ಮಂಡ್ಯ/ದಾವಣಗೆರೆ: ನಾಳೆ ಕಂಕಣ ಸೂರ್ಯಗ್ರಹಣ ಹಿನ್ನೆಲೆ ಶ್ರೀರಂಗಪಟ್ಟಣದ ನಿಮಿಷಾಂಬ, ರಂಗನಾಥ, ಮೇಲುಕೋಟೆಯ ಚಲುವನಾರಾಯಣಸ್ವಾಮಿ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೂ ದರ್ಶನಕ್ಕೆ ಬ್ರೇಕ್ ನೀಡಲಾಗಿದೆ. ದಾವಣಗೆರೆಯ ಹರಪನಹಳ್ಳಿಯ ಉಚ್ಚಂಗೆಮ್ಮ ದೇವಿ ದೇವಸ್ಥಾನದ ಬಾಗಿಲು ಸಹ ಮುಚ್ಚಲಾಗಿದ್ದು, ದೇವಸ್ಥಾನಗಳಲ್ಲಿ ದರ್ಶನವನ್ನು 4 ಗಂಟೆಗಳ ಕಾಲ ನಿಷೇಧಿಸಲಾಗಿದೆ.
ಶ್ರೀ ರಂಗಪಟ್ಟಣ ತಾಲೂಕಿನ ಟಿ.ಎಂ ಹೊಸೂರು ಬಳಿಯ ಕಾಳಿ ದೇವಾಲಯದ ಅರ್ಚಕರು ಗ್ರಹಣದ ಬಗ್ಗೆ ಭಕ್ತರಿಗೆ ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ನಾಳೆ ಗ್ರಹಣದ ವೇಳೆ ದೇವಿಗೆ ಪೂಜೆ ಮಾಡಲು ನಿರ್ಧಾರ ಮಾಡಲಾಗಿದೆ. ಗ್ರಹಣದಿಂದ ಯಾವುದೇ ತೊಂದರೆ ಆಗುವುದಿಲ್ಲ. ಅದೊಂದು ಪ್ರಕೃತಿ ವಿಸ್ಮಯ ಎಂದು ಪುರೋಹಿತರು ಭಕ್ತರಿಗೆ ಜಾಗೃತಿ ಮೂಡಿಸಿದ್ದಾರೆ.
ಉಚ್ಚೆಂಗೆಮ್ಮ ದೇವಿ ದೇವಸ್ಥಾನದ ಬಾಗಿಲು ಬಂದ್
ದಾವಣಗೆರೆಯ ಹರಪನಹಳ್ಳಿಯ ಉಚ್ಚಂಗೆಮ್ಮ ದೇವಿ ದೇವಸ್ಥಾನದ ಬಾಗಿಲು ಮುಚ್ಚಲಾಗಿದೆ. ಬುಧವಾರ ರಾತ್ರಿಯಿಂದಲೇ ದೇಗುಲ ಬಂದ್ ಮಾಡಲಾಗುವುದು. ಅಲ್ಲದೇ, ದೇವಿ ದರ್ಶನ ನಿಲ್ಲಿಸಲಾಗಿದೆ. ಗುರುವಾರ ಬೆಳೆಗ್ಗೆ 11.30ರ ಬಳಿಕ ವಿಶೇಷ ಪೂಜೆ ಮತ್ತು ಅಭಿಷೇಕದ ಬಳಿಕ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತೆ ಎಂದು ಶ್ರೀ ಉತ್ಸವಾoಬ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತಹಶೀಲ್ದಾರ್ ನಾಗವೇಣಿ ತಿಳಿಸಿದ್ದಾರೆ.