ETV Bharat / state

ಬಿಜೆಪಿಗೆ ಸೇರ್ತಿಲ್ಲ, ಆದರೆ ನನ್ನ ಸಂಪೂರ್ಣ ಬೆಂಬಲ ಬಿಜೆಪಿಗೆ: ಸುಮಲತಾ

author img

By

Published : Mar 10, 2023, 8:05 PM IST

ಮಂಡ್ಯ ಸಂಸದೆ ಸುಮಲತಾ ಅವರು ಬಿಜೆಪಿಗೆ ಬೆಂಬಲ ನೀಡುವುದಾಗಿ ಘೋಷಿಸಿದರು.

sumalatha
ಸುಮಲತಾ
ಸಂಸದೆ ಸುಮಲತಾ ಅಂಬರೀಶ್‌

ಮಂಡ್ಯ: ಪಕ್ಷೇತರ ಅಭ್ಯರ್ಥಿ ಸಂಸದೆ ಸುಮಲತಾ ಅಂಬರೀಶ್‌ ಅವರು ಬಿಜೆಪಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದರು. ಮಂಡ್ಯದ ಚಾಮುಂಡೇಶ್ವರ ನಗರದಲ್ಲಿರುವ ಸ್ವಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಸದರು, ಇಂದಿನಿಂದ ನನ್ನ ಬೆಂಬಲವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮತ್ತು ಪಕ್ಷಕ್ಕೆ ನೀಡುತ್ತೇನೆ ಎಂದು ತಿಳಿಸಿದರು.

ನಾನು ಪಕ್ಷೇತರ ಸಂಸದೆಯಾದ್ದರಿಂದ ಬಿಜೆಪಿ ಪಕ್ಷಕ್ಕೆ ಸೇರ್ತಿಲ್ಲ. ನನ್ನ ಅವಧಿ ಮುಗಿಯುವವರೆಗೂ ಪಕ್ಷೇತರ ಸಂಸದೆಯಾಗಿಯೇ ಇರುತ್ತೇನೆ. ಆದರೆ ನನ್ನ ಸಂಪೂರ್ಣ ಬೆಂಬಲವನ್ನು ಬಿಜೆಪಿ ಕೊಡ್ತಿದ್ದೀನಿ ಎಂದು ಸ್ಪಷ್ಟಪಡಿಸಿದರು. ಇದು ನನ್ನ ಭವಿಷ್ಯ ಅಲ್ಲ, ಮಂಡ್ಯ ಜಿಲ್ಲೆ ಅಭಿವೃದ್ಧಿ ವಿಷಯ. ಈ ನಿರ್ಧಾರ ಮಾಡಲು 4 ವರ್ಷ ತೆಗೆದುಕೊಂಡಿದ್ದೇನೆ. ನಾನು ಕ್ಷೇತ್ರಕ್ಕೆ ಇಷ್ಟು ಯೋಜನೆ ತರಲು ಸಹಕಾರ ಮಾಡಿದ್ದು. ಕೇಂದ್ರ ಬಿಜೆಪಿ ಸರ್ಕಾರ. ನನ್ನ ಇವತ್ತಿನ ನಿರ್ಧಾರ ಒಂದಷ್ಟು ಜನಕ್ಕೆ ಬೇಸ ಆಗಬಹುದು. ನನ್ನ ಭವಿಷ್ಯ ಹೇಗಿರುತ್ತೆ ಅಂತಾ ಆತಂಕ ಕಾಡಬಹುದು. ಆದರೆ ನನಗೆ ಅದ್ಯಾವ ಯೋಚನೆಯೂ ಇಲ್ಲ. ಆಪ್ತರು, ಹಿತೈಷಿಗಳನ್ನ ಕೇಳಿ ಈ ನಿರ್ಧಾರ ಮಾಡಿದ್ದೇನೆ. ನನ್ನ ನಿರ್ಧಾರಕ್ಕೆ ಅಂಬರೀಶ್ ಆಶೀರ್ವಾದ ಇದೆ ಎಂದು ನಂಬಿದ್ದೇನೆ ಎಂದು ಸುಮಲತಾ ಪ್ರಕಟಿಸಿದರು.

