ETV Bharat / state

ಮಂಡ್ಯದಲ್ಲಿ ಮೋದಿ ರೋಡ್ ಶೋಗೆ ಸಿದ್ಧತೆ: ಸಿದ್ದರಾಮಯ್ಯ ವಿರುದ್ಧ ಪ್ರತಾಪ್ ಸಿಂಹ ವ್ಯಂಗ್ಯ - ಸಚಿವ ಎಸ್ ಟಿ ಸೋಮಶೇಖರ್

ಮಾರ್ಚ್ 12ಕ್ಕೆ ಪ್ರಧಾನಿ ನರೇಂದ್ರ ಮೋದಿ ಮಂಡ್ಯಕ್ಕೆ ಭೇಟಿ ಹಿನ್ನೆಲೆಯಲ್ಲಿ ಮದ್ದೂರಿನ ಗೆಜ್ಜಲಗೆರೆ ಬಳಿ ಬೃಹತ್ ವೇದಿಕೆ ನಿರ್ಮಾಣವಾಗುತ್ತಿದೆ. ಸಿದ್ಧತೆ ಬಗ್ಗೆ ಸಚಿವ ಎಸ್.ಟಿ.ಸೋಮಶೇಖರ್, ಪ್ರತಾಪ್ ಸಿಂಹ, ನಾರಾಯಣ್ ಗೌಡ ಪರಿಶೀಲನೆ ನಡೆಸಿದರು.

Readiness for Modi road show in Mandya
ಮದ್ದೂರಿನ ಗೆಜ್ಜಲಗೆರೆಯಲ್ಲಿ ಮಾಧ್ಯಮದವರ ಜೊತೆ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿದರು.
author img

By

Published : Mar 9, 2023, 8:24 PM IST

ಮದ್ದೂರಿನ ಗೆಜ್ಜಲಗೆರೆಯಲ್ಲಿ ಮಾಧ್ಯಮದವರ ಜೊತೆ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿದರು.

ಮಂಡ್ಯ: ಮಾರ್ಚ್ 12ಕ್ಕೆ ಪ್ರಧಾನಿ ನರೇಂದ್ರ ಮೋದಿ ಮಂಡ್ಯಕ್ಕೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಮದ್ದೂರಿನ ಗೆಜ್ಜಲಗೆರೆ ಬಳಿ ಬೃಹತ್ ವೇದಿಕೆ ನಿರ್ಮಾಣವಾಗ್ತಿದೆ. ವೇದಿಕೆಯ ಸಿದ್ಧತೆ ಬಗ್ಗೆ ಸಚಿವ ಎಸ್.ಟಿ.ಸೋಮಶೇಖರ್, ಪ್ರತಾಪ್ ಸಿಂಹ, ನಾರಾಯಣ್ ಗೌಡ ಪರಿಶೀಲಿಸಿದರು. ಇದೇ ವೇಳೆ, ಮಾಧ್ಯಮದವರ ಜೊತೆ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿದರು, ಮಾ.12ರಂದು ಫಲಾನುಭವಿಗಳ ಸಮಾವೇಶ ನಡೆಯಲಿದೆ. ಫಲಾನುಭವಿಗಳ ಜೊತೆ ಪ್ರಧಾನಿ ಮೋದಿ ಸಂವಾದ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಡಿಸಿಸಿ ಬ್ಯಾಂಕ್​ಗೆ 1,004 ಕೋಟಿ ರೂ. ಟಾರ್ಗೆಟ್ ಕೊಡಲಾಗಿತ್ತು. ಕಂಪ್ಲಿಟ್ ಮಾಡಲು ಸೂಚನೆ ಕೊಟ್ಟಿದ್ದೇವೆ. ಕೇಂದ್ರ ರಾಜ್ಯ ಸರ್ಕಾರದ ಫಲನುಭವಿಗಳ ಸಮಾವೇಶ ಮಾಡ್ತೇವೆ‌. ಪ್ರಧಾನಿ ಮೋದಿ ಮೈಸೂರಿಗೆ ಬಂದ ಸಂದರ್ಭದಲ್ಲಿ ಫಲಾನುಭವಿ ಸಮಾವೇಶ ನಡೆದಿತ್ತು. ಫಲಾನುಭವಿಗಳ ಜೊತೆ ಮೋದಿ ಸಂವಾದ ಮಾಡಿದ್ದರು. ಪ್ರತಿ ಜಿಲ್ಲೆಯಲ್ಲಿ ಸಮಾವೇಶ ಮಾಡ್ತೇವೆ. ಕೇಂದ್ರ ರಾಜ್ಯ ಸರ್ಕಾರದ ಯೋಜನೆ ಬಗ್ಗೆ ಮಾಹಿತಿಯಿದೆ ಎಂದು ಸಚಿವ ಸೋಮಶೇಖರ್​ ಹೇಳಿದರು.

