ETV Bharat / state

ರಸ್ತೆ ದುರಸ್ತಿಗೆ ಮುಂದಾಗದ ಜನಪ್ರತಿನಿಧಿಗಳು..ಸ್ವಂತ ಖರ್ಚಿನಲ್ಲಿ ಕಾಮಗಾರಿ ಆರಂಭಿಸಿದ ಗ್ರಾಮಸ್ಥರು - ಮಂಡ್ಯ ಸಂಸದೆ ಸುಮಲತಾ

ಚುನಾವಣೆ ಬಂತೆಂದರೆ ನೂರಾರು ಆಶ್ವಾಸನೆಯೊಂದಿಗೆ ಬೀದಿಗೆ ಬರುವ ಜನಪ್ರತಿನಿಧಿಗಳು ಚುನಾವಣೆ ಬಳಿಕ ನಾಪತ್ತೆಯಾಗುತ್ತಾರೆ. ಗ್ರಾಮದ ರಸ್ತೆ ಸರಿಪಡಿಸುವಂತೆ ಮನವಿ ಮಾಡಿ ವರ್ಷಗಳು ಕಳೆದರೂ ಜನಪ್ರತಿನಿಧಿಗಳು ತಲೆಹಾಕದ ಹಿನ್ನೆಲೆ ಹದಗೆಟ್ಟ ರಸ್ತೆಯನ್ನ ಗ್ರಾಮಸ್ಥರೇ ದುರಸ್ತಿಗೆ ಮುಂದಾಗಿದ್ದಾರೆ.

road construction
ಸ್ವಂತ ಖರ್ಚಿನಲ್ಲಿ ಕಾಮಗಾರಿ ಆರಂಭಿಸಿದ ಗ್ರಾಮಸ್ಥರು
author img

By

Published : Sep 3, 2021, 12:28 PM IST

ಮಂಡ್ಯ: ಆ ಗ್ರಾಮದ ರಸ್ತೆ ಸಂಪೂರ್ಣ ಹದಗೆಟ್ಟು ವಾಹನಗಳು ಓಡಾಡೋದು ಇರಲಿ ಜನ, ಜಾನುವಾರುಗಳು ನಡೆದುಕೊಂಡು ಹೋಗೋಕು ಹರಸಾಹಸ ಪಡುತ್ತಿದ್ರು. ರಸ್ತೆ ಸರಿಪಡಿಸಿ ಅಂತಾ ರಾಜಕಾರಣಿಗಳಿಗೆ ಕೈ ಮುಗಿದು ಬೇಡಿಕೊಂಡಿದ್ದು ಆಯ್ತು. ಆದರೆ ಯಾರು ಇತ್ತಕಡೆ ತಿರುಗಿಯೂ ನೋಡಿಲ್ಲ. ಹೀಗಾಗಿ ಬೇಸತ್ತ ಗ್ರಾಮಸ್ಥರು ತಾವೇ ಮುಂದೆ ಬಂದು ರಸ್ತೆ ಕಾಮಗಾರಿ ಆರಂಭಿಸಿದ್ದಾರೆ.

ಸ್ವಂತ ಖರ್ಚಿನಲ್ಲಿ ರಸ್ತೆ ಕಾಮಗಾರಿ ಆರಂಭಿಸಿದ ಗ್ರಾಮಸ್ಥರು

ಜಿಲ್ಲೆಯ ಮದ್ದೂರು ತಾಲೂಕಿನ ಬ್ಯಾಲದಕೆರೆ ಗ್ರಾಮದಲ್ಲಿ ಗ್ರಾಮಸ್ಥರೇ ಚಂದಾವಸೂಲಿ ಮಾಡಿ ಹಣ ಹೊಂದಿಸಿಕೊಂಡು ರಸ್ತೆ ಕಾಮಗಾರಿಗೆ ಮುಂದಾಗಿದ್ದಾರೆ. ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಲಿಸುವ ಹಾಗೂ ಕೃಷಿ ಚಟುವಟಿಕೆಗೆ ಸಹಕಾರಿಯಾಗಿರುವ ರಸ್ತೆಯಾಗಿದ್ದರಿಂದ ಗ್ರಾಮಸ್ಥರು ಕೂಡ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಶಾಸಕ ಡಿಸಿ ತಮ್ಮಣ್ಣ ಬಳಿ ಹಲವಾರು ಬಾರಿ ಮನವಿ ಮಾಡಿಕೊಂಡಿದ್ದರು.

ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ, ಅಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಬಳಿ ಸಹ ರಸ್ತೆ ಸರಿಪಡಿಸಿಕೊಡುವಂತೆ ಮನವಿ ಮಾಡಿದ್ದರು. ಆದರೆ, ವರ್ಷಗಳು ಕಳೆದರೂ ಜನಪ್ರತಿನಿಧಿಗಳು ಈ ಕಡೆ ಸುಳಿದಿರಲಿಲ್ಲ. ಹೀಗಾಗಿ ಜನರೇ ಒಟ್ಟಾಗಿ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಸುಮಾರು 2 ರಿಂದ 3 ಲಕ್ಷ ರೂ. ವೆಚ್ಚದಲ್ಲಿ 1 ಕಿ.ಮೀಗೂ ಹೆಚ್ಚು ಉದ್ದದ ರಸ್ತೆ ಕಾಮಗಾರಿ ಕಳೆದೊಂದು ವಾರದಿಂದ ನಡೆಯುತ್ತಿದೆ. ಗುತ್ತಿಗೆದಾರರಿಗೆ ಕೆಲಸ ವಹಿಸಿದರೆ ವೆಚ್ಚ ಹೆಚ್ಚಾಗುವ ಕಾರಣ ಗ್ರಾಮದ ರೈತರೇ ರಸ್ತೆ ಕಾಮಗಾರಿ ಮಾಡುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.