ನಾನು ಕುಟುಂಬ ರಾಜಕಾರಣಕ್ಕೆ ಬಂದಿಲ್ಲ. ಆಕ್ಮಸಿಕವಾಗಿ ರಾಜಕೀಯಕ್ಕೆ ಬಂದಿದ್ದೇನೆ. ನಾನು ರಾಜಕೀಯವಾಗಿ ಪ್ರವೇಶ ಮಾಡಿ ನಾಲ್ಕು ವರ್ಷ ಆಗಿದೆ. ಆಗ ಹಾಲಿ ಮುಖ್ಯಮಂತ್ರಿ ಮಗನ ಎದುರು ನಿಂತು ಗೆದ್ದೆ. ಅಂದು ನನ್ನ ಪರವಾಗಿ ಸಿನಿಮಾರಂಗದವರು ನಿಂತುಕೊಂಡಿದ್ದರು, ಅಲ್ಲದೇ ನಮ್ಮ ರಾಜಕಾರಣಿಗಳು ಕೂಡ ನಮ್ಮ ಪರವಾಗಿ ನೇರವಾಗಿ ಮತ್ತು ಪರೋಕ್ಷವಾಗಿ ಸಹಾಯ ಮಾಡಿದರು. ನಾನು ಹೋರಾಟ ಮಾಡಿ ಅಂದು ಚುನಾವಣೆಗೆ ನಿಂತುಕೊಂಡಿದ್ದು ಅಂಬರೀಶ್‌ ಅವರ ಅಭಿಮಾನಿಗಳಿಗಾಗಿ ಹೊರತು ನನಗಾಗಿ ಅಲ್ಲ ಎಂದರು.

ಇಂದು ರಾಜಕಾರಣ ಎನ್ನುವುದು ದುಡ್ಡು ಕೊಟ್ಟು ಮಾಡಿಕೊಳ್ಳುವ ಹಾಗೇ ಇದೆ. ಅವಶ್ಯಕತೆ ರಾಜಕಾರಣ ನನಗೆ ಬೇಕಾಗಿಲ್ಲ, ನನಗೆ ಯಾವುದೂ ಅನಿವಾರ್ಯ ಇಲ್ಲ ಎಂದು ತಿಳಿಸಿದರು. ಇದೇ ವೇಳೆ, ಅವರು ತಮ್ಮ ಅವಧಿಯಲ್ಲಿ ಕ್ಷೇತ್ರದಲ್ಲಿ ಆಗಿರುವ ಕೆಲಸಗಳ ಬಗ್ಗೆ ಮಾಹಿತಿ ನೀಡಿದರು. ಮಂಡ್ಯ ಜಿಲ್ಲೆಯನ್ನು ನಾವು ಕಾಪಾಡಬೇಕಾಗಿದೆ, ನಮಗೆ ಮಂಡ್ಯದಲ್ಲಿ ರಾಜಕಾರಣ ಬೇಕಾಗಿಲ್ಲ, ನಮಗೆ ಬೇಕಾಗಿರುವುದು ಮಂಡ್ಯದ ಅಭಿವೃದ್ಧಿ. ಭ್ರಷ್ಟಾಚಾರದ ಬಗ್ಗೆ ಮಾತನಾಡಿದರೆ ಕೆಲವರ ನಮ್ಮ ಧ್ವನಿ ಅಡಗಿಸಲು ಮುಂದಾಗುತ್ತಿದ್ದಾರೆ ಎಂದು ಕಿಡಿಕಾರಿದರು.

ಮೈಶುಗರ್‌ ಮತ್ತು ಪಾಂಡವಪುರ ಸಕ್ಕರೆ ಕಾರ್ಖಾನೆ ಈಗ ಒಂದು ಹಂತಕ್ಕೆ ಬಂದಿದೆ. ಜಿಲ್ಲೆಯ ಕೆಲವೊಂದು ಬೇಡಿಕೆಗಳನ್ನು ಬಿಜೆಪಿ ಸರ್ಕಾರದ ಮುಂದಿಟ್ಟಿದ್ದು, ಅವುಗಳನ್ನು ಈಡೇರಿಸುವ ಭರವಸೆಯನ್ನು ನೀಡಿದ್ದಾರೆ ಎಂದರು. ಅಂಬರೀಶ್ ಯಾವತ್ತೂ ಆ ಪಕ್ಷ ಈ ಪಕ್ಷ ಅಂತ ನೋಡಿಲ್ಲ. ಯಾರನ್ನೂ ವಿರೋಧ ಮಾಡಿದವರಲ್ಲ. ಅಂಬರೀಶ್ ಅವರು ವಾಜಪೇಯಿ ಅವರ ದೊಡ್ಡ ಅಭಿಮಾನಿಯಾಗಿದ್ರು. ಎಲ್ಲ ಪಕ್ಷದವರನ್ನು ಮನೆಗೆ ಕರೆಯುತ್ತಿದ್ದರು.

ರಾಜ್ಯ ರಾಜಕಾರಣ ಪ್ರವೇಶ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ಈ ಕ್ಷೇತ್ರಕ್ಕೆ ನಿಮ್ಮ ಅವಶ್ಯಕತೆ ಇದೆ ಅಂತಾ ಪಕ್ಷದವರು ಹೇಳಿದಾಗ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: ರೈತರ ಮಕ್ಕಳನ್ನು ಮದುವೆಯಾದ ಹೆಣ್ಣು ಮಕ್ಕಳಿಗೆ ಎರಡು ಲಕ್ಷ ರೂ. ಪ್ರೋತ್ಸಾಹ ಧನ.. ಕುಮಾರಸ್ವಾಮಿ ಅಭಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.