ಮಂಡ್ಯ: ಲಾಕ್‌ಡೌನ್‌ನಿಂದಾಗಿ ಮಾರಾಟ ಮಾಡಲು ಸಾಧ್ಯವಾಗದೇ ತೋಟದಲ್ಲೇ ಬಿಟ್ಟಿದ್ದ ಟೊಮೇಟೊ ಫಸಲನ್ನು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ಖರೀದಿಸಿದ್ದಾರೆ. ಮಂಡ್ಯ ತಾಲೂಕಿನ ಬಿಳಿದೇಗಲು ಗ್ರಾಮದ ರೈತ ಗೋಪಾಲಗೌಡ ಒಂದು ಎಕರೆ ಟೊಮೇಟೊ ಬೆಳೆದಿದ್ದರು. ಆದರೆ, ಲಾಕ್‌ಡೌನ್‌ನಿಂದಾಗಿ ಟೊಮೇಟೊವನ್ನು ಮಾರಾಟ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಫಸಲನ್ನು ಗಿಡದಲ್ಲೇ ಬಿಟ್ಟಿದ್ದರು.ಈಗ ರಕ್ಷಾ ರಾಮಯ್ಯ 50 ಸಾವಿರ ರೂ. ನೀಡಿ ಫಸಲು ಖರೀದಿಸಿದ್ದಾರೆ.
ಬಳಿಕ ಮಾತನಾಡಿದ ಅವರು, ಕೋವಿಡ್ ವೇಳೆ ರೈತರ ಬೆಳೆಗಳನ್ನು ಸರ್ಕಾರ ಖರೀದಿಸಿ ಸ್ಪಂದಿಸಬೇಕಾಗಿತ್ತು.ರೈತರು ಸಂಕಷ್ಟದಲ್ಲಿದ್ದು ನೆರವು ನೀಡಬೇಕಿದೆ. ಯೂತ್ ಕಾಂಗ್ರೆಸ್ನಿಂದ ರೈತರ ಬೆಳೆಯನ್ನ ರಾಜ್ಯಾದ್ಯಂತ ಖರೀದಿ ಮಾಡಲಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ರೈತರ ಪರ ನಿಲ್ಲುವುದು ನಮ್ಮ ಕರ್ತವ್ಯವಾಗಿದೆ. ಆದರೆ, ಸರ್ಕಾರ ರೈತರ ಬಗ್ಗೆ ನಿರ್ಲಕ್ಷ್ಯ ತೋರಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಶಾಸಕರು ಸಚಿವರು ಮುಖ್ಯಮಂತ್ರಿ ಬದಲಾವಣೆ ಮಾಡಲು ಹೊರಟಿದ್ದಾರೆ. ದೆಹಲಿಗೆ ಹೋಗುವ ಬದಲು ರೈತರ ಪರ ಕೆಲಸ ಮಾಡಲಿ. ಈ ಸಂದರ್ಭದಲ್ಲಿ ರಾಜಕಾರಣ ಮಾಡುವುದಕ್ಕೆ ಹೋದರೆ ಜನರೆ ಈ ಬಿಜೆಪಿ ಸರ್ಕಾರಕ್ಕೆ ಪಾಠ ಕಲಿಸುತ್ತಾರೆ ಎಂದು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು. ನಂತರ ಕೆರಗೋಡು ಪೊಲೀಸ್ ಠಾಣೆಗೆ ಭೇಟಿ ನೀಡಿ ಗಿಡ ನೆಟ್ಟು ಪೊಲೀಸ್ ಸಿಬ್ಬಂದಿಗೆ ಸ್ಯಾನಿಟೈಸರ್, ಮಾಸ್ಕ್ ಹಾಗೂ ಫೇಸ್‌ಶೀಲ್ಡ್ ವಿತರಿಸಿದರು.
ಓದಿ:ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟು ಮಾಡುವವರ ವಿರುದ್ಧ ಕಠಿಣ ಕ್ರಮ: ಅರುಣ್ ಸಿಂಗ್ ಖಡಕ್ ಎಚ್ಚರಿಕೆ