ಮಂಡ್ಯ: ಜೋಡೆತ್ತುಗಳ ಜೊತೆ ಇಂದು ಸುಮಲತಾ ಅಂಬರೀಶ್ ಭರ್ಜರಿ ಪ್ರಚಾರ ಮಾಡಿದರು. ಶ್ರೀರಂಗಪಟ್ಟಣದ ಗಂಜಾಂನಲ್ಲಿ ಅಭಿಮಾನಿಗಳ ಪ್ರೀತಿಯ ಮೆರವಣಿಗೆಯಲ್ಲಿ ಮತಬೇಟೆ ನಡೆಸಿದರು.
ಗಂಜಾಂನ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮಾಡಿದ ಸುಮಲತಾ ಅಂಬರೀಶ್, ಮುಸ್ಲಿಂ ಮತದಾರರಿಗೆ ಇದ್ದ ಅನುಮಾನವನ್ನು ಹೋಗಲಾಡಿಸಲು ಉರ್ದು ಭಾಷೆಯಲ್ಲೇ ಉತ್ತರ ನೀಡಿದರು.
ಬಿಜೆಪಿ ಸೇರ್ಪಡೆ ಬಗ್ಗೆ ವಿರೋಧಿಗಳು ಮಾತನಾಡುತ್ತಿದ್ದಾರೆ. ಈ ಹಿಂದೆ 20-20 ಮ್ಯಾಚ್ ಆಡಿದವರು ಯಾರು ಎಂದು ಪ್ರಶ್ನೆ ಮಾಡಿದ ಸುಮಲತಾ, ಪಕ್ಷೇತರವಾಗಿಯೇ ಇರುತ್ತೇನೆ ಎಂದು ವಾಗ್ದಾನ ಮಾಡಿದರು.
ಸುಮಲತಾ ಅಂಬರೀಶ್ ಮಾತು ಕೇಳಿದ ಮಹಿಳೆಯರು ಜೈಕಾರ ಹಾಕುವ ಮೂಲಕ ಬೆಂಬಲ ನೀಡಿದರು. ನಂತರ ಜೋಡೆತ್ತಿನ ಮೆರವಣಿಗೆ ಮಾಡಲಾಯಿತು. ನಿಮಿಷಾಂಬ ದೇವಸ್ಥಾನದ ಬಳಿ ಪ್ರಚಾರ ಮಾಡಿ, ಟಿಪ್ಪು ಸಮಾಧಿ ಬಳಿ ತೆರಳಿ ಹೂವಿನ ಚಾದರ ಹಾಕಿ ಗೌರವ ಸಲ್ಲಿಸಿದರು.