ಮಂಡ್ಯ: ಕೊರೊನಾ ಲಸಿಕಾಭಿಯಾನದಲ್ಲಿ ಕೆಲ ಅಧಿಕಾರಿಗಳು ಸೇರಿದಂತೆ ಸಾರ್ವಜನಿಕರು ಕೊರೊನಾ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿರುವ ಘಟನೆ ಜಿಲ್ಲೆಯ ಪಾಂಡವಪುರ ತಾಲೂಕಿನ ಕುಂತಿ ಬೆಟ್ಟದಲ್ಲಿ ನಡೆದಿದೆ. ಪಾಂಡವಪುರ ತಾಲೂಕು ಆಡಳಿತದಿಂದ ದೇವೇಗೌಡನಕೊಪ್ಪಲು, ಚಿಕ್ಕಾಡೆ ಹಾಗೂ ಪಟ್ಟಸೋಮನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನರಿಗೆ ಕೊರೊನಾ ಲಸಿಕಾ ಅಭಿಯಾನ ಆಯೋಜನೆ ಮಾಡಿತ್ತು.
ಈ ವೇಳೆ ಜನರು ಒಮ್ಮೆಲೆ ಆಗಮಿಸಿದ್ದರಲ್ಲದೇ, ಮಾಸ್ಕ್ ನಿಯಮ ಮರೆತು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಕೊರೊನಾ ನಿಯಮ ಉಲ್ಲಂಘನೆ ಮಾಡಿದ್ದಾರೆ. ಲಸಿಕೆ ಪಡೆಯಲು ಲಸಿಕಾ ಸ್ಥಳ ಕುಂತಿಬೆಟ್ಟಕ್ಕೆ ಆಗಮಿಸಿದ ಅಪಾರ ಸಂಖ್ಯೆಯ ಜನರ ನಡುವೆ ನೂಕುನುಗ್ಗಲು ಉಂಟಾಗಿತ್ತು. ಪರಸ್ಪರ ಸಾಮಾಜಿಕ ಅಂತರವೆನ್ನುವುದು ಇಲ್ಲಿ ಸಂಪೂರ್ಣ ಮಾಯವಾಗಿತ್ತು.
ಈ ವೇಳೆ ಸ್ಥಳದಲ್ಲಿದ್ದ ಇಒ, ತಾಲೂಕು ಆಡಳಿತ ಸೇರಿದಂತೆ ಯಾವ ಅಧಿಕಾರಿ ವರ್ಗವೂ ಕೂಡ ಕೋವಿಡ್ ನಿಯಾಮಾವಳಿಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಮುಂದಾಗಲಿಲ್ಲ ಎನ್ನುವ ದೂರು ಕೇಳಿಬಂತು.
ಇದನ್ನೂ ಓದಿ: ಬೆಂಗಳೂರಲ್ಲಿ ಹೊಸದಾಗಿ 1,297 ಕೇಸ್ ಪತ್ತೆ: ಪಾಸಿಟಿವಿಟಿ ದರ ಶೇ. 3ಕ್ಕೆ ಇಳಿಕೆ