ETV Bharat / state

ನಮ್ಮ ರಾಜ್ಯದ ನಿಲುವು ಸ್ಪಷ್ಟವಿದೆ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ - shobha karandlaje Spoke about Mekedatu project

ಕೈಗೆ ಸಿಗದ ದ್ರಾಕ್ಷಿ ಹುಳಿ ಅಂತಾರೆ. ಸಿದ್ದರಾಮಯ್ಯಗೆ ಅಧಿಕಾರ ಇಲ್ಲ. ಹಾಗಾಗಿ ಈ ರೀತಿ ಮಾತಾಡ್ತಾರೆ. ಆದ್ರೆ ನಮ್ಮ ಸರ್ಕಾರ ಇರುತ್ತೆ. ಒಳ್ಳೆಯ ಕೆಲಸ ಮಾಡುತ್ತೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

shobha-karandlaje
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
author img

By

Published : Aug 16, 2021, 4:02 PM IST

Updated : Aug 16, 2021, 4:35 PM IST

ಮಂಡ್ಯ: ನಮ್ಮ ಹಾಗೂ ನಮ್ಮ ರಾಜ್ಯದ ನಿಲುವು ಸ್ಪಷ್ಟವಿದೆ. ನ್ಯಾಯಾಧೀಕರಣದಲ್ಲಿ ತಮಿಳುನಾಡಿಗೆ ಎಷ್ಟು ನೀರು ಬಿಡಬೇಕು ಎಂಬುದು ನಿಗದಿಯಾಗಿದೆ. ಪ್ರತಿವರ್ಷ ಅದರಂತೆ ನೀರು ಬಿಡ್ತಿದ್ದೀವಿ ಎಂದು ಮೇಕೆದಾಟು ಯೋಜನೆಗೆ ತಮಿಳುನಾಡು ಕ್ಯಾತೆ ವಿಚಾರಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ ನೀಡಿದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಈ ಕುರಿತು ನಗರದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ನಮ್ಮ ರಾಜ್ಯದ ಯೋಜನೆ ಮಾಡೋದಕ್ಕೆ ಅವಕಾಶ ನೀಡಬೇಕು. ಅಲ್ಲದೇ, ಕಾವೇರಿಯಿಂದ ನೀರು ಬಿಡೋದನ್ನ ಯಾವ ಯೋಜನೆ ಮಾಡಿದ್ರು, ಮಾಡದಿದ್ದರೂ ತಪ್ಪಿಸಲು ಸಾಧ್ಯವಿಲ್ಲ ಎಂದರು.

ನಮ್ಮಲ್ಲಿ ನೀರಿನ ಕೊರತೆಯಾಗಿದ್ದರೂ ನೀರು ಕೊಟ್ಟಿದ್ದೀವಿ. ಮೇಕೆದಾಟು ಯೋಜನೆಯಿಂದ ನಮಗೂ ಅನುಕೂಲವಾಗುತ್ತೆ. ಅವರಿಗೂ ಅನುಕೂಲವಾಗಬಹುದು ಎಂದು ತಿಳಿಸಿದರು.

ಕೈಗೆ ಸಿಗದ ದ್ರಾಕ್ಷಿ ಹುಳಿ : ಬೊಮ್ಮಾಯಿ ಸರ್ಕಾರ ಹೆಚ್ಚು ದಿನ ಉಳಿಯಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಅವರು ಪ್ರತಿಕ್ರಿಯೆ ನೀಡಿದರು. ಕೈಗೆ ಸಿಗದ ದ್ರಾಕ್ಷಿ ಹುಳಿ ಅಂತಾರೆ. ಸಿದ್ದರಾಮಯ್ಯಗೆ ಅಧಿಕಾರ ಇಲ್ಲ. ಹಾಗಾಗಿ ಈ ರೀತಿ ಮಾತಾಡ್ತಾರೆ. ಆದ್ರೆ ನಮ್ಮ ಸರ್ಕಾರ ಇರುತ್ತೆ. ಒಳ್ಳೆಯ ಕೆಲಸ ಮಾಡುತ್ತೆ ಎಂದರು.

ಓದಿ: ಪಿಕ್ಚರು ಇಲ್ಲ, ರೀಲೂ ಇಲ್ಲ: ಸಚಿವ ಆನಂದ್ ಸಿಂಗ್ ಹೇಳಿಕೆಗೆ ಸೋಮಶೇಖರ್ ಟಾಂಗ್​​

Last Updated : Aug 16, 2021, 4:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.