ಮಂಡ್ಯ: ತೋಟದ ಮನೆಯಲ್ಲಿದ್ದ ದಂಪತಿಯನ್ನು ಬೆದರಿಸಿ ದರೋಡೆ ಮಾಡಿರುವ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಹರಳಕೆರೆ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.
ಮಂಡ್ಯದ ಕುಖ್ಯಾತ ರೌಡಿ ಅಶೋಕ್ ಪೈ ಸಂಬಂಧಿ ಮನೆಯಲ್ಲಿ ತಡರಾತ್ರಿ ದರೋಡೆ ನಡೆದಿದೆ. ರೌಡಿಶೀಟರ್ ಅಶೋಕ್ ಪೈ ತಂಗಿಯ ಗಂಡ ಅಶ್ವತ್ಥ್ ಮನೆಯಲ್ಲಿ ದುಷ್ಕರ್ಮಿಗಳು ದರೋಡೆ ನಡೆಸಿದ್ದಾರೆ.
ಮಾರಕಾಸ್ತ್ರಗಳೊಂದಿಗೆ ಬಂದ ದುಷ್ಕರ್ಮಿಗಳು ಅಶೋಕ್ ಪೈಗಾಗಿ ಹುಡುಕಾಟ ನಡೆಸಿದ್ದಾರೆ. ಪೈ ಸಿಗದೆ ಇದ್ದಾಗ ಮನೆಯಲ್ಲಿದ್ದವರನ್ನು ಬೆದರಿಸಿ ಮನೆಯಲ್ಲಿದ್ದ ಹಣ ಮತ್ತು ಆಭರಣಗಳನ್ನು ಕಸಿದು ಪರಾರಿಯಾಗಿದ್ದಾರೆ.
ಓದಿ: ಮಿನಿಸ್ಟರ್ ಅಂದ್ರೆ ದೇವಲೋಕದಿಂದ ಇಳಿದು ಬಂದವರಾ?: ಸ್ವಪಕ್ಷದವರ ವಿರುದ್ಧ ರೇಣುಕಾಚಾರ್ಯ ಕಿಡಿ
ಅಪರಿಚಿತ ದುಷ್ಕರ್ಮಿಗಳು 3 ಲಕ್ಷ ನಗದು, 250 ಗ್ರಾಂ ಆಭರಣಗಳನ್ನು ಕದ್ದೊಯ್ದಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಬೆರಳಚ್ಚು ತಜ್ಞರನ್ನು ಕರೆಸಿ ದುಷ್ಕರ್ಮಿಗಳ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ. ಸದ್ಯ ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.