ಡಿಸಿ ನೇತೃತ್ವದಲ್ಲಿ ಸಮಾವೇಶ: ಪ್ರತಿಶತದಲ್ಲಿ ಸಾಲ ಸೌಲಭ್ಯ. 40 ಸಾವಿರ ಜನರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ. 2 ಲಕ್ಷ ಜನರು ಬರುವ ವ್ಯವಸ್ಥೆ ಮಾಡ್ತೇವೆ. ಮಂಡ್ಯದಲ್ಲಿ ಫಲಾನುಭವಿಗಳ ಸಮಾವೇಶ ಯಶಸ್ವಿಯಾಗಿ ನಡೆಯುತ್ತೆ ಎಂದರು. ಸಂಸದ ಪ್ರತಾಪ್ ಸಿಂಹ ಮಾತನಾಡಿದ ಅವರು, ಮಾ.12ರ ಬೆಳಿಗ್ಗೆ ಮೈಸೂರು ಏರ್‌ಪೋರ್ಟ್‌ಗೆ ಮೋದಿ ಆಗಮಿಸಲಿದ್ದಾರೆ. ಹೆಲಿಕಾಪ್ಟರ್ ಮೂಲಕ ಮಂಡ್ಯ ಪಿಇಎಸ್ ಕಾಲೇಜು ಹೆಲಿಪ್ಯಾಡ್‌‌ಗೆ ಬಂದಿಳಿಯುತ್ತಾರೆ.

ಬೆಳಗ್ಗೆ 11.35ಕ್ಕೆ ಪಿಇಎಸ್ ಕಾಲೇಜು ಹೆಲಿಪ್ಯಾಡ್‌ಗೆ ಬರಲಿರುವ ಮೋದಿ. ಬಳಿಕ ಐಬಿ ಸರ್ಕಲ್‌ನಿಂದ ರೋಡ್ ಶೋ ಆರಂಭ. ನಂದಾ ಸರ್ಕಲ್ ವರೆಗೂ ಸುಮಾರು 1.8 ಕಿ.ಮೀ ರೋಡ್ ಶೋ ಹೆದ್ದಾರಿಯಲ್ಲಿ ನಿಂತು ಕೆಲಕಾಲ ಹೈವೆ ವೀಕ್ಷಿಸಲಿರುವ ಪ್ರಧಾನಿ ಮೋದಿ ನೂತನ ಹೆದ್ದಾರಿಯಲ್ಲಿ ನಮೋಗೆ ಕಲಾ ತಂಡಗಳ ಸ್ವಾಗತ ಮಾಡಲಾಗುವುದು. 12.05 ಕ್ಕೆ ಸಾರ್ವಜನಿಕ ಕಾರ್ಯಕ್ರಮ ಆರಂಭವಾಗಲಿದೆ. ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌‌ ವೇಗೆ ಮೋದಿ ಚಾಲನೆ ನೀಡಲಿದ್ದಾರೆ. ಒಟ್ಟಾರೆ ಕಾರ್ಯಕ್ರಮದಲ್ಲಿ 3 ಲಕ್ಷ ಜನ ಸೇರುವ ನಿರೀಕ್ಷೆಯಿದೆ. ವಾಪಸ್ ತೆರಳಲು ಪ್ರತ್ಯೇಕ ಹೆಲಿಪ್ಯಾಡ್‌ ವ್ಯವಸ್ಥೆ ಮಾಡಲಾಗಿದೆ. ಹೆಲಿಕಾಪ್ಟರ್ ಮೂಲಕ ಹುಬ್ಬಳ್ಳಿ- ಧಾರವಾಡಕ್ಕೆ ಮೋದಿ ಪ್ರಯಾಣ ಮಾಡ್ತಾರೆ ಎಂದು ಮಾಹಿತಿ ನೀಡಿದರು.

