ಮಂಡ್ಯ: ಸಿದ್ದರಾಮಯ್ಯ ಓರ್ವ ಉತ್ತಮ ಆಡಳಿತಗಾರ. ಹಲವು ಯೋಜನೆಗಳ ಮೂಲಕ ಜನರ ಮನ ಗೆದ್ದಿದ್ದರು ಅನ್ನೋ ಮೂಲಕ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದಾರೆ.
ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎಂಬ ವಿಚಾರ ಕುರಿತು ಮಾತನಾಡಿದ ಅವ್ರು, ನಾವು ನಾಳೆ ಬೆಳಗ್ಗೆ ಸಿಎಂ ಮಾಡಿ ಅಂತಾ ಹೇಳಿಲ್ಲ. ನಮಗೂ ಓರ್ವ ಲೀಡರ್ ಬೇಕು, ಕಾಂಗ್ರೆಸ್ ಪಕ್ಷಕ್ಕೆ ನಾಯಕ ಬೇಕು. ಸಿದ್ದರಾಮಯ್ಯ ಜನಸಾಮಾನ್ಯರ ಮುಖ್ಯಮಂತ್ರಿಯಾಗಿ ಈಗಾಗಲೇ ಕೆಲಸ ಮಾಡಿದವರು, ಅವರು ಉತ್ತಮ ಆಡಳಿತಗಾರ. ಅನೇಕ ಯೋಜನೆಗಳ ಮೂಲಕ ಜನರ ಮನಸನ್ನು ಗೆದ್ದಿದ್ದಾರೆ ಎಂದರು.
ಸಮ್ಮಿಶ್ರ ಸರ್ಕಾರ ಬಂದ ದಿನದಿಂದಲೂ ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ಸಿಗರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಮೈತ್ರಿ ಪಕ್ಷದ ವಿರುದ್ಧವೇ ಆರೋಪ ಮಾಡಿದ್ದಾರೆ. ಸ್ಥಳೀಯವಾಗಿ ನಡೆದ ಎಲ್ಲಾ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್ ನಡುವೆ ಜಿದ್ದಾಜಿದ್ದಿ ನಡೆದಿದೆ. ಹೀಗಾಗಿ ಕಾಂಗ್ರೆಸ್ ಪಕ್ಷದವರನ್ನ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ರಮೇಶ್ ಬಂಡಿಸಿದ್ದೇಗೌಡ ಆರೋಪಿಸಿದ್ದಾರೆ.
ಇನ್ನು ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಪರ ಕೆಲಸ ಮಾಡುವಂತೆ ಕಾರ್ಯಕರ್ತರಿಗೆ ಸೂಚಿಸಿದ್ದಿರಿ ಎಂಬ ಆರೋಪ ಇದೆ ಎಂದಿದ್ದ ಪ್ರತಿಕ್ರಿಯಿಸಿದ ರಮೇಶ್ ಅವರು, ಆಗದವರು ಏನಾದ್ರೂ ಹೇಳ್ತಾರೆ, ಮೊಸರಲ್ಲಿ ಕಲ್ಲು ಹುಡುಕುತ್ತಾರೆ. ಎಲ್ಲರ ಮಾತಿಗೂ ಆಹಾರ ಆಗೋಕೆ ಆಗುತ್ತಾ ಅಂತಾ ಪ್ರಶ್ನಿಸಿದರು.