ಮಂಡ್ಯ: ಮೈತ್ರಿ ಸರ್ಕಾರದ ಸಾಧನೆಯ ಕೈಪಿಡಿಯನ್ನು ಸಚಿವ ಸಿ.ಎಸ್. ಪುಟ್ಟರಾಜು ಬಿಡುಗಡೆ ಮಾಡಿದರು.
ನಗರದ ಗಣಪತಿ ದೇವಾಲಯದಲ್ಲಿ ಪೂಜೆ ಬಳಿಕ ಕೈಪಿಡಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಇಂದಿನಿಂದ ಮನೆ ಮನೆಗೆ ತೆರಳಿ ದೋಸ್ತಿಗಳ ಪ್ರಚಾರ ಮಾಡಿ, ಸಾಧನೆಯ ಪುಸ್ತಕವನ್ನು ತಲುಪಿಸಲಾಗುವುದು ಎಂದರು.
ನಾಳೆಯಿಂದ ಎರಡು ದಿನಗಳ ಕಾಲ ಮಂಡ್ಯದಲ್ಲಿ ಸಿ.ಎಂ. ವಾಸ್ತವ್ಯ ಹೂಡಲಿದ್ದು, ನಿಖಿಲ್ ಪರವಾಗಿ ಸಿ.ಎಂ ಪ್ರಚಾರ ನಡೆಸಲಿದ್ದಾರೆ. ನಾಳೆ ಶ್ರೀರಂಗಪಟ್ಟಣ ಮತ್ತು ನಾಡಿದ್ದು ಮದ್ದೂರು, ಮಳವಳ್ಳಿಯಲ್ಲಿ ಪ್ರಚಾರ ಮಾಡಲಿದ್ದಾರೆ. ಎ. 13 ರಂದು ಮಂಡ್ಯಕ್ಕೆ ರಾಹುಲ್ ಗಾಂಧಿ ಬರಲಿದ್ದು ರಾಹುಲ್ ಜೊತೆ ಪ್ರಚಾರ ಕೈಗೊಳ್ಳಲಿದ್ದಾರೆ.
ಎ. 14 ರಂದು ತುಮಕೂರಲ್ಲಿ ದೇವೇಗೌಡರ ಪರವಾಗಿ ಪ್ರಚಾರ, ಎ. 12 ಮತ್ತು 15 ರಂದು ಮೇಲುಕೋಟೆ ಮತ್ತು ಕೆ.ಆರ್. ಪೇಟೆಯಲ್ಲಿ ಸಿಎಂ ಕ್ಯಾಂಪೇನ್ ನಡೆಸಲಿದ್ದಾರೆ. ಎ-16 ರಂದು ನಾಗಮಂಗಲ ಮತ್ತು ಮಂಡ್ಯದಲ್ಲಿ, 12 ರಂದು ಮಾಜಿ ಸಿಎಂ ಸಿದ್ದರಾಮಯ್ಯ ಜೊತೆ ದೇವೇಗೌಡ್ರು ಜಿಲ್ಲೆಯಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ ಎಂದು ಸಚಿವ ಪುಟ್ಟರಾಜು ಮಾಹಿತಿ ನೀಡಿದರು.