ಮಂಡ್ಯ: ಡ್ರಗ್ಸ್ ದಂಧೆ ಪ್ರಕರಣದಲ್ಲಿ ಶಾಸಕ ಜಮೀರ್ 100 ಪರ್ಸೆಂಟ್ ಭಾಗಿಯಾಗಿದ್ದಾರೆ. ಅದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.
ರಾಜಕಾರಣದಲ್ಲಿ ವ್ಯವಹಾರ ಇಟ್ಟುಕೊಂಡಿರುವುದರಿಂದ ಜಮೀರ್ ಅಹ್ಮದ್ ಅವರನ್ನು ಅರೆಸ್ಟ್ ಮಾಡ್ತಿಲ್ಲ. ನಟಿ ಸಂಜನಾ ಗಂಡ ಅಜೀದ್ ಕೂಡ ಡ್ರಗ್ಸ್ ದಂಧೆಯಲ್ಲಿದ್ದಾನೆ. ಲವ್ ಜಿಹಾದ್ ಮತ್ತು ಡ್ರಗ್ಸ್ ಎರಡಕ್ಕೂ ನೇರ ಕನೆಕ್ಷನ್ ಇದೆ. ಇದಕ್ಕೆ ದಾವೂದ್ ಇಬ್ರಾಹಿಂ ಮೂಲ ಪುರುಷ ಎಂದಿದ್ದಾರೆ.
ಆಜೀಮ್ ಅಸ್ತಾನ ಎಂಬ ದೇಶದ್ರೋಹಿ ಇದ್ದ. ಇವರೆಲ್ಲರೂ ಇಡೀ ಚಿತ್ರ ರಂಗವನ್ನು ಆವರಿಸಿದ್ದಾರೆ. ಡ್ರಗ್ಸ್ ಮಾಫಿಯಾದಲ್ಲಿ ರಾಜಕೀಯ ಮುಖಂಡರಿದ್ದಾರೆ. ಜಮೀರ್ ಚುನಾವಣಾ ಪ್ರಚಾರಕ್ಕೆ ಮುಂಬೈನಿಂದ ಚಿತ್ರ ನಟರನ್ನು ಕರೆಸುತ್ತಾರೆ. ವ್ಯವಸ್ಥಿತ ಜಾಲದಲ್ಲಿ ಜಮೀರ್ ನಿಶ್ಚಿತವಾಗಿದ್ದಾರೆ ಎಂದು ಆರೋಪಿಸಿದರು. ಪಾದರಾಯನಪುರ, ಡಿಜೆ ಹಳ್ಳಿ ಗಲಾಟೆಗೆ ಡ್ರಗ್ಸ್ ಕಾರಣ. ಸಿಸಿಬಿ ತನಿಖೆ ಬಗ್ಗೆ ನನಗೆ ವಿಶ್ವಾಸವಿಲ್ಲ. ಈ ಪ್ರಕರಣವನ್ನು ಸರ್ಕಾರ ಮುಚ್ಚಿ ಹಾಕುತ್ತದೆ ಎಂದು ಅನುಮಾನ ವ್ಯಕ್ತಪಡಿಸಿದರು.
‘ಅರ್ಚಕರ ಸಾವಿನ ಹಿಂದೆ ಇಸ್ಲಾಮಿಕ್ ಜಿಹಾದ್’: ಇದಲ್ಲದೆ ಅರ್ಚಕರ ಹತ್ಯೆ ಕುರಿತು ಮಾತನಾಡಿದ ಅವರು, ಅರ್ಚಕರ ಹತ್ಯೆ ಖಂಡಿಸುತ್ತೇನೆ. ಮುಜರಾಯಿ ದೇವಸ್ಥಾನಗಳಲ್ಲಿ ಎಲ್ಲಾ ಕಡೆ ಸಿಸಿ ಕ್ಯಾಮೆರಾ ಇವೆ. ಇಲ್ಲಿ ಸಿಸಿ ಕ್ಯಾಮೆರಾ ಕೆಟ್ಟುಹೋಗಿದೆ ಎಂದು ಸಬೂಬು ಹೇಳ್ತಿದ್ದಾರೆ. ಸಿಸಿ ಕ್ಯಾಮೆರಾ ಸರಿಪಡಿಸುವಷ್ಟು ಬುದ್ಧಿ ಇಲ್ವಾ ಅವರಿಗೆ. ಮುಜರಾಯಿ ಇಲಾಖೆಯ ಅಧಿಕಾರಿಗಳನ್ನ ತಕ್ಷಣವೇ ಸಸ್ಪೆಂಡ್ ಮಾಡಬೇಕು ಎಂದು ಒತ್ತಾಯಿಸಿದರು.
ಅಮಾಯಕ ಅರ್ಚಕರ ಹತ್ಯೆಯ ಹಿಂದೆ ಇಸ್ಲಾಮಿಕ್ ಜಿಹಾದ್ ಕೆಲಸ ಮಾಡಿದ್ರೂ ಮಾಡಿರಬಹುದು. ಈ ಕುರಿತು ಸಮಗ್ರ ತನಿಖೆಯಾಗಬೇಕು ಎಂದರು.