ETV Bharat / state

ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲ್ತಾರೆ: ಅಶ್ವಥ್ ನಾರಾಯಣ ವಾಗ್ದಾಳಿ - Ashwath Narayan

ವರುಣ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸೋಲುತ್ತಾರೆ ಎಂದು ಮಂಡ್ಯದಲ್ಲಿ ಅಶ್ವಥ್ ನಾರಾಯಣ ವಾಗ್ದಾಳಿ ನಡೆಸಿದರು.

Ashwath Narayan
ಡಾ.ಸಿ.ಎನ್.ಅಶ್ವಥ್ ನಾರಾಯಣ
author img

By

Published : Apr 20, 2023, 11:07 PM IST

ಡಾ.ಸಿ.ಎನ್.ಅಶ್ವಥ್ ನಾರಾಯಣ ಮಾತನಾಡಿದರು.

ಮಂಡ್ಯ: ''ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರು ಸೋಲ್ತಾರೆ ಎಂದು ಸಚಿವ ಅಶ್ವಥ್ ನಾರಾಯಣ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಮಂಡ್ಯದಲ್ಲಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಪರ ಅಲೆ ಎದ್ದಿದೆ. ಮಂಡ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಕೊಟ್ಟಾಗ ಬೆಂಬಲ ವ್ಯಕ್ತವಾಗಿದ್ದು ಕಾಣುತ್ತಿತ್ತು. ಕೆ.ಆರ್. ಪೇಟೆಯಲ್ಲಿ ಬಿಜೆಪಿ ಖಾತೆ ತೆರೆದಿದ್ದೇವೆ. ರಾಜ್ಯದಲ್ಲಿ ಬಿಜೆಪಿ ಸಾಕಷ್ಟು ಅಭಿವೃದ್ಧಿ ಮಾಡಿದೆ. ಮೀಸಲಾತಿ ನೀತಿಯನ್ನು ಬಿಜೆಪಿ ಕೊಟ್ಟಿದೆ. ಎಲ್ಲರೂ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ಪಣ ತೊಟ್ಟಿದ್ದಾರೆ. ಮಂಡ್ಯದಲ್ಲಿ ನಮಗೆ ಎದುರಾಳಿ ಜೆಡಿಎಸ್. ಜೆಡಿಎಸ್ ಪಕ್ಷ ಮಂಡ್ಯ ಜಿಲ್ಲೆಯಲ್ಲಿ ಪ್ರಬಲವಾಗಿದೆ. ಮಂಡ್ಯ ಜಿಲ್ಲೆ ಸಂಪೂರ್ಣ ಅಭಿವೃದ್ಧಿಗೆ ಬಿಜೆಪಿ ಮತ ಕೊಡಿ. ಮಂಡ್ಯ ಜಿಲ್ಲೆ ದೇಶದಲ್ಲೇ ಉತ್ತಮವಾಗಿ ಬೆಳೆಯಬೇಕು. ಅದಕ್ಕೆ ಬಿಜೆಪಿ ಪಕ್ಷವನ್ನು ಗೆಲ್ಲಿಸಬೇಕು ಎಂದರು.

ಇದನ್ನೂ ಓದಿ: ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸೋದೇ ನನ್ನ ಅಜೆಂಡಾ: ಸುಮಲತಾ ಅಂಬರೀಶ್

