ಮಂಡ್ಯ: ಜಿಲ್ಲಾದ್ಯಂತ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಸಂಭ್ರಮ ಸಡಗರದಿಂದ ಜರುಗಿತು.
ಸಕ್ಕರೆ ನಾಡು ಮಂಡ್ಯದಲ್ಲಿ ಹಸುಗಳಿಗೆ ಶೃಂಗಾರ ಮಾಡಿ, ಪೂಜೆ ಸಲ್ಲಿಸಿ, ರಸ್ತೆಯಲ್ಲಿ ಬೆಂಕಿ ಹಾಕಿ ಹಸುಗಳ ಕಿಚ್ಚಾಯಿಸಿದರು. ಹಸುಗಳನ್ನು ಕಿಚ್ಚಾಯಿಸುವ ಉದ್ದೇಶದಿಂದ ಕೆಲ ಸಮಯ ತುಮಕೂರು-ಮದ್ದೂರಿನ ಹೆದ್ದಾರಿ ಬಂದ್ ಮಾಡಲಾಗಿತ್ತು.
ಬಿಜೆಪಿ ಮುಖಂಡ ಹಾಗೂ ಮನ್ಮುಲ್ ನಿರ್ದೇಶಕ ಎಸ್ಪಿ ಸ್ವಾಮಿಯಿಂದ ಗೋ ಮಾತೇ ಪೂಜೆ ಮಾಡಿ ಹಸುಗಳ ಕಿಚ್ಚಾಯಿಸಿದರು. ಬಲೂನ್ ಗಳನ್ನು ಕಟ್ಟಿ, ಹಸುಗಳಿಗೆ ಅಲಂಕಾರ ಮಾಡಿ ಸಂಪ್ರದಾಯದಂತೆ ಸಂಕ್ರಾಂತಿ ಸಂಭ್ರಮಿಸಿದರು.