ಕಾಂಗ್ರೆಸ್​ಗೆ ಸವಾಲು ಹಾಕಿದ ಪ್ರತಾಪ್ ಸಿಂಹ: ಇದೇ ವೇಳೆ, ಮೋದಿ ಬರುವ ದಿನ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ವಿಚಾರ ಬಗ್ಗೆ ಮಾತನಾಡಿದ ಅವರು, ಸಿದ್ದು, ಡಿಕೆ ಜೊತೆ ರಾಹುಲ್, ಸೋನಿಯಾ ಗಾಂಧಿ ಬರಲಿ ಶಕ್ತಿ ಪ್ರದರ್ಶನ ಮಾಡೋಣಾ. ಮಂಡ್ಯದಲ್ಲಿ ಕಾಂಗ್ರೆಸ್ - ಬಿಜೆಪಿ ಶಕ್ತಿ ಪ್ರದರ್ಶನಕ್ಕೆ ಆಹ್ವಾನ‌ ಕೊಟ್ಟು ಶಕ್ತಿ ಪ್ರದರ್ಶನಕ್ಕೆ ಕಾಂಗ್ರೆಸ್​ಗೆ ಸಂಸದ ಪ್ರತಾಪ್ ಸಿಂಹ ಸವಾಲು ಹಾಕಿದರು. ಮೋದಿ ಜಗದೇಕ ವೀರ ಅವರ ಎದುರು ಯಾವ ಕಾಂಗ್ರೆಸ್, ರಾಹುಲ್ ಗಾಂಧಿ ನಿಲ್ಲೋದಿಲ್ಲ. ಅದೇ ದಿನ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಕರೆದುಕೊಂಡು ಬರಲಿ ಎಂದರು.

ಮಾಜಿ ಸಿಎಂ ಸಿದ್ದು ವಿರುದ್ದ ವ್ಯಂಗ್ಯ: ಮಾಜಿ ಸಿಎಂ ಸಿದ್ದು ವಿರುದ್ದ ಪ್ರತಾಪ್ ಸಿಂಹ ವ್ಯಂಗ್ಯವಾಡಿದರು. ವೀಕ್ಷಣೆಗೂ ಜಾಲಿರೇಡ್​ಗೂ ಬಹಳ ವ್ಯತ್ಯಾಸವಿದೆ. ಕಾಮಗಾರಿ ಪ್ರಗತಿಯಲ್ಲಿದ್ದಾಗ ನ್ಯೂನತೆಗಳು, ಲೋಪಗಳು ಇದೆಯಾ? ಅವಾಗ ಬಂದ್ರೆ ಅದು ವೀಕ್ಷಣೆ. ರೋಡ್ ಕಂಪ್ಲೀಟ್ ಆಗಿ ಉದ್ಘಾಟನೆಗೆ ಮುಂಚೆ ಬಂದ್ರೆ ಅದು ಜಾಲಿರೇಡ್. ಇವತ್ತು ಬಂದಿದ್ದಾರೆ ಅಂದ್ರೆ, ಅದು ಜಾಲಿ ರೇಡ್​ಗೆ ಬರ್ತಾರೆ ಅಷ್ಟೆ. ಮೈಸೂರಲ್ಲಿ ಮತ್ತೆ ಬರ್ತಿದ್ದಾರೆ. ಕೋಲಾರದಲ್ಲಿ ನೆಲೆ ಸಿಗುತ್ತೊ ಏನೋ ಡೌಟ್ ಇದೆ. ವಾಪಸ್​ ವರುಣಕ್ಕೆ ಹೋಗಬೇಕು ಅವರು. ಈ ರಸ್ತೆಯಲ್ಲಿ ಓಡಾಡ್ತಿದ್ದಾರೆ ಅದಕ್ಕೆ ಜಾಲಿ ರೇಡ್​ಗೆ ಬರ್ತಾರೆ. ಸಿದ್ದರಾಮಯ್ಯ ಅವರ ಬಗ್ಗೆ ತಲೆ ಕೆಡಿಸಿ ಕೊಳ್ಳಬೇಡಿ ಎಂದು ಹೇಳಿದರು.

