ETV Bharat / state

ಕೊರೊನಾ ವೈರಸ್ ನಾಶಕ್ಕೆ​​​ ರೋಬೊ ಆವಿಷ್ಕಾರ; ಸುಧಾರಣೆ ಕಂಡರೆ ಮತ್ತಷ್ಟು ಪ್ರಯೋಜನ

ಮಂಡ್ಯ ಜಿಲ್ಲೆಯ ಪ್ರಗತಿಪರ ರೈತ ಮಂಜೇಗೌಡ ಎಂಬಾತ ಆಯುರ್ವೇದ ಮೂಲಕ ವೈರಸ್ ನಾಶಕ್ಕೆ ರೋಬೊವೊಂದನ್ನು ಆವಿಷ್ಕರಿಸಿದ್ದಾರೆ.

robo
ಯಂತ್ರ ವೀಕ್ಷಿಸಿದ ಸಚಿವ
author img

By

Published : Jun 8, 2020, 1:18 PM IST

ಮಂಡ್ಯ: ಎಲ್ಲರ ನಿದ್ದೆಗೆಡಿಸಿರುವ ಕೊರೊನಾ ವೈರಸ್‌ಗೆ ಔಷಧ ಕಂಡು ಹಿಡಿಯಲು ವಿಶ್ವದಾದ್ಯಂತ ವಿಜ್ಞಾನಿಗಳು, ತಜ್ಞರು ಹಗಲಿರುಳು ಶ್ರಮಿಸುತ್ತಿದ್ದಾರೆ. ಈ ನಡುವೆ ಜಿಲ್ಲೆಯ ಪ್ರಗತಿಪರ ರೈತರೊಬ್ಬರು ಆಯುರ್ವೇದ ಮೂಲಕ ವೈರಸ್ ನಾಶಕ್ಕೆ ರೋಬೊವೊಂದನ್ನು ಆವಿಷ್ಕರಿಸಿದ್ದಾರೆ.

ಕೋಮೆನಹಳ್ಳಿಯ ಮಂಜೇಗೌಡ ಅವರು ರೋಬೋ ಆವಿಷ್ಕರಿಸಿರುವ ರೈತ. ಕೆ.ಆರ್. ಪೇಟೆಯ ಪ್ರವಾಸಿ ಮಂದಿರದಲ್ಲಿಟ್ಟಿದ್ದ ಪ್ರಾತ್ಯಕ್ಷಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ವೀಕ್ಷಿಸಿದರು.

ಹೇಗಿದೆ ಅದರ ಕೆಲಸ?: ನೈಸರ್ಗಿಕವಾಗಿ ಸಿಗುವ ಪುದೀನಾ ಸೊಪ್ಪು, ಬೇವು, ಶುಂಠಿ ಹಾಗೂ ಕೊಬ್ಬರಿ ಎಣ್ಣೆಯನ್ನು ಹಾಕಿ ಯಂತ್ರದೊಳಗೆ ಹಾಯಿಸಬೇಕು. ನಂತರ ಅದರಿಂದ ಹೊರ ಬರುವ ಆವಿ ನೇರವಾಗಿ ಮೂಗಿಗೆ ಅಳವಡಿಸಿರುವ ಮಾಸ್ಕ್ ಮೂಲಕ ಬಾಯಿಗೆ ಸೇರಲಿದೆ. ಆವಿ ದೇಹದೊಳಗೆ ಪ್ರವೇಶಿಸಿದಾಗ ವೈರಸ್​ ಅ​ನ್ನು ಕೊಲ್ಲಲಿದೆ. ಮಿನಿ ಐಸಿಯು ರೀತಿಯಾಗಿಯೂ ಈ ಯಂತ್ರ ಕಾರ್ಯನಿರ್ವಹಣೆ ಮಾಡಲಿದೆ ಎಂದು ಸಚಿವರಿಗೆ ವಿವರಿಸಿದರು.

ರೋಬೊ ಆವಿಷ್ಕಾರ

ಎಸ್ಎಸ್​ಎಲ್​​ಸಿ ಓದಿರುವ ಮಂಜೇಗೌಡರ ಸಾಧನೆಗೆ ಸಚಿವರೂ ಸೇರಿದಂತೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಂತ್ರವನ್ನು ಮತ್ತಷ್ಟು ಅಭಿವೃದ್ಧಿಪಡಿಸಿದರೆ ಉಪಯೋಗಕ್ಕೆ ಬರಬಹುದು ಎಂಬ ಮಾತುಗಳೂ ಕೇಳಿ ಬಂದಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.