ETV Bharat / state

ನಿಯಮ ಮುರಿದು ಸುಮ್ಮನೆ ತಿರುಗುವವರಿಗೆ ಕರೆ ಏರಿ ಸ್ವಚ್ಛಗೊಳಿಸುವ ಕೆಲಸ; ಎಸ್‌ಐ ಕಾರ್ಯಕ್ಕೆ ಮೆಚ್ಚುಗೆ - violating the lockdown

ಲಾಕ್​ಡೌನ್​ ನಿಯಮ ಉಲ್ಲಂಘಿಸಿ ಬೈಕ್​ನಲ್ಲಿ ಸಂಚಾರ ಮಾಡುತ್ತಿದ್ದ ಜನರನ್ನು ಹಿಡಿದ ಕೆ.ಆರ್.ಪೇಟೆ ಪಟ್ಟಣ ಠಾಣೆ ಅಧಿಕಾರಿ ಬ್ಯಾಟರಾಯ ಗೌಡ ಸಮೀಪದ ದೇವೀರಮ್ಮಣ್ಣಿ ಕೆರೆಯೇರಿಯನ್ನು ಸ್ವಚ್ಛ ಮಾಡಿಸಿದ್ದಾರೆ.

lake
ಕೆರೆ ಸ್ವಚ್ಛ
author img

By

Published : Apr 11, 2020, 3:29 PM IST

ಮಂಡ್ಯ: ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಬೈಕ್ ಸವಾರರಿಗೆ ಇಲೊಬ್ಬ ಪೊಲೀಸ್ ಅಧಿಕಾರಿ ಮಾದರಿ ಶಿಕ್ಷೆ ಕೊಟ್ಟಿದ್ದಾರೆ. ಎಷ್ಟು ಹೇಳಿದರೂ ಕೇಳದ ಜನರನ್ನು ದ್ವಿಚಕ್ರ ವಾಹನ ತಡೆದು ನಿಲ್ಲಿಸಿದ ಪೊಲೀಸ್ ಅಧಿಕಾರಿ ಕೆರೆ ಏರಿ ಸ್ವಚ್ಛಗೊಳಿಸುವಂತೆ ತಾಕೀತು ಮಾಡಿದ್ದಾರೆ. ನಿಯಮ ಮೀರಿ ವರ್ತಿಸಿದ ಜನರು ಬೇರೆ ದಾರಿ ಕಾಣದೆ ಕೆರೆ ಸುತ್ತಮುತ್ತ ಸ್ವಚ್ಛಗೊಳಿಸಲೇ ಬೇಕಾಯ್ತು.

ಲಾಕ್​ಡೌನ್​​ ಉಲ್ಲಂಘಿಸಿದವರಿಂದ ದೇವೀರಮ್ಮಣ್ಣಿ ಕೆರೆ ಸ್ವಚ್ಚ

ಅನವಶ್ಯಕವಾಗಿ ಬೈಕ್‌ನಲ್ಲಿ ಸಂಚಾರಿಸುತ್ತಿದ್ದವರಿಗೆ ಈ ಮೂಲಕ ಪೊಲೀಸ್‌ ಅಧಿಕಾರಿ ಮಾದರಿ ಶಿಕ್ಷೆ ನೀಡಿದರು.

ನಿಗದಿತ ಪ್ರದೇಶದ ಏರಿಯನ್ನು ಸ್ವಚ್ಚಗೊಳಿಸಿದ ನಂತರ ಸವಾರರಿಗೆ ಸ್ಥಳೀಯವಾಗಿ ದೊರೆಯುವ ಸ್ವಚ್ಚತಾ ಸಾಮಾಗ್ರಿಗಳನ್ನು ನೀಡಿ ನಂತರ ಬುದ್ಧಿ ಹೇಳಿ ಕಳುಹಿಸಿಕೊಟ್ಟಿದ್ದಾರೆ.

ಇವರ ಈ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.