬಿ ಬೆಟ್ಟದಲ್ಲೇ ರಾತ್ರಿ ವೇಳೆ ಬಂಡೆ ಬ್ಲಾಸ್ಟ್ ಮಾಡುತ್ತಿದ್ದ ಗಣಿ ಮಾಲೀಕರು, ಎಷ್ಟೇ ಎಚ್ಚರಿಕೆ ಕೊಟ್ಟರೂ ರಾತ್ರಿ ನಿರಂತರ ಬ್ಲಾಸ್ಟಿಂಗ್ ನಡೆಸುತ್ತಿದ್ದರು. ಹಾಗಾಗಿ ಡ್ರೋಣ್ ಮೂಲಕ ಗಣಿ ಚಟುವಟಿಕೆ ಮೇಲೆ ನಿಗಾ ಇಡಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.
ಓದಿ:ಸಚಿವರುಗಳ ಸಹಾನುಭೂತಿ ನನಗೆ ಬೇಕಿಲ್ಲ: ಎಚ್. ವಿಶ್ವನಾಥ್
ಕದ್ದುಮುಚ್ಚಿ ಗಣಿಗಾರಿಕೆ ನಡೆಸುವ ಸಾಧ್ಯತೆ ಹಿನ್ನೆಲೆ ಡ್ರೋಣ್ ಕಣ್ಗಾವಲು ಮಾಡಲಾಗುವುದು ಯಾರಾದರೂ ಸಿಕ್ಕಿ ಬಿದ್ದಲ್ಲಿ, ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.