ಮಂಡ್ಯ: ಶಾಲೆಗಳನ್ನು ತೆರೆಯದಂತೆ ಸರ್ಕಾರ ಆದೇಶ ಮಾಡಿದ್ದರೂ ಸಹ ಶಾಲಾ ಆಡಳಿತ ಮಂಡಳಿ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲಾ ಮಕ್ಕಳನ್ನು ಶಾಲೆಗೆ ಕರೆಸಿಕೊಂಡು ಪಾಠ ಮಾಡುವ ಮೂಲಕ ಸರ್ಕಾರದ ನಿಯಮ ಉಲ್ಲಂಘನೆ ಮಾಡಿದೆ.
ಕೊರೊನಾ ಎರಡನೇ ಅಲೆ ಹಾಗೂ ಬ್ರಿಟನ್ ವೈರಸ್ ಆತಂಕದ ನಡುವೆಯೂ ಶಾಲೆ ಆರಂಭದ ಗೊಂದಲದ ನಡುವೆಯೂ ಮಂಡ್ಯದ ಖಾಸಗಿ ಶಾಲೆಯೊಂದು ನಿಯಮ ಉಲ್ಲಂಘನೆ ಮಾಡಿದೆ. ಮಂಡ್ಯ ನಗರದ ಲಕ್ಷ್ಮೀ ಜನಾರ್ದನ ಶಾಲೆ ಓಪನ್ ಮಾಡಲಾಗಿದೆ. ಲಕ್ಷ್ಮೀ ಜನಾರ್ದನ ಶಾಲೆಗೆ ಅಂಜನಾ ಶ್ರೀಕಾಂತ್ ಅಧ್ಯಕ್ಷೆಯಾಗಿರುವುದಲ್ಲದೆ, ಮಂಡ್ಯ ಕಾಂಗ್ರೆಸ್ ಜಿಲ್ಲಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕಳೆದ 15 ದಿನಗಳಿಂದಲೂ ಶಾಲೆ ನಡೆಸುತ್ತಿದ್ದಾರಂತೆ. ಈ ಶಾಲೆ ಪಕ್ಕದಲ್ಲೇ ಡಿಡಿಪಿಐ ಕಚೇರಿ ಇದ್ದು, ಕಾಂಗ್ರೆಸ್ ಮುಖಂಡರ ಶಾಲೆ ಎನ್ನುವ ಕಾರಣಕ್ಕೆ ತಲೆ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.