ETV Bharat / state

ಗಡಿಪಾರಾಗಿದ್ದರೂ ಕೆಆರ್ ಪೇಟೆಗೆ ಬಂದ ರೌಡಿ.. ಸ್ಕೆಚ್ ಹಾಕಿ ದೇವಾಲಯದಲ್ಲೇ ಹೊಡೆದ ದುಷ್ಕರ್ಮಿಗಳು - ಮಂಡ್ಯ ಅಪರಾಧ ಸುದ್ದಿ

ಕೆಆರ್ ಪೇಟೆಯ ಈಶ್ವರ ದೇವಾಲಯದಲ್ಲೇ ಕುಖ್ಯಾತ ರೌಡಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

rowdy murder
ರೌಡಿ ಹತ್ಯೆ
author img

By

Published : Jun 27, 2022, 1:14 PM IST

Updated : Jun 27, 2022, 2:32 PM IST

ಮಂಡ್ಯ: ಹಾಡಹಗಲೇ ಕುಖ್ಯಾತ ರೌಡಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಂಡ್ಯ ತಾಲೂಕಿನ ಕೆಆರ್ ಪೇಟೆ ನಗರದ ಈಶ್ವರ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ರೌಡಿಶೀಟರ್ ಅರುಣ್ ಅಲಿಯಾಸ್​ ಅಲ್ಲು (38) ಕೊಲೆಯಾದ ರೌಡಿ.

ಅರುಣ್ ಗಡಿಪಾರಾಗಿದ್ರೂ ಕೆ.ಆರ್.ಪೇಟೆಗೆ ಬಂದು, ಬೆಳಗ್ಗೆ ಈಶ್ವರ ದೇವಸ್ಥಾನಕ್ಕೆ ತೆರಳಿದ್ದರು. ಈ ವೇಳೆ, ಐವರು ದುಷ್ಕರ್ಮಿಗಳು ಸ್ಕೆಚ್ ಹಾಕಿ ದೇಗುಲದಲ್ಲೇ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾರೆ. ಹಳೆಯ ದ್ವೇಷವೇ ಕೊಲೆಗೆ ಕಾರಣ ಎನ್ನಲಾಗುತ್ತಿದೆ.

ಅರುಣ್ ಮೇಲೆ ಕೊಲೆ, ಅಪಹರಣ, ಕೊಲೆ ಬೆದರಿಕೆ, ಹಫ್ತಾ ವಸೂಲಿ ಸೇರಿದಂತೆ ಹಲವು ಪ್ರಕರಣಗಳಿದ್ದವು. ಅರುಣ್ ಜೈಲಿನಲ್ಲಿದ್ದಾಗಲೇ ಅಧಿಕಾರಿಯ ಸಹಾಯ ಪಡೆದು ಓರ್ವ ವ್ಯಕ್ತಿಯ ಅಪಹರಣ ಮಾಡಿದ್ದ. ಈ ಪ್ರಕರಣದಲ್ಲಿ ಜೈಲು ಅಧಿಕಾರಿಗೂ ಶಿಕ್ಷೆಯಾಗಿತ್ತು. ಸ್ಥಳೀಯ ಜನಪ್ರತಿನಿಧಿಗಳಿಂದಲೂ ಹಫ್ತಾ ವಸೂಲಿ ಮಾಡುತ್ತಿದ್ದ ಆರೋಪ ಅರುಣ್ ಮೇಲಿತ್ತು. ಅಂತೆಯೇ ಜೈಲಿನಿಂದ ಬಿಡುಗಡೆಯಾದ ಬಳಿಕ ಪೊಲೀಸರು, ಅರುಣ್​ನನ್ನು ಗಡಿಪಾರು ಮಾಡಿದ್ದರು.

ರೌಡಿ ಕೊಲೆ

ಕೆ.ಆರ್.ಪೇಟೆ ಕಾರ್ಪೊರೇಟರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

(ಇದನ್ನೂ ಓದಿ: ಹಿಮಾಲಯಕ್ಕೆ ಟ್ರಕ್ಕಿಂಗ್ ಹೋಗಿದ್ದ ವೈದ್ಯ ನಾಪತ್ತೆ: ಹೈಗ್ರೌಂಡ್ಸ್ ಠಾಣೆಗೆ ದೂರು ನೀಡಿದ ಕುಟುಂಬಸ್ಥರು)

Last Updated : Jun 27, 2022, 2:32 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.