ETV Bharat / state

ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿದೆ ಶ್ರೀರಂಗಪಟ್ಟಣ - ಶ್ರೀರಂಗಟ್ಟಣ ಪ್ರವಾಸೋದ್ಯಮ

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಪ್ರವಾಸಿಗರ ನೆಚ್ಚಿನ ತಾಣ. ಆದರೆ, ಕೊರೊನಾ ಎಲ್ಲದಕ್ಕೂ ಬ್ರೇಕ್ ಹಾಕಿದ್ದು, ಸುಮಾರು 10 ಲಕ್ಷ ರೂಪಾಯಿ ಆದಾಯ ಬರುತ್ತಿದ್ದ ಪ್ರವಾಸೋದ್ಯಮಕ್ಕೆ ಆದಾಯವಿಲ್ಲದೇ ಸೊರಗುವಂತಾಗಿದೆ.

Srirangapatna tourism facing heavy loss by corona
ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿದೆ ಶ್ರೀರಂಗಟ್ಟಣ ಪ್ರವಾಸೋದ್ಯಮ
author img

By

Published : May 27, 2020, 5:44 PM IST

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ಪ್ರವಾಸಿಗರ ನೆಚ್ಚಿನ ತಾಣವಾಗಿದ್ದು, 20ಕ್ಕೂ ಅಧಿಕ ಪ್ರವಾಸಿ ಕೇಂದ್ರಗಳಿವೆ. ಆದರೆ ಕೊರೊನಾದಿಂದ ಪ್ರವಾಸೋದ್ಯಮ ಲಾಭವಿಲ್ಲದೇ ನಷ್ಟ ಅನುಭವಿಸುತ್ತಿದೆ.

ಪ್ರವಾಸಿಗರಿಲ್ಲದೇ ಬಿಕೋ ಎನ್ನುತ್ತಿದೆ ಶ್ರೀರಂಗಟ್ಟಣ ಪ್ರವಾಸೋದ್ಯಮ

ಶ್ರೀರಂಗಪಟ್ಟಣ ಎಲ್ಲರಿಗೂ ಅಚ್ಚುಮೆಚ್ಚಿನ ತಾಣವಾಗಿದ್ದು, ಇಲ್ಲಿ ಕಾವೇರಿ ತಾಯಿಯ ಸೌಂದರ್ಯ ಸವಿಯುವುದರ ಜೊತೆಗೆ ಶ್ರೀರಂಗ, ನಿಮಿಷಾಂಭ, ಕೋಟೆ, ಗುಂಬಜ್, ದರಿಯ ದೌಲತ್, ಸಂಗಮ್, ಮದ್ದಿನ ಮನೆ ಸೇರಿದಂತೆ ಇನ್ನೂ ಹಲವು ಪ್ರವಾಸಿ ಕೇಂದ್ರಗಳಿವೆ‌. ಇದರ ಜೊತೆಗೆ ಪ್ರವಾಸಿಗರಿಗೆ ಮುದ ನೀಡುವ ಕುದುರೆ ಸವಾರಿ, ಬೋಟಿಂಗ್, ಪಕ್ಷಿಧಾಮ ಹೀಗೆ ಹಲವು ವೈವಿದ್ಯಮಯ ಮನೋರಂಜನಾ ಕೇಂದ್ರಗಗಳಿವೆ.

ಇಲ್ಲಿಗೆ ನಿತ್ಯ ಸಾವಿರಾರು ಪ್ರವಾಸಿಗರು ಹರಿದು ಬರುತ್ತಿದ್ದರು. ಆದರೆ, ಕೊರೊನಾ ಎಲ್ಲದಕ್ಕೂ ಬ್ರೇಕ್ ಹಾಕಿದ್ದು, ಸುಮಾರು 10 ಲಕ್ಷ ರೂಪಾಯಿ ಆದಾಯ ಬರುತ್ತಿದ್ದ ಪ್ರವಾಸೋದ್ಯಮಕ್ಕೆ ಆದಾಯವಿಲ್ಲದೇ ಸೊರಗುತ್ತಿದೆ.

ಪ್ರವಾಸಿ ತಾಣಗಳ ಪ್ರವೇಶ ಶುಲ್ಕ, ವಾಹನ ಪಾರ್ಕಿಂಗ್ ಶುಲ್ಕ, ಆಟೋ ಚಾಲಕರು, ಟಾಂಗಾ ವಾಲಾಗಳು, ಕುದುರೆ ಸವಾರಿ, ಲಕ್ಷ್ಮಣ್ ಗುಲ್ಕನ್ ಸೇರಿದಂತೆ ಹೋಟೆಲ್ ಉದ್ಯಮ ನಷ್ಟಕ್ಕೆ ಒಳಗಾಗಿದೆ‌. ಪ್ರವಾಸಿಗರನ್ನೇ ನಂಬಿದ್ದ ಉದ್ಯೋಗಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.