ಮಂಡ್ಯ: ಮದ್ಯ ಸೇವಿಸಿದ ಮತ್ತಿನಲ್ಲಿ ಕ್ಷುಲ್ಲಕ ವಿಚಾರಕ್ಕೆ ಸ್ನೇಹಿತರಿಬ್ಬರ ನಡುವೆ ಆರಂಭವಾದ ಜಗಳ, ಓರ್ವನ ಕೊಲೆಯಲ್ಲಿ ಮುಕ್ತಾಯಗೊಂಡ ಘಟನೆ ಮಂಡ್ಯದ ಅರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಶ್ರೀರಂಗಪಟ್ಟಣ ತಾಲೂಕಿನ ಚನ್ನಹಳ್ಳಿ ಗ್ರಾಮದ ಕುಮಾರ (30) ಕೊಲೆಯಾದ ದುರ್ದೈವಿ. ಅದೇ ಗ್ರಾಮದ ಮಹದೇವು ಕೊಲೆಗೈದ ಕುಮಾರನ ಸ್ನೇಹಿತ. ಮಹದೇವು ಮನೆಯಲ್ಲಿ ಇಬ್ಬರು ಮದ್ಯ ಸೇವಿಸಿದ ವೇಳೆ ಜಗಳವಾಗಿ ಮಹದೇವು ಕುಮಾರನಿಗೆ ಬಾಟಲಿ ಮತ್ತು ರಾಡ್‌ನಿಂದು ಹೊಡೆದಿದ್ದಾನೆ.

ಈ ಸಂಬಂಧ ಅರೆಕೆರೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.