'ಕಾವೇರಿ ಎಕ್ಸ್‌ಪ್ರೆಸ್‌ ವೇ' ನಾಮಕರಣಕ್ಕೆ ಮನವಿ: ಮೈಸೂರು-ಬೆಂಗಳೂರು ಹೆದ್ದಾರಿಗೆ ಕಾವೇರಿ ಎಕ್ಸ್‌ಪ್ರೆಸ್‌ ವೇ ಎಂದು ನಾಮಕರಣ ಮಾಡಲು ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದರು. ಬೆಂಗಳೂರು ಮೈಸೂರು ದಶಪಥ ಹೆದ್ದಾರಿಗೆ ಹೆಸರಿಡುವ ಬಗ್ಗೆ ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ. ಹಲವು ಮಂದಿ ಜನರ ದಿಕ್ಕು ತಪ್ಪಿಸಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಹೇಳಿದರು.

ಕಾವೇರಿ ನದಿಯಿಂದ ಮಂಡ್ಯ ಶ್ರೀಮಂತವಾಗಿದೆ.‌ ಬೆಂಗಳೂರು ಜನ ಬದುಕುತ್ತಿದ್ದರೆ. ಮೈಸೂರು ಚೆನ್ನಾಗಿರಲು ಕಾವೇರಿ ತಾಯಿ ಕಾರಣ. ಕಾವೇರಿ ಹೆಸರಿಡಲೂ ಹೆಸರು ಸೂಚಿಸಿದ್ದೆ. ಕೆಲವು ರಾಜಕಾರಣಿಗಳು ವ್ಯಕ್ತಿಗಳ ಹೆಸರಿಡಲು ಒತ್ತಾಯಿಸಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರನ್ನು ಮೈಸೂರು ವಿಮಾನ ನಿಲ್ದಾಣಕ್ಕೆ ಇಡುತ್ತಿದ್ದೇವೆ. ಮೈಸೂರು ವಿಶ್ವ ದರ್ಜೆಯ ವಿಮಾನ ನಿಲ್ದಾಣವಾಗಿ ಮಾರ್ಪಡುತ್ತದೆ. ವಿಮಾನ ನಿಲ್ದಾಣ ಅಭಿವೃದ್ದಿಗೆ 319 ಕೋಟಿ ಸರ್ಕಾರ ಕೊಟ್ಟಿದೆ. ರೈಲು‌ ನಿಲ್ದಾಣಕ್ಕೆ ಚಾಮರಾಜ ಒಡೆಯರ್ ಹೆಸರು ಇಡಲಾಗಿದೆ ಎಂದರು.

ಇದನ್ನೂ ಓದಿ: ಸಂಸದೆ ಸುಮಲತಾ ಬಿಜೆಪಿ ಸೇರುವ ಮಾತುಕತೆ ನಡೆದಿದೆ: ಸಿಎಂ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.