ಪದ್ಮನಾಭ ನಗರ ಕ್ಷೇತ್ರಕ್ಕೆ ಡಿ.ಕೆ. ಸುರೇಶ್ ನಾಮಪತ್ರ ಸಲ್ಲಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸ್ಟ್ರಾಟಜಿ ಏನಿದೆ ಅಂತ ಗೊತ್ತಿಲ್ಲ ಎಂದರು. ಇತ್ತೀಚೆಗೆ ಸಮೃದ್ಧಿ ನಾಡನ್ನು ಬಿಜೆಪಿ ಕಟ್ಟಿದೆ. ವರುಣ ಹಾಗೂ ಕನಕಪುರ ಕಾಂಗ್ರೆಸ್ ಕಟ್ಟು ಹಾಕಲು ಬಿಜೆಪಿ ರಣತಂತ್ರ ವಿಚಾರವಾಗಿ ಮಾತನಾಡಿದ ಅವರು, ಯಾರನ್ನೂ ಕಟ್ಟು ಹಾಕೋಕೆ ಹೋಗಿಲ್ಲ. ಗೆಲ್ಲುವುದಕ್ಕೆ ಹೋಗಿರೋದು, ಬಿಜೆಪಿ ಪಕ್ಷ ಜನರ ಪರ ಇರುವ ಪಕ್ಷ. ನಮ್ಮ ಪ್ರತಿ ಪಕ್ಷಗಳು ಎರಡೂ ಕುಟುಂಬ ಆಧಾರಿತ ಪಕ್ಷಗಳಾಗಿದೆ. ಕೆಲವೇ ಜನಕ್ಕೆ ಮಾತ್ರ ಸೀಮಿತವಾಗಿರುವ ಈ ಪಕ್ಷಗಳು ಪ್ರಸ್ತುತವಾಗಿಲ್ಲ. ಕರ್ನಾಟಕ ಅಭಿವೃದ್ಧಿಯಾಗಬೇಕಾದರೆ ಬಿಜೆಪಿನೇ ಪರಿಹಾರ. ಮಂಡ್ಯ ಜಿಲ್ಲೆ ಅಭಿವೃದ್ಧಿ ಆಗಬೇಕಾದರೆ, ಬಿಜೆಪಿಯನ್ನೇ ಆಯ್ಕೆ ಮಾಡಬೇಕು ಎಂದು ಸಚಿವ ಅಶ್ವಥ್ ನಾರಾಯಣ ಹೇಳಿದರು.

ಇದನ್ನೂ ಓದಿ: 'ಚು.ಆಯೋಗದ ಮೇಲೆ ನಂಬಿಕೆಯಿಲ್ಲದೇ ಸಹೋದರನಿಂದಲೇ ಡಿಕೆಶಿ ನಾಮಪತ್ರ ಸಲ್ಲಿಕೆ'

ವರುಣ, ಕನಕಪುರದಲ್ಲಿ ಬಿಜೆಪಿ ಅಭ್ಯರ್ಥಿಗಳೇ ಗೆಲ್ಲುತ್ತಾರೆ. ಕನಕಪುರದ ವೋಟ್ ಸಂಪೂರ್ಣವಾಗಿ ಬಿಜೆಪಿಗೆ ಟರ್ನ್ ಆಗುತ್ತೆ. ವಾರುಣದಲ್ಲಿ ಸಿದ್ದರಾಮಯ್ಯ 1 ಲಕ್ಷ ಮತಗಳಿಂದ ಸೋಲಬಹುದು. ಯಾರ ಜೊತೆಯೂ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ನೇರ ಸ್ಪರ್ಧೆ ಕಾಂಗ್ರೆಸ್ ಜೆಡಿಎಸ್ ಎರಡು ಪಕ್ಷಗಳೂ ನಮಗೆ ವಿರೋಧ. ಗೆಲ್ಲೊದೊಂದೆ ಬಿಜೆಪಿ ಗುರಿ. ಈ ಬಾರಿ ಬಿಜೆಪಿ ಪಕ್ಷಕ್ಕೆ ಸಂಪೂರ್ಣ ಬಹುಮತ ಲಭಿಸಲಿದೆ. ರಾಜ್ಯದ ಅಭಿವೃದ್ಧಿ ಕಾಣುತ್ತೆ. ಬಿಜೆಪಿ ಪಕ್ಷ ಬಿಟ್ಟು ಹೋದ ನಾಯಕರು ಟಾರ್ಗೆಟ್ ಮಾಡುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಗಟ್ಟಿ ಪಕ್ಷ, ಪಕ್ಷಕ್ಕೆ ಶಕ್ತಿ ಇರೋದಿಕ್ಕೆ ಟಿಕೆಟ್ ಕೊಟ್ಟಿಲ್ಲ. ಯಾರಿಗೆ ಕೊಡಬೇಕು ಯಾರಿಗೆ ಬಿಡಬೇಕು ಎಂಬ ಸ್ಪಷ್ಟ ನಿಲುವನ್ನು ನಮ್ಮ ಪಕ್ಷ ತೆದುಕೊಳ್ಳುತ್ತದೆ ಎಂದು ಹೇಳಿದರು.

ಇದನ್ನೂ ಓದಿ: 1 ರೂಪಾಯಿ ತೆರಿಗೆಯಲ್ಲಿ 15 ಪೈಸೆ ವಾಪಸ್ ನೀಡುವುದು ಮೋದಿ ಆಶೀರ್ವಾದವೇ?: ಜೆ.ಪಿ.ನಡ್ಡಾಗೆ ಸಿದ್ದರಾಮಯ್ಯ ಪ್ರಶ